ಆ್ಯಪ್ನಗರ

ದರ್ಶನ್‌ 'ಕುರುಕ್ಷೇತ್ರ'ಕ್ಕೆ ಸ್ಟಾರ್‌ ನಟನ ಎಂಟ್ರಿ!

ಸದ್ದಿಲ್ಲದೆ ದರ್ಶನ್ 'ಕುರುಕ್ಷೇತ್ರ'ದ ಟ್ರೈಯಲ್‌ ಫೋಟೋ ಶೂಟ್‌ನ್ನು ಮುಗಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 9 May 2017, 11:37 am
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ'. ಸಿನಿಮಾದ ಟೈಟಲ್‌ ಬಹಿರಂಗವಾಗಿದ್ದೇ ತಡ ದರ್ಶನ್‌ ಅಭಿಮಾನಿಗಳಲ್ಲಿ 'ಕುರುಕ್ಷೇತ್ರ'ದ ಕ್ರೇಜ್‌ ಶುರುವಾಗಿದೆ. ಚಿತ್ರದ ಕುರಿತು ತಿಳಿದುಕೊಳ್ಳಲು ಇಚ್ಛಿಸುತ್ತಿರುವ ದಚ್ಚು ಅಭಿಮಾನಿಗಳಿಗೆ ಇಲ್ಲೊಂದು ಸಹಿ ಸುದ್ದಿ ಇದೆ.
Vijaya Karnataka Web darshan does photoshoot for his 50th film kurukshetra
ದರ್ಶನ್‌ 'ಕುರುಕ್ಷೇತ್ರ'ಕ್ಕೆ ಸ್ಟಾರ್‌ ನಟನ ಎಂಟ್ರಿ!


ಸದ್ದಿಲ್ಲದೆ ದರ್ಶನ್ 'ಕುರುಕ್ಷೇತ್ರ'ದ ಟ್ರೈಯಲ್‌ ಫೋಟೋ ಶೂಟ್‌ನ್ನು ಮುಗಿಸಿದ್ದಾರೆ. ಹೈದರಾಬಾದಿನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಚಿತ್ರದ ಫೋಟೋ ಶೂಟ್‌ ನಡೆಸಿರುವುದು ಮತ್ತೊಂದು ವಿಶೇಷ. ಈ ಹಿಂದೆ ದರ್ಶನ್‌ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ನಿರ್ದೇಶಿಸಿದ್ದ ನಾಗಣ್ಣ, ಕುರುಕ್ಷೇತ್ರ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ದರ್ಶನ್‌ ಈ ಚಿತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲದೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ರವಿಚಂದ್ರನ್‌ ಯಾವ ಪಾತ್ರ ನಿಭಾಯಿಸುತ್ತಾರೆ ಎನ್ನುವುದು ತಿಳಿದುಬಂದಿಲ್ಲ. ಚಿತ್ರದ ಚಿತ್ರೀಕರಣ ಜೂನ್‌ ತಿಂಗಳಿನಿಂದ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌