ಆ್ಯಪ್ನಗರ

ದಯವಿಟ್ಟು ಗಮನಿಸಿ ಇದು ಹುಡುಗಿಯರದ್ದೇ ಕತೆ

ದಯವಿಟ್ಟು ಗಮನಿಸಿ ಇದು ಹುಡುಗಿಯರದ್ದೇ ಕತೆ

Vijaya Karnataka Web 26 May 2017, 5:00 am

- ಹರೀಶ್‌ ಬಸವರಾಜ್‌

ರೋಹಿತ್‌ ಪದಕಿ ನಿರ್ದೇಶನದ ದಯವಿಟ್ಟು ಗಮನಿಸಿ ಸಿನಿಮಾದಲ್ಲಿ ನಾಲ್ಕು ಕತೆಗಳಿದ್ದು ನಾಲ್ವರು ನಾಯಕಿಯರಿದ್ದಾರೆ. ಆ ವಿಶೇಷದ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ.

Vijaya Karnataka Web dayavittu gamanisi
ದಯವಿಟ್ಟು ಗಮನಿಸಿ ಇದು ಹುಡುಗಿಯರದ್ದೇ ಕತೆ

ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ಸಿನಿಮಾ 'ದಯವಿಟ್ಟು ಗಮನಿಸಿ'. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳಿಂದ ಇದು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ. ಇಲ್ಲಿ ನಾಲ್ಕು ಕತೆಗಳಿದ್ದು, ಸಂಗೀತಾ ಭಟ್‌, ಸಂಯುಕ್ತಾ ಹೊರನಾಡು, ಭಾವನಾ ರಾವ್‌, ಸುಕೃತಾ ವಾಗ್ಲೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಸ್ಕೂಲ್‌ ಟೀಚರ್‌ ಸಂಗೀತಾ:

ಎರಡನೇ ಸಲ ಸಿನಿಮಾ ಮೂಲಕ ಅಚ್ಚರಿ ಮೂಡಿಸಿದ್ದ ಸಂಗೀತಾ ಭಟ್‌ ಇಲ್ಲಿ ಭಾಗ್ಯಲಕ್ಷ್ಮೇ ಎಂಬ ಟೀಚರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೀಚರ್‌ ಅನ್ನು ವಸಿಷ್ಠ ಸಿಂಹ ಲವ್‌ ಮಾಡುತ್ತಾರಂತೆ. ಈ ಸಿನಿಮಾದ ಕ್ಯಾರೆಕ್ಟರ್‌ ಬಗ್ಗೆ ನಿರ್ದೇಶಕರು ಹೇಳಿದ ತಕ್ಷಣ ಸಂಗೀತಾ ಮರು ಮಾತನಾಡದೇ ಒಪ್ಪಿಕೊಂಡರಂತೆ. ಅದಕ್ಕೆ ಕಾರಣ ಚಿತ್ರದ ಟೈಟಲ್‌. 'ಇಲ್ಲಿನ ಪಾತ್ರದ ಮೂಲಕ ಪಕ್ಕದ ಮನೆಯ ಹುಡುಗಿಯಾಗಿ ಇಷ್ಟವಾಗುತ್ತೇನೆ' ಎನ್ನುತ್ತಾರೆ ಈ ನಟಿ.

ಬೋಲ್ಡ್‌ ಗರ್ಲ್‌ ಸಂಯುಕ್ತಾ:

ಸಾಮಾಜಿಕ ಕೆಲಸಗಳಲ್ಲಿ ಸದಾ ಆ್ಯಕ್ಟಿವ್‌ ಆಗಿರುವ ಸಂಯುಕ್ತಾ ಹೊರನಾಡು ಇಲ್ಲಿ ಬೋಲ್ಡ್‌ ಗರ್ಲ್‌ ಆಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿಗೆ ಜೋಡಿಯಾಗಿ ಬಣ್ಣ ಹಚ್ಚಿದ್ದು, ಐಟಿ ಕಂಪನಿ ಉದ್ಯೋಗಿಯಾಗಿ, ಸಿಗರೇಟ್‌ ಸೇದಿಕೊಂಡು ಬುಲೆಟ್‌ ಓಡಿಸಿಕೊಂಡು ಇರುವ ಗಂಡುಬೀರಿ ಪಾತ್ರವಂತೆ. 'ಈ ಪಾತ್ರ ನನಗೆ ಚಾಲೆಂಜಿಂಗ್‌ ಆಗಿತ್ತು. ರಿಲೇಶನ್‌ಶಿಪ್‌ ಬಗ್ಗೆ ಮಾತನಾಡುವ ಹುಡುಗಿಯಾಗಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿಯವರೆಗೂ ನಿರ್ವಹಿಸದ ಪಾತ್ರ ಇದಾಗಿದೆ' ಎನ್ನುತ್ತಾರೆ ಸಂಯುಕ್ತಾ.

ಪತ್ರಕರ್ತೆ ಸುಕೃತಾ:

ಸುಕೃತಾ ವಾಗ್ಲೆ, ಇಲ್ಲಿ ಪತ್ರಕರ್ತೆ. ಇಷ್ಟು ದಿನ ಜೋರಾಗಿ ಮಾತನಾಡುವ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಇವರು. ಇಲ್ಲಿ ಜರ್ನಲಿಸ್ಟ್‌ ಆಗಿ ಒಬ್ಬ ಸಂಚಾರಿಯನ್ನು ನೋಡುವ ಪಾತ್ರ ಇವರದ್ದು. 'ಇದು ಹೊಸ ತರಹದ ಪಾತ್ರ, ನಿರ್ದೇಶಕರು ಪಾತ್ರ ಪೋಷಣೆಯನ್ನು ಚೆನ್ನಾಗಿ ಮಾಡಿದ್ದಾರೆ' ಎನ್ನುತ್ತಾರವರು.

ಹತಾಶ ಗೃಹಿಣಿ ಭಾವನಾ ರಾವ್‌:

ಭಾವನಾ ರಾವ್‌ ಇಲ್ಲಿ ರಘು ಮುಖರ್ಜಿ ಪತ್ನಿಯ ಪಾತ್ರನಿರ್ವಹಿಸಿದ್ದಾರೆ. ಈ ಸಿನಿಮಾದ ಮೂಲಕ ಜಗತ್ತಿನ ಎಲ್ಲ ಗೃಹಿಣಿಯರನ್ನು ಅವರು ಪ್ರತಿಬಿಂಬಿಸುತ್ತಾರಂತೆ. ಮನೆಯಲ್ಲಿ ನಡೆಯುವ ಸಣ್ಣ ಸಣ್ಣ ವಿಚಾರಗಳಿಗೆ ಹತಾಶೆಗೊಂಡು ಜೀವನದಲ್ಲಿ ನಿರಾಸೆ ಹೊಂದುವ ಪಾತ್ರ ಇದಾಗಿದೆ. 'ಇದನ್ನು ರೋಹಿತ್‌ ನನಗೆ ಹೇಳಿ ಅದಕ್ಕೆ ತಕ್ಕಂತೆ ಎಲ್ಲ ರೀತಿಯ ತಯಾರಿಯನ್ನು ಒಂದು ತಿಂಗಳು ಮುಂಚೆ ಮಾಡಿದ್ದರು ಹಾಗಾಗಿ ಕಂಫರ್ಟ್‌ ಆಗಿ ನಟಿಸಲು ಸಾಧ್ಯವಾಯಿತು' ಎನ್ನುತ್ತಾರೆ ಈ ನಟಿ.

ಸ್ಪೆಷಲ್‌ ಹಾಡಿನಲ್ಲಿ ಮೇಘನಾ ರಾಜ್‌:

ಇಲ್ಲಿನ ನಾಲ್ಕು ಕತೆಗಳಿಗೆ ಲಿಂಕ್‌ ಕೊಡಲು ರೋಹಿತ್‌ ಒಂದು ಹಾಡನ್ನು ಈ ಸಿನಿಮಾದಲ್ಲಿ ಇಟ್ಟಿದ್ದಾರೆ. ಅದರಲ್ಲಿ ಮೇಘನಾ ರಾಜ್‌ ನಟಿಸಿದ್ದು, ಈ ಹಾಡು ರೆಟ್ರೋ ಸ್ಟೈಲ್‌ನಲ್ಲಿದೆ. ಜಾಸ್‌ ಸಿಂಗರ್‌ ಆಗಿ ನಟಿಸಿರುವ ಮೇಘನಾ ಪಾತ್ರ ಸಿನಿಮಾದ ಮೇಜರ್‌ ಭಾಗಗಳಲ್ಲಿ ಒಂದು. ಇದರಲ್ಲಿ ಕಾಣಿಸಿಕೊಳ್ಳಲು ರೋಹಿತ್‌ ಹೇಳಿದಾಗ ತಕ್ಷಣ ಒಪ್ಪಿಕೊಂಡರಂತೆ. ಅದಕ್ಕೆ ಕಾರಣ ರೋಹಿತ್‌ ಅವರ ಗೆಳೆತನ.

ಈ ಸಿನಿಮಾದ ಎಲ್ಲ ನಾಯಕಿಯರು ಬೇರೆ ಬೇರೆ ರೀತಿಯಲ್ಲಿ ಸಮಾಜದ ಎಲ್ಲ ಮಹಿಳೆಯರಿಗೂ ಕನೆಕ್ಟ್ ಆಗುತ್ತಾರೆ.

-ರೋಹಿತ್‌ ಪದಕಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌