ಆ್ಯಪ್ನಗರ

ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ ಸಮಯದಲ್ಲೂ ತೆಲುಗು ಭಾಷೆಯ ಮೇಲೆ ಪ್ರೀತಿ ತೋರಿಸ್ತಿದ್ದಾರಾ?

ಲಾಕ್‌ಡೌನ್‌ನಿಂದಾಗಿ ಎಲ್ಲ ಸೆಲೆಬ್ರಿಟಿಗಳೂ ಮನೆಯಲ್ಲಿ ಕುಳಿತಿದ್ದಾರೆ. ಈ ಸಮಯದಲ್ಲಿ ಅವರೆಲ್ಲ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಹಜ. ಈ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಹೊಸ ಗಾಸಿಪ್‌ ಕೇಳಿಬಂದಿದೆ.

ವಿಕ ವೆಬ್ ಡೆಸ್ಕ್ | Vijaya Karnataka Web 17 Apr 2020, 9:52 pm
ಇದುವರೆಗೂ ಶೂಟಿಂಗ್‌, ಡಬ್ಬಿಂಗ್‌, ರಿಹರ್ಸಲ್‌ ಎಂದು ಓಡಾಡಿಕೊಂಡಿದ್ದ ಸಿನಿಮಾ ಮಂದಿ ಈಗ ಮನೆಯಲ್ಲೇ ಇದ್ದಾರೆ. ಕೊರೊನಾ ವೈರಸ್‌ ಹಾವಳಿಯಿಂದಾಗಿ ಸದ್ಯಕ್ಕಂತೂ ಅವರ ಕೈ ಕಟ್ಟಿ ಹಾಕಿದಂತಾಗಿದೆ. ಈ ವೇಳೆ ಕೆಲವು ಸ್ಟಾರ್‌ಗಳು ಏನಾದರೂ ಹೊಸ ವಿಚಾರಗಳನ್ನು ಕಲಿತುಕೊಳ್ಳುವತ್ತಲೂ ಗಮನ ಹರಿಸಿದ್ದಾರೆ.
Vijaya Karnataka Web coronavirus lockdown rashmika mandanna busy with learning chittoor telugu for pushpa movie
ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ ಸಮಯದಲ್ಲೂ ತೆಲುಗು ಭಾಷೆಯ ಮೇಲೆ ಪ್ರೀತಿ ತೋರಿಸ್ತಿದ್ದಾರಾ?


ಅಚ್ಚರಿ ಎಂದರೆ ಈ ಲಾಕ್‌ಡೌನ್‌ ಸಮಯದಲ್ಲೂ ನಟಿ ರಶ್ಮಿಕಾ ಮಂದಣ್ಣ ತೆಲುಗು ಭಾಷೆಯ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಟಾಲಿವುಡ್‌ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಅವರು ತೆಲುಗು ಕಲಿತುಕೊಂಡಿದ್ದರು. ಈಗ ಚಿತ್ತೂರೂ ಪ್ರಾಂತ್ಯದ ಶೈಲಿಯಲ್ಲಿ ತೆಲುಗು ಮಾತನಾಡುವುದನ್ನು ರಶ್ಮಿಕಾ ಪ್ರಾಕ್ಟೀಸ್‌ ಮಾಡುತ್ತಿದ್ದಾರಂತೆ. ಅವರು ಇದನ್ನೆಲ್ಲ ಮಾಡುತ್ತಿರುವುದು ಕೊಡಗಿನಲ್ಲಿ ಕುಳಿತು!

ಅಷ್ಟಕ್ಕೂ ಇಡೀ ದೇಶವೇ ಕೊರೊನಾ ಬಗ್ಗೆ ತಲೆ ಕೆಡಿಸಿಕೊಂಡಿರುವಾಗ ರಶ್ಮಿಕಾ ಯಾಕೆ ಇಂಥ ಕೆಲಸದಲ್ಲಿ ಮುಳುಗಿದ್ದಾರೆ? ಉತ್ತರ ಸಿಂಪಲ್‌. ಅಲ್ಲು ಅರ್ಜುನ್‌ ನಟನೆಯ 'ಪುಷ್ಪಾ' ಸಿನಿಮಾದಲ್ಲಿ ರಶ್ಮಿಕಾ ಹೀರೋಯಿನ್‌ ಆಗಿ ನಟಿಸಲಿದ್ದಾರೆ. ಆ ಚಿತ್ರದ ಕಥೆ ನಡೆಯುವುದು ಚಿತ್ತೂರು ಭಾಗದಲ್ಲಿ ಎನ್ನಲಾಗಿದೆ. ಹಾಗಾಗಿ ಆ ಪ್ರಾಂತ್ಯದ ಭಾಷಾ ಶೈಲಿಯಲ್ಲಿಯೇ ರಶ್ಮಿಕಾ ಡೈಲಾಗ್‌ ಹೊಡೆಯಬೇಕಿದೆ. ಹೇಗೂ ಈಗ ಲಾಕ್‌ಡೌನ್‌ನಲ್ಲಿ ಬಿಡುವು ಇರುವುದರಿಂದ ಈ ಸಮಯವನ್ನು ಚಿತ್ತೂರು ಶೈಲಿಯ ತೆಲುಗು ಕಲಿಯಲು ರಶ್ಮಿಕಾ ಬಳಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಲಾಕ್‌ಡೌನ್ ಎಫೆಕ್ಟ್: ರಶ್ಮಿಕಾ ಮಂದಣ್ಣ ಸಿನಿಮಾದಿಂದ ಹೊರಬಿತ್ತು 'ಶಾಕಿಂಗ್' ನ್ಯೂಸ್‌!

ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಚಿತ್ರದ ಪೋಸ್ಟರ್‌ ಮಾತ್ರ ಬಿಡುಗಡೆ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಭಾರಿ ಕೌತುಕ ಮೂಡಿಸಿದೆ. ಫಸ್ಟ್‌ಲುಕ್‌ನಲ್ಲಿ ಅಲ್ಲು ಅರ್ಜುನ್‌ ರಗಡ್‌ ಆಗಿ ಪೋಸ್‌ ನೀಡಿದ್ದಾರೆ. ಅವರಿಗೆ ವಿಲನ್‌ ಆಗಿ ಕನ್ನಡದ ಪ್ರತಿಭೆ ಡಾಲಿ ಧನಂಜಯ ನಟಿಸುವ ಸಾಧ್ಯತೆ ಇದೆ. ಧನಂಜಯ ಜೊತೆ ಚಿತ್ರತಂಡ ಮಾತುಕತೆ ನಡೆಸಿದ್ದು, ಅಂತಿಮ ನಿರ್ಧಾರ ಹೊರಬೀಳುವುದು ಬಾಕಿ ಇದೆ ಎನ್ನಲಾಗಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಕನಸಿಗೆ ವಿಲನ್ ಆಗ್ಬಿಟ್ರಾ ಈ ಕನ್ನಡಿಗ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌