ಆ್ಯಪ್ನಗರ

ಜಂಟಲ್‌ಮೆನ್‌ ಸೆಟ್‌ನಲ್ಲಿ ಕಾಣಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್

ಜಂಟಲ್‌ಮೆನ್‌ ಸಿನಿಮಾದಲ್ಲಿ ಪ್ರಜ್ವಲ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಸಡನ್ನಾಗಿ ದರ್ಶನ್‌ ಭೇಟಿ ನೀಡಿ ಶೂಟಿಂಗ್‌ ವೀಕ್ಷಣೆ ಮಾಡಿದ್ದಾರೆ. ಹುಷಾರಾಗಿ ಶೂಟಿಂಗ್‌ ಮಾಡುವಂತೆ ಸಲಹೆ ನೀಡಿದ್ದಾರೆ.

Vijaya Karnataka 14 May 2019, 5:00 am
ನಟ ದರ್ಶನ್‌ ಸದ್ದಿಲ್ಲದೇ ಜಂಟಲ್‌ಮೆನ್‌ ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ಗೆಳೆಯ ಪ್ರಜ್ವಲ್‌ ದೇವರಾಜ್‌ ಅವರನ್ನು ಭೇಟಿ ಮಾಡಲು ಅವರು ಶೂಟಿಂಗ್‌ ಸೆಟ್‌ಗೆ ಹೋಗಿದ್ದಾರೆ.
Vijaya Karnataka Web darshan1


ಅಂದಹಾಗೆ ಜಂಟಲ್‌ಮೆನ್‌ ಸಿನಿಮಾದಲ್ಲಿ ಪ್ರಜ್ವಲ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಸಡನ್ನಾಗಿ ದರ್ಶನ್‌ ಭೇಟಿ ನೀಡಿ ಶೂಟಿಂಗ್‌ ವೀಕ್ಷಣೆ ಮಾಡಿದ್ದಾರೆ. ಹುಷಾರಾಗಿ ಶೂಟಿಂಗ್‌ ಮಾಡುವಂತೆ ಸಲಹೆ ನೀಡಿದ್ದಾರೆ.

'ದರ್ಶನ್‌ ನಟನೆಯ ರಾಬರ್ಟ್‌ ಸಿನಿಮಾ ನಮ್ಮ ಶೂಟಿಂಗ್‌ ಸ್ಥಳದಿಂದ ಕೊಂಚ ದೂರದಲ್ಲಿ ನಡೆಯುತ್ತಿತ್ತು. ಹಾಗಾಗಿ ಅವರು ಬಂದಿದ್ದರು. ಸ್ವಲ್ಪ ಹೊತ್ತು ಇದ್ದು, ಶೂಟಿಂಗ್‌ ವೀಕ್ಷಿಸಿ ಹೋದರು' ಎನ್ನುತ್ತಾರೆ ಗುರು ದೇಶಪಾಂಡೆ.

ಜಂಟಲ್‌ಮೆನ್‌ ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಗುರು ದೇಶಪಾಂಡೆ ನಿರ್ಮಾಪಕರು. ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌