ಆ್ಯಪ್ನಗರ

ಅಂಬಿ ಬರ್ತ್‌ಡೇಗೆ ಮೊದಲು ಕೇಕ್ ತಂದಿದ್ದು ದರ್ಶನ್

ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ 66ನೇ ಹುಟ್ಟುಹಬ್ಬಕ್ಕೆ ಮೊದಲ ಕೇಕ್‌ ತೆಗೆದುಕೊಂಡು ಅಂಬಿ ಮನೆಗೆ ಹೋದವರು ದರ್ಶನ್‌ ಅಂತೆ. ಈ ಬಗ್ಗೆ ಸ್ವತಃ ಸುಮಲತಾ ಟ್ವೀಟ್‌ ಮಾಡಿದ್ದಾರೆ. ಸೋಮವಾರ ಸಂಜೆ ಹೊತ್ತಿಗೆಲ್ಲಾ ದರ್ಶನ್‌ ಕೇಕ್‌ ಮತ್ತು ಗಿಫ್ಟ್‌ ಜತೆಗೆ ಜೆಪಿ ನಗರದ ಅಂಬಿ ಮನೆಗೆ ಹೋಗಿದ್ದಾರೆ.

Vijaya Karnataka 30 May 2018, 11:53 am
ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ 66ನೇ ಹುಟ್ಟುಹಬ್ಬಕ್ಕೆ ಮೊದಲ ಕೇಕ್‌ ತೆಗೆದುಕೊಂಡು ಅಂಬಿ ಮನೆಗೆ ಹೋದವರು ದರ್ಶನ್‌ ಅಂತೆ. ಈ ಬಗ್ಗೆ ಸ್ವತಃ
Vijaya Karnataka Web darshan

ಸುಮಲತಾ ಟ್ವೀಟ್‌ ಮಾಡಿದ್ದಾರೆ. ಸೋಮವಾರ ಸಂಜೆ ಹೊತ್ತಿಗೆಲ್ಲಾ ದರ್ಶನ್‌ ಕೇಕ್‌ ಮತ್ತು ಗಿಫ್ಟ್‌ ಜತೆಗೆ ಜೆಪಿ ನಗರದ ಅಂಬಿ ಮನೆಗೆ ಹೋಗಿದ್ದಾರೆ.

ಕೇಕ್‌ ಜತೆಗಿರುವ ಫೋಟೋವನ್ನು ಟ್ವೀಟ್‌ ಮಾಡಿ ಅಂಬಿ ಹುಟ್ಟುಹಬ್ಬಕ್ಕೆ ಮೊದಲ ಕೇಕ್‌ ಮತ್ತು ಗಿಫ್ಟ್‌ ತಂದಿದ್ದು ದರ್ಶನ್‌ ಎಂದು ಬರೆದಿದ್ದಾರೆ ಸುಮಲತಾ. ಇದರ ಜತೆಗೆ ದರ್ಶನ್‌ ಸಹ ಅಂಬರೀಶ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಜೊತೆಗಿನ ಫೋಟೋ ಹಾಕಿ ಎಷ್ಟೇ ವರ್ಷಗಳು ಕಳೆದರೂ
ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಈ ಶುಭದಿನದಂದು ದೇವರು ಇನ್ನೂ ಹೆಚ್ಚು ಆರೋಗ್ಯ, ಶಾಂತಿ, ಸಮೃದಿಟಛಿಯನ್ನು ನೀಡಲಿ ಎಂದು ಶುಭ ಕೋರುತ್ತೇನೆ ಎಂದು ಬರೆದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌