ಆ್ಯಪ್ನಗರ

ಹವಾ ಕ್ರಿಯೇಟ್‌ ಮಾಡಿದ ಯಜಮಾನ

'ಮಾ.1ರಂದು ಯಜಮಾನ ಚಿತ್ರ ರಿಲೀಸ್‌ ಆಗುತ್ತಿದೆ. ಅದಕ್ಕೂ ಮುನ್ನ ವೀಕೆಂಡ್‌ನಲ್ಲಿ ಟಿಕೆಟ್‌ ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಲಭ್ಯ ಇರಲಿವೆ' ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್‌.

Vijaya Karnataka 19 Feb 2019, 7:48 am
ನಟನೆಯ 'ಯಜಮಾನ' ಸಿನಿಮಾ ಸಖತ್‌ ಹವಾ ಕ್ರಿಯೇಟ್‌ ಮಾಡಿದೆ. ಒಂದು ವಾರ ಮುಂಚೆಯೇ ಆನ್‌ಲೈನ್‌ನಲ್ಲಿ ಟಿಕೆಟ್‌ ಸಿಗುವಂತೆ ಮಾಡಬೇಕೆಂದು ನಿರ್ಮಾಪಕರ ಮೇಲೆ ಅಭಿಮಾನಿಗಳು ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ಒಂದು ವಾರ ಮುಂಚೆ ಆನ್‌ಲೈನ್‌ ಟಿಕೆಟ್‌ ಸಿಗುವುದಾಗಿ ಚಿತ್ರತಂಡ ಹೇಳಿದೆ.
Vijaya Karnataka Web Darshan


'ಮಾ.1ರಂದು ಯಜಮಾನ ಚಿತ್ರ ರಿಲೀಸ್‌ ಆಗುತ್ತಿದೆ. ಅದಕ್ಕೂ ಮುನ್ನ ವೀಕೆಂಡ್‌ನಲ್ಲಿ ಟಿಕೆಟ್‌ ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಲಭ್ಯ ಇರಲಿವೆ' ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್‌.

ಒಂದೂವರೆ ವರ್ಷದ ನಂತರ ದರ್ಶನ್‌ ಸಿನಿಮಾ ರಿಲೀಸ್‌ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಅಲ್ಲದೇ, ಟ್ರೇಲರ್‌ ಕೂಡ ಟ್ರೆಂಡ್‌ ಸೆಟ್‌ ಮಾಡಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

ದರ್ಶನ್‌ ಜತೆ ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ಧನಂಜಯ್‌ ಸೇರಿದಂತೆ ಹೆಸರಾಂತ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌