ಆ್ಯಪ್ನಗರ

ಡಾಟರ್‌ ಆಫ್‌ ಪಾರ್ವತಮ್ಮ ಕಥೆ ತುಂಬಾ ಇಷ್ಟವಾಯಿತು ಎಂದ ನಿರ್ಮಾಪಕ

ಇದೇ 24ರಂದು ಬಿಡುಗಡೆಯಾಗುತ್ತಿರುವ ಡಾಟರ್‌ ಆಫ್‌ ಪಾರ್ವತಮ್ಮ ಸಿನಿಮಾದ ನಿರ್ಮಾಪಕ ಶಶಿಧರ್‌, ಈ ಚಿತ್ರ ನಿರ್ಮಾಣ ಮಾಡಿದ ಕಾರಣವನ್ನು ತಿಳಿಸಿದ್ದಾರೆ...

Vijaya Karnataka 23 May 2019, 5:00 am
ಇದೇ 24ರಂದು ಬಿಡುಗಡೆಯಾಗುತ್ತಿರುವ ಡಾಟರ್‌ ಆಫ್‌ ಪಾರ್ವತಮ್ಮ ಸಿನಿಮಾದ ನಿರ್ಮಾಪಕ ಶಶಿಧರ್‌, ಈ ಚಿತ್ರ ನಿರ್ಮಾಣ ಮಾಡಿದ ಕಾರಣವನ್ನು ತಿಳಿಸಿದ್ದಾರೆ.
Vijaya Karnataka Web parvathamma


ಧಿ-ಹರೀಶ್‌ ಬಸವರಾಜ್‌

ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರವನ್ನು ನಿರ್ಮಾಣ ಮಾಡಲು ಸಿನಿಮಾದ ಕಥೆಯೇ ಮುಖ್ಯ ಕಾರಣ. ಸಸ್ಪೆನ್ಸ್‌ ಥ್ರಿಲ್ಲರ್‌ನ್ನು ಈ ರೀತಿಯೂ ಮಾಡಬಹುದಾ ಎನ್ನುವಷ್ಟರ ಮಟ್ಟಿಗೆ ನಿರ್ದೇಶಕರು ಸ್ಕ್ರಿಪ್ಟ್‌ ಮಾಡಿದ್ದರು ಎನ್ನುತ್ತಾರೆ ನಿರ್ಮಾಪಕ ಶಶಿಧರ್‌.

'ನಿರ್ದೇಶಕ ಶಂಕರ್‌ ನನಗೆ ಕಥೆ ಹೇಳಿದಾಗ ನಾನು ನಿಜಕ್ಕೂ ಖುಷಿಯಾದೆ. ಮಹಿಳಾ ಪ್ರಧಾನ ಚಿತ್ರವನ್ನು ಇಷ್ಟು ಕಮರ್ಷಿಯಲ್‌ ಆಗಿ ಮಾಡಬಹುದಾ ಅನ್ನಿಸಿತು. ಅಲ್ಲದೆ ಸಿನಿಮಾದಲ್ಲಿದ್ದ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳು ನನ್ನನ್ನು ಬಹುವಾಗಿ ಸೆಳೆಯಿತು. ಹಾಗಾಗಿ ಇದನ್ನು ನಾನೇ ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಿದೆ. ಜತೆಗೆ ಇದನ್ನು ಯಾವ ಸ್ಟಾರ್‌ ನಟರ ಚಿತ್ರಕ್ಕಿಂತಲೂ ಕಡಿಮೆ ಇಲ್ಲದಂತೆ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ಇಡೀ ಸಿನಿಮಾ ಕೇವಲ ಒಂದು ಗಂಟೆ ಐವತ್ತು ನಿಮಿಷ ಇದೆ. ಚಿತ್ರ ನೋಡಿದ ನನಗೆ ನನ್ನ ನಿರ್ಧಾರದ ಮೇಲೆ ಹೆಮ್ಮೆ ಮೂಡಿತು. ಇಂತಹ ಚಿತ್ರ ನಿರ್ಮಾಣ ಮಾಡಿದ್ದಕ್ಕೆಖುಷಿ ಇದೆ'ಎಂದು ಶಶಿಧರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಶಶಿಧರ್‌ಗೆ ಜತೆಗೆ ಅವರ ಗೆಳೆಯರಾದ ಕೃಷ್ಣೇಗೌಡ,ಸಂದೀಪ್‌ ಶಿವಮೊಗ್ಗ,ಮಧುಸೂದನ್‌ ಸಹ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಮೊದಲ ಬಾರಿಗ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾಗೆ ತಾಯಿಯಾಗಿ ಸುಮಲತಾ ಅಂಬರೀಷ್‌ ನಟಿಸಿದ್ದು ಚಿತ್ರ ಇದೇ 24 ಅಂದರೆ ಶುಕ್ರವಾರ ಬಿಡುಗಡೆಯಾಗಲಿದೆ.ದಿಶಾ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ಅಡಿ ಶಶಿಧರ್‌ ಕೆ. ಎಂ, ವಿಜಯಲಕ್ಷ್ಮೇ ಕೃಷ್ಣೇಗೌಡ, ಶ್ವೇತಾ ಮಧುಸೂದನ್‌, ಸಂದೀಪ್‌ ಶಿವಮೊಗ್ಗ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

----

ಡಾಟರ್‌ ಆಫ್‌ ಪಾರ್ವತಮ್ಮ ಒಂದು ಬೇರೆ ರೀತಿಯ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಬೆಂಗಳೂರು ಸೇರಿದಂತೆ ಕರ್ನಾಟಕದದ್ಯಾಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

-ಶಶಿಧರ್‌, ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌