ಆ್ಯಪ್ನಗರ

'ಕೆಜಿಎಫ್' ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿಯುತ್ತಾ 'ಕುರುಕ್ಷೇತ್ರ'?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದ ಗಳಿಕೆ ಬಾಕ್ಸ್ ಆಫೀಸ್‌ನಲ್ಲಿ ಮುಂದುವರೆದಿದೆ. ಇದುವರೆಗೆ ಅಂದಾಜು ₹ 35 ಕೋಟಿಯಷ್ಟು ಗಳಿಕೆ ಮಾಡಿದೆ ಎಂದಿವೆ ಮೂಲಗಳು.

Vijaya Karnataka Web 13 Aug 2019, 3:25 pm
ಚಾಲೆಂಜಿಂಸ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಕುರುಕ್ಷೇತ್ರ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.
Vijaya Karnataka Web kurukshetra2


ಚಿತ್ರದ ಗಳಿಕೆ ಮೊದಲ ದಿನವೇ ₹ 13 ಕೋಟಿಯಾದರೆ ಎರಡನೇ ದಿನ ₹ 10 ಕೋಟಿ ದಾಟಿದೆ ಎಂದಿದ್ದಾರೆ ಚಿತ್ರದ ವಿತರಕರಾದ ರಾಕ್‍ಲೈನ್ ವೆಂಕಟೇಶ್. ಬಕ್ರೀದ್ ಹಬ್ಬದ ದಿನ ಸೋಮವಾರ ₹ 5 ರಿಂದ 6 ಕೋಟಿ ಗಳಿಕೆ ಮಾಡಿದೆ ಎಂದಿವೆ ಮೂಲಗಳು. [ದರ್ಶನ್ ಅಭಿನಯದ 'ಕುರುಕ್ಷೇತ್ರ' ಮೊದಲ ದಿನ ಗಳಿಸಿದ್ದೆಷ್ಟು?]

ತೆಲುಗಿನಲ್ಲೂ ಕಲೆಕ್ಷನ್ ಮುಂದುವರೆದಿದ್ದು ಮೊದಲ ದಿನ ₹ 1.17 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆ ಇದುವರೆಗೆ ಅಂದಾಜು ₹ 35 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಗಳಿಕೆಯ ಓಟ ಇದೇ ರೀತಿ ಮುಂದುವರೆದರೆ 'ಕೆಜಿಎಫ್: ಚಾಪ್ಟರ್ 1' ನಂತರದ ನೂರು ಕೋಟಿ ಕ್ಲಬ್ ಸೇರುತ್ತಿರುವ ಮತ್ತೊಂದು ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅದೇ ರೀತಿ ಶೀಘ್ರದಲ್ಲೇ ತಮಿಳಿನಲ್ಲೂ ಕುರುಕ್ಷೇತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ರವಿಚಂದ್ರನ್, ಸೋನು ಸೂದ್, ಅಂಬರೀಷ್, ಸ್ನೇಹಾ ಮತ್ತು ಮೇಘನಾ ರಾಜ್ ತಾರಾಗಣದಲ್ಲಿದ್ದಾರೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಭೀಷ್ಮನಾಗಿ ಅಂಬರೀಷ್, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯು ಆಗಿ ನಿಖಿಲ್ ಕಾಣಿಸಲಿದ್ದಾರೆ. ಶಕುನಿ ಪಾತ್ರದಲ್ಲಿ ರವಿಶಂಕರ್, ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್ ಹಾಗೂ ಶಲ್ಯನ ಪಾತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌