ಆ್ಯಪ್ನಗರ

Darsha Odeya Poster: ಸಂಕ್ರಾಂತಿ ದಿನವೇ ಒಡೆಯನ ದರ್ಶನ

ದರ್ಶನ್‌ ನಟನೆಯ ಒಡೆಯ ಚಿತ್ರದ ಶೂಟಿಂಗ್‌ ಶುರುವಾಗಿದೆ ಯಜಮಾನ ಚಿತ್ರ ಮುಗಿಸಿದ ದರ್ಶನ್‌ ಒಡೆಯ ಚಿತ್ರದಲ್ಲಿ ಬಿಝಿಯಾಗಿದ್ದಾರೆ.

Vijaya Karnataka 16 Jan 2019, 12:31 pm
ದರ್ಶನ್‌ ನಟನೆಯ ಒಡೆಯ ಚಿತ್ರದ ಶೂಟಿಂಗ್‌ ಶುರುವಾಗಿದೆ. ಯಜಮಾನ ಚಿತ್ರ ಮುಗಿಸಿದ ದರ್ಶನ್‌ ಒಡೆಯ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈಗ ಸಂಕ್ರಾಂತಿಯ ಸಂದರ್ಭದಲ್ಲಿ ಒಡೆಯ ಚಿತ್ರದ ಮೊದಲ ಪೋಸ್ಟರ್‌ ರಿಲೀಸ್‌ ಆಗಿದ್ದು, ಸಾಮಾಜಿಕ ಜಾಲತಾಣಗಳ್ಲಲಿ ಭರ್ಜರಿ ವೈರಲ್‌ ಆಗಿದೆ. ಪೋಸ್ಟರ್‌ನಲ್ಲಿ ದರ್ಶನ್‌ ರೈತನಂತೆ ಕಾಣಿಸಿಕೊಂಡಿದ್ದಾರೆ. ಎಂ.ಡಿ ಶ್ರೀಧರ್‌ ನಿರ್ದೇಶನದ ಚಿತ್ರ ಇದಾಗಿದೆ.
Vijaya Karnataka Web odeya


ಈ ಚಿತ್ರಕ್ಕೆ ಮೊದಲು ಒಡೆಯರ್‌ ಎಂದು ಹೆಸರಿಡಲಾಗಿತ್ತು. ಈ ಹೆಸರಿಗೆ ಮೈಸೂರಿನ ಅನೇಕರು ಮೈಸೂರು ರಾಜವಂಶದ ಹೆಸರು ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ನಂತರ ಇದನ್ನು ಒಡೆಯ ಎಂದು ಬದಲಾಯಿಸಲಾಯಿತು. ಈಗಾಗಲೇ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದು ತಮಿಳಿನ ವೀರಂ ಚಿತ್ರದ ರಿಮೇಕ್‌ ಎನ್ನಲಾಗಿದೆ. ಚಿತ್ರದಲ್ಲಿ ನಾಯಕಿ ನಟಿ ರಾಘವಿ, ಸಾಧುಕೋಕಿಲಾ, ಚಿಕ್ಕಣ್ಣ, ದೇವರಾಜ್‌ ಮತ್ತಿತರರು ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌