ಆ್ಯಪ್ನಗರ

ನಟ ಪ್ರಕಾಶ್ ರೈ ವಿರುದ್ಧ ದಾಖಲಾಗಿದೆ ಕಂಪ್ಲೇಂಟ್!

ಪ್ರಕಾಶ್ ರಾಜ್ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಹೊಂದಿದ್ದಾರೆ. ಅಲ್ಲದೇ, ಅವರು ಚುನಾವಣಾ ಆಯೋಗಕ್ಕೆ 'ನಾನು ಕೇವಲ ಒಂದು ಕಡೆ ಮಾತ್ರ ಮತದಾನದ ಹಕ್ಕು ಹೊಂದಿದ್ದೇನೆ' ಎಂದು ಅಫಿಡೆವಿಟ್ ನೀಡಿದ್ದಾರೆ.

Vijaya Karnataka Web 28 Mar 2019, 9:24 pm
ಮುಂಬರುವ ಲೋಕಸಭಾ ಚುನಾವಣೆಯ ಕಾವು ದೇಶದೆಲ್ಲೆಡೆ ಮಾತ್ರವಲ್ಲ, ನಮ್ಮ ರಾಜ್ಯದಲ್ಲೂ ಜೋರಾಗಿದೆ. ಈಗಾಗಲೇ ಕಣಕ್ಕಿಳಿದಿರುವ ಅಭ್ಯರ್ಥಿಗಳು ಸಖತ್ ಜೋರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಟ ಪ್ರಕಾಶ್ ರೈ ಸಹ ಬೆಂಗಳೂರು ಕೇಂದ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ, ಇದೀಗ ನಟ ಪ್ರಕಾಶ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗಿದೆ.
Vijaya Karnataka Web prakash-Rai2803


ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಹುಭಾಷಾ ನಟ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಲಾಗಿದೆ. ಸಾಮಾಜಿಕ ಹೋರಾಟಗಾರ ಜಗನ್ ಮತ್ತು ವಕೀಲ ಅರುಣ್ ಅವರಿಬ್ಬರು ಈ ದೂರು ನೀಡಿದ್ದಾರೆ. ಪ್ರಕಾಶ್ ರಾಜ್ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಹೊಂದಿದ್ದಾರೆ. ಅಲ್ಲದೇ, ಅವರು ಚುನಾವಣಾ ಆಯೋಗಕ್ಕೆ 'ನಾನು ಕೇವಲ ಒಂದು ಕಡೆ ಮಾತ್ರ ಮತದಾನದ ಹಕ್ಕು ಹೊಂದಿದ್ದೇನೆ' ಎಂದು ಅಫಿಡೆವಿಟ್ ನೀಡಿದ್ದಾರೆ.

ಆದ್ರೆ ಈಗಲೂ ಸಹ ಪ್ರಕಾಶ್ ರಾಜ್ ಒಟ್ಟು ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆಂದು ದಾಖಲೆಗಳ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ತಮಿಳುನಾಡಿನ ವೆಲಚೇರಿ ವಿಧಾನಸಭಾ ಕ್ಷೇತ್ರ, ರಂಗಾರೆಡ್ಡಿ ವಿಧಾನಸಭಾ ಕ್ಷೇತ್ರ, ಬೆಂಗಳೂರಿನ ಶಾಂತಿನಗರ ಹಾಗೂ ಚೆನೈ ಸೇರಿದಂತೆ ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಇದೆ.

ಈ ಬಗ್ಗೆ ಇಂದು, ಮಾರ್ಚ್ 28, 2019ರಂದು ಚುನಾಣಾ ಆಯೋಗಕ್ಕೆ ದೂರು ನೀಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಅವರ ಉಮ್ಮೇದಾರಿಕೆಯನ್ನು ರದ್ದುಗೊಳಿಸಬೇಕು ಎಂದು ದೂರಿನಲ್ಲಿ ನಮೂದಿಸಲಾಗಿದೆ. ಈ ಹಿಂದೆಯೂ ಕೂಡ ಈ ವಿಚಾರವಾಗಿ ಆರೋಪ ಮಾಡಲಾಗಿತ್ತು. ಆಗ ಸ್ವತಃ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಮತ್ತೆ ಈ ವಿಚಾರ ಚುನಾವಣಾ ಸಮಯದಲ್ಲಿ ಪ್ರಸ್ತಾಪವಾಗುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ, ಪ್ರಕಾಶ್ ರೈ ಅವರಿಗೆ ಕುಳಿತಲ್ಲಿ ನಿಂತಲ್ಲಿ ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ಮುಳ್ಳು ಚುಚ್ಚುತ್ತಿದೆ ಎಂದು ಧಾರಾಳವಾಗಿ ಹೇಳಬಹುದು ಎಂಬಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌