ಆ್ಯಪ್ನಗರ

ದರ್ಶನ್‌ ನಟನೆಯ 'ಗಂಡಗಲಿ ಮದಕರಿ ನಾಯಕ' ಚಿತ್ರದ ಕೆಲಸ ಶುರು

ದರ್ಶನ್‌ ನಟನೆಯ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಸದ್ದಿಲ್ಲದೇ ಕೆಲಸ ಶುರುವಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದುರ್ಗದಲ್ಲಿ ಬೀಡುಬಿಟ್ಟಿದ್ದಾರೆ.

Vijaya Karnataka 15 May 2019, 7:00 am
* ಶರಣು ಹುಲ್ಲೂರು
Vijaya Karnataka Web darshan2


ಕನ್ನಡದ ಮತ್ತೊಂದು ಐತಿಹಾಸಿಕ ಚಿತ್ರ 'ಗಂಡುಗಲಿ ಮದಕರಿ ನಾಯಕ' ಸದ್ದಿಲ್ಲದೇ ತನ್ನ ಕೆಲಸ ಆರಂಭಿಸಿದೆ. ಬಿ.ಎಲ್‌.ವೇಣು ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಚಿತ್ರದುರ್ಗದಲ್ಲಿರುವ ವೇಣು ಮನೆಯಲ್ಲೇ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟ ದೊಡ್ಡಣ್ಣ, ಸಿನಿಮಾಟೋಗ್ರಾಫರ್‌ ಅಶೋಕ್‌ ಕಶ್ಯಪ್‌ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಬೀಡು ಬಿಟ್ಟಿದ್ದಾರೆ. ಸ್ಕ್ರಿಪ್ಟ್‌ ಮಾಡುವುದರಲ್ಲಿ ಚಿತ್ರತಂಡ ಬಿಝಿ ಆಗಿದೆ.

ವೀರ ಮದಕರಿ ಪಾತ್ರದಲ್ಲಿ ನಟಿಸುತ್ತಿರುವ ದರ್ಶನ್‌ ಅವರ ಮೇಕಪ್‌ ಟೆಸ್ಟ್‌ ಕೂಡ ನಡೆದಿದೆ. ಅಲ್ಲದೇ, ಚಿತ್ರದುರ್ಗದ ಸಮೀಪದ ಹಳ್ಳಿಯೊಂದರಲ್ಲಿ ಶೂಟಿಂಗ್‌ಗಾಗಿ ಸೆಟ್‌ ಹಾಕುವ ಪ್ಲ್ಯಾನ್‌ ಮಾಡಲಾಗಿದೆ. ಜತೆಗೆ ಈ ಸಿನಿಮಾಗಾಗಿ ರಿಸರ್ಚ್‌ಟೀಮ್‌ ಮಾಡಲಾಗಿದ್ದು, ಈ ತಂಡವು ವೀರ ಮದಕರಿ ಕುರಿತಾದ ಹಲವು ಸಂಗತಿಗಳನ್ನು ಕಲೆ ಹಾಕುತ್ತಿದೆ.

ಸದ್ಯ ದರ್ಶನ್‌ ರಾಬರ್ಟ್‌ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಈ ನಡುವೆಯೇ ಅವರು ವೀರ ಮದಕರ ಚಿತ್ರಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದೇಹವನ್ನೂ ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಉದ್ದ ಕೂದಲನ್ನೂ ಬೆಳೆಸಿಕೊಳ್ಳುತ್ತಿದ್ದಾರೆ.

ಈ ಕುರಿತು ರಾಕ್‌ಲೈನ್‌ ವೆಂಕಟೇಶ್‌ ಹೇಳುವುದು ಹೀಗೆ, 'ಸದ್ಯ ಸ್ಕ್ರಿಪ್ಟ್‌ ಕೆಲಸ ನಡೆಯುತ್ತಿದೆ. ಇದೊಂದು ಭಾರೀ ಬಜೆಟ್‌ ಸಿನಿಮಾವಾಗಿದ್ದರಿಂದ, ಸಡನ್ನಾಗಿ ಎಲ್ಲವೂ ನಡೆಯುವುದಿಲ್ಲ. ಹಾಗಾಗಿ ಹಂತ ಹಂತವಾಗಿ ನಾನಾ ರೀತಿಯ ತಯಾರಿ ಆಗಬೇಕು. ಸಂಪೂರ್ಣ ತಯಾರಿಯೊಂದಿಗೆ ಶೂಟಿಂಗ್‌ ಶುರು ಮಾಡಲಾಗುವುದು' ಎನ್ನುತ್ತಾರೆ.

ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ, ಆ ವೈಭವವನ್ನು ಕಟ್ಟಿಕೊಡಲು ಸಾವಿರಾರು ಸಂಖ್ಯೆಯ ಕಲಾವಿದರ ಮತ್ತು ತಂತ್ರಜ್ಞರು ಬೇಕು. ಎಲ್ಲವನ್ನೂ ಒಟ್ಟಾಗಿಸುವ ಕೆಲಸ ನಡೆದಿದೆ. ಆ ಕಾಲ ಘಟ್ಟವನ್ನು ಸೃಷ್ಟಿಸಲು ಈಗಾಗಲೇ ಕಲಾ ನಿರ್ದೇಶಕರು ತಯಾರಿ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌