ಆ್ಯಪ್ನಗರ

ದರ್ಶನ್ ಮನೆಗೆ ಬಂತು ಇನ್ನೊಂದು ದುಬಾರಿ ಕಾರು

ನಟ ದರ್ಶನ್‌ ಮತ್ತೆ ಹೊಸ ಕಾರು ಖರೀದಿಸಿದ್ದಾರೆ. ದುಬಾರಿ ಬೆಲೆಯ ಕಾರುಗಳ ಮೇಲೆ ವ್ಯಾಮೋಹ ಇರುವ ದರ್ಶನ್‌ ಈ ಬಾರಿ ಹಳದಿ ಬಣ್ಣದ ಫೋರ್ಡ್‌ ಮಸ್ಟಂಗ್‌ ಕಾರನ್ನು ಖರೀದಿಸಿದ್ದಾರೆ.

Vijaya Karnataka 21 May 2018, 12:06 pm
ನಟ ದರ್ಶನ್‌ ಮತ್ತೆ ಹೊಸ ಕಾರು ಖರೀದಿಸಿದ್ದಾರೆ. ದುಬಾರಿ ಬೆಲೆಯ ಕಾರುಗಳ ಮೇಲೆ ವ್ಯಾಮೋಹ ಇರುವ ದರ್ಶನ್‌ ಈ ಬಾರಿ ಹಳದಿ ಬಣ್ಣದ ಫೋರ್ಡ್‌ ಮಸ್ಟಂಗ್‌ ಕಾರನ್ನು ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಲ್ಯಾಂಬೊರ್ಗಿನಿ ಕಾರನ್ನು ಕೊಂಡು ತಂದಿದ್ದ ಅವರ ಮನೆಯ ಮುಂದೆ ಈಗ ಹೊಸ ಮಾಡೆಲ್‌ನ
Vijaya Karnataka Web darshan-car

ಫೋರ್ಡ್‌ ಮಸ್ಟಂಗ್‌ ಸ್ಪೋರ್ಟ್ಸ್ ಕಾರ್‌ ಬಂದು ನಿಂತಿದೆ.

ಈ ಕಾರಿನ ಶೋರೂಮಿನ ಬೆಲೆ 75 ಲಕ್ಷ. ಆನ್‌ರೋಡ್‌ ಬೆಲೆ ಒಂದು ಕೋಟಿಯಾಗಬಹುದು ಎನ್ನಲಾಗಿದೆ. ಈಗಾಗಲೇ ದರ್ಶನ್ ಬಳಿ ಬಿಎಂಡಬ್ಲು, ರೇಂಜ್‌ ರೋವರ್‌, ಜಾಗ್ವರ್‌, ಫಾಚ್ರ್ಯೂನರ್‌ ಕಾರುಗಳಿವೆ. ಕಳೆದ ತಿಂಗಳಷ್ಟೇ ಅವರು ಲ್ಯಾಂಬೋರ್ಗಿನಿನ ನ್ಯೂ ಎಡಿಷನ್‌ ಕಾರು ಖರೀದಿಸಿದ್ದರು. ಇವುಗಳ ಸಾಲಿಗೆ ಮತ್ತೊಂದು ಕಾರು ಸೇರ್ಪಡೆ ಆಗಿದೆ.
ದರ್ಶನ್‌ ಕೇವಲ ವಾಹನ ಪ್ರಿಯರು ಮಾತ್ರವಲ್ಲ, ಪಕ್ಷಿ ಮತ್ತು ಪ್ರಾಣಿಗಳನ್ನೂ ಸಾಕಿದ್ದಾರೆ. ದೇಶ ವಿದೇಶಿ ಪಕ್ಷಿಗಳ ಸಂಗ್ರಹಾಲಯವೇ ಅವರ ತೋಟದಲ್ಲಿದೆ. ವಿವಿಧ ತಳಿಯ ಕುದುರೆಗಳು ಮತ್ತು ಹಸುಗಳನ್ನೂ ಅವರು ಸಾಕಿದ್ದಾರೆ. ಅಲ್ಲದೇ ಮೈಸೂರಿನ ಪ್ರಾಣಿ ಸಂಗ್ರಹಾಲಯದಲ್ಲಿರುವ ಕೆಲ ಪ್ರಾಣಿಗಳನ್ನೂ ಅವರು ದತ್ತು ತಗೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌