ಆ್ಯಪ್ನಗರ

ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇದ್ದರೂ ಡಾ ರಾಜ್ ನೆನೆದ ದರ್ಶನ್

ಡಾ ರಾಜ್ ಕುಮಾರ್ ಕುಟುಂಬದ ಜೊತೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಈಗ ಅದೇ ಸಂಬಂಧವನ್ನು ದರ್ಶನ್ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ದರ್ಶನ್ ಅವರು ಹೆಚ್ಚುಹೆಚ್ಚು ಪ್ರಬುದ್ಧತೆ ಪ್ರದರ್ಶಿಸುತ್ತಿದ್ದಾರೆ.

Vijaya Karnataka Web 13 Apr 2019, 11:33 am
ನಿನ್ನೆ, ಏಪ್ರಿಲ್ 12, 2019ರಂದು ಡಾ ರಾಜ್ ಕುಮಾರ್ ಅವರ 13ನೇ ಪುಣ್ಯ ಸ್ಮರಣೆ ಆಚರಿಸಲಾಯಿತು. ಕನ್ನಡ ನಾಡು ರಾಜ್ ಕುಮಾರ್ ಅವರನ್ನು ಕಳೆದುಕೊಂಡು 13 ವರ್ಷಗಳಾದವು. ಆದರೆ ಇಂದಿಗೂ ಕೂಡ ಅಭಿಮಾನಿಗಳ ಪ್ರೀತಿ-ಆದರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸ್ಮಾರಕದ ಬಳಿ ತೆರೆಳಿ ಪೂಜೆ ಸಲ್ಲಿಸಿ ಕನ್ನಡದ ಮೇರು ನಟನನ್ನು ನೆನಪಿಸಿಕೊಂಡಿದ್ದಾರೆ.
Vijaya Karnataka Web darshan1304


ನಿನ್ನೆ ಬೆಳಿಗ್ಗೆ ರಾಜ್ ಕುಮಾರ್ ಕುಟುಂಬದವರು ಕಂಠೀರವ ಸ್ಟುಡಿಯೋಗೆ ತೆರಳಿ ಅವರ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳು ಅಂದ್ರೆ ಡಾ ರಾಜ್ ಕುಮಾರ್ ತಿಂಗಳು ಎಂದು ಕರೆಯಬಹುದು. ಏಕೆಂದರೆ, ಅವರು ಹುಟ್ಟಿದ್ದು ಮತ್ತು ನಿಧನರಾಗಿದ್ದು ಏಪ್ರಿಲ್ ತಿಂಗಳಿನಲ್ಲಿ. ಈ ವಿಶೇಷ ದಿನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಡಾ ರಾಜ್ ಅವರನ್ನು ಸ್ಮರಿಸಿ ಮೆಸೇಜ್ ಪೋಸ್ಟ್ ಮಾಡಿದ್ದಾರೆ.

ತಮ್ಮ ಟ್ವೀಟರ್ ಪೇಜ್‌ನಲ್ಲಿ ನಟ ದರ್ಶನ್ "ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಆಲದ ಮರದ ನೆರಳಿನಂತೆ ನೆರವಾದ ಅಣ್ಣಾವ್ರ ಪುಣ್ಯ ತಿಥಿ ಇಂದು. ಸದಾ ನಮ್ಮೊಂದಿಗೆ ಡಾ ರಾಜ್ ಕುಮಾರ್" ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಮುಂಬರುವ ಲೋಕಸಭೆ ನಿಮಿತ್ತ ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಪರ ಪ್ರಚಾರ ಕಾರ್ಯದಲ್ಲಿ ನಟ ದರ್ಶನ್ ನಿರತರಾಗಿದ್ದಾರೆ. ತಾವು ಅದೆಷ್ಟೇ ಬ್ಯುಸಿ ಇದ್ದರೂ ಡಾ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

ಡಾ ರಾಜ್ ಕುಮಾರ್ ಕುಟುಂಬದ ಜೊತೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಈಗ ಅದೇ ಸಂಬಂಧವನ್ನು ದರ್ಶನ್ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ದರ್ಶನ್ ಅವರು ಹೆಚ್ಚುಹೆಚ್ಚು ಪ್ರಬುದ್ಧತೆ ಪ್ರದರ್ಶಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌