ಆ್ಯಪ್ನಗರ

ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತಾ 'ಡಿಯರ್ ಕಾಮ್ರೇಡ್'?

ಡಿಯರ್ ಕಾಮ್ರೇಡ್ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಬಾಕ್ಸ್ ಆಫೀಸಲ್ಲು ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಿಲ್ಲ ಎಂದಿವೆ ಮೂಲಗಳು.

Vijaya Karnataka Web 3 Aug 2019, 2:32 pm
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ತಾರಾ ಜೋಡಿಯ ರೊಮ್ಯಾಂಟಿಕ್ ಡ್ರಾಮಾ ಡಿಯರ್ ಕಾಮ್ರೇಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದಿವೆ ಬಾಕ್ಸ್ ಆಫೀಸ್ ಮೂಲಗಳು. ಕಥೆಯನ್ನು ಅನಗತ್ಯವಾಗಿ ಎಳೆದಿರಿವುದೇ ಇದಕ್ಕೆ ಕಾರಣ ಎನ್ನಲಾಗಿದೆ.
Vijaya Karnataka Web dear-comrade1


ಕಡೆಗೆ ಚಿತ್ರತಂಡ ರೀ ಎಡಿಟ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಿದ್ದರೂ ಅಷ್ಟಾಗಿ ವರ್ಕೌಟ್ ಆಗಿಲ್ಲವಂತೆ. ಬಿಡುಗಡೆಯಾದ ಮೂರು ದಿನಗಳಲ್ಲಿ ₹ 18 ಕೋಟಿ ಗಳಿಸಿದ ಡಿಯರ್ ಕಾಮ್ರೇಡ್ ವೀಕ್ ಡೇಸ್‌ನಲ್ಲಿ ಮುಗ್ಗರಿಸಿದ. ಮೊದಲ ವಾರದಲ್ಲಿ ಈ ಸಿನಿಮಾ ಕೇವಲ ₹ 21 ಕೋಟಿ ಮಾತ್ರ ಗಳಿಸಿದೆಯಂತೆ.

ಇದಾದ ಒಂದೇ ವಾರಕ್ಕೆ ಟಾಲಿವುಡ್‌ನಲ್ಲಿ ರಾಕ್ಷಸಡು, ಗುಣ 369 ಸಿನಿಮಾಗಳು ಬಿಡುಗಡೆಯಾಗಿ ಆ ಸಿನಿಮಾಗಳ ಬಗ್ಗೆ ಪಾಸಿಟೀವ್ ಟಾಕ್ ಕೇಳಿಬಂದಿದ್ದು 'ಕಾಮ್ರೇಡ್' ಕಲೆಕ್ಷನ್ ಹೊಡೆತ ಬಿದ್ದಿದೆ. ಬಿಡುಗಡೆಯಾದ ಎಲ್ಲಾ ಕಡೆಯೂ ಕಲೆಕ್ಷನ್ ಹೇಳಿಕೊಳ್ಳುವಂತಿಲ್ಲ ಎಂದಿವೆ ಮೂಲಗಳು. [ಡಬ್ಬಿಂಗ್ ಸಿನಿಮಾಗಳಿಗೆ ಸ್ಯಾಂಡಲ್‍ವುಡ್‌ನಲ್ಲಿ ನೀರಸ ಪ್ರತಿಕ್ರಿಯೆ]

ಡಿಯರ್ ಕಾಮ್ರೇಡ್ ಸಿನಿಮಾ ಸೇಫ್ ವಲಯಕ್ಕೆ ಹೋಗಬೇಕಾದರೆ ಕನಿಷ್ಠ ₹ 34 ಕೋಟಿ ಗಳಿಕೆ ಮಾಡಬೇಕಂತೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾದ ಮಾತಾಗಿದ್ದು, ಭಾರಿ ನಷ್ಟ ತಪ್ಪಿದ್ದಲ್ಲ ಎಂದಿದ್ದಾರೆ ಬಾಸ್ಕ್ ಆಫೀಸ್ ವಿಶ್ಲೇಷಕರು. ಸರಿಸುಮಾರು ಎಲ್ಲಾ ಏರಿಯಾಗಳಲ್ಲೂ ಡಿಯರ್ ಕಾಮ್ರೇಡ್ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲವಂತೆ. [ರಶ್ಮಿಕಾ ಜತೆ 'ಲಿಪ್‌ ಲಾಕ್' ಸೀನ್ ನೈಜವಾದುದಲ್ಲ: ವಿಜಯ್ ದೇವರಕೊಂಡ]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌