ಆ್ಯಪ್ನಗರ

'ಡಿಯರ್ ಕಾಮ್ರೇಡ್' ಕನ್ನಡ ಟ್ರೇಲರ್; ವಿಜಯ್ ಡಬ್ಬಿಂಗ್‌ ಬಗ್ಗೆ ಅಪಶೃತಿ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟನೆಯ ಡಿಯರ್ ಕಾಮ್ರೇಡ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಮುಖ್ಯವಾಗಿ ವಿಜಯ್ ಡಬ್ಬಿಂಗ್ ಧ್ವನಿ ಬಗ್ಗೆ ಹಲವಾರು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.

Vijaya Karnataka Web 13 Jul 2019, 12:33 pm
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ತಾರಾಗಣದ ಭರ್ಜರಿ ಸಿನಿಮಾ ಡಿಯರ್ ಕಾಮ್ರೇಡ್ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇದೀಗ ಕನ್ನಡ ಟ್ರೇಲರ್ ಸಹ ರಿಲೀಸ್ ಆಗಿದ್ದು ಯೂಟ್ಯೂಬ್‍ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Vijaya Karnataka Web dear-comrade1


"ಒಬ್ಬ ಕಾಮ್ರೇಡ್ ಹೋರಾಡಿದರೆ, ಆ ಹೋರಾಟ ಆತನಿಗೆ ಖುಷಿ ಕೊಡ್ಬೇಕು, ಸ್ವತಂತ್ರ ನೀಡಬೇಕು, ನಿನ್ನನ್ನು ನೋಡಿದರೆ ಹಾಗೆ ಕಾಣಲ್ಲ" ಎಂಬ ಡೈಲಾಗ್‌ನೊಂದಿಗೆ ಆರಂಭವಾಗುತ ಟ್ರೇಲರ್‌ನಲ್ಲಿ ಲವ್, ಆ್ಯಕ್ಷನ್, ಸೆಂಟಿಮೆಂಟ್, ಎಮೋಷನ್ ಎಲ್ಲಾ ಮಸಾಲೆ ಅಂಶಗಳು ಇರುವುದನ್ನು ಕಾಣಬಹುದು.

"ನನ್ನನ್ನು ಹೆದರಿಸ್ತೀನಿ ಅಂದುಕೊಂಡು ನೀವೆ ಹೆದರಿದ್ದೀರಾ? ಕಾಣಿಸ್ತಿದೆ" ಎಂಬ ಡೈಲಾಗ್ ಕೊನೆಗೆ ಬರುತ್ತದೆ. ವಿದ್ಯಾರ್ಥಿ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದರೆ, ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯಾಗಿ ರಶ್ಮಿಕಾ ಮಿಂಚಿದ್ದಾರೆ. ಇವರಿಬ್ಬರ ನಡುವಿನ ಲವ್ ಸ್ಟೋರಿ ಇದು. ಇಲ್ಲೂ ವಿಜಯ್ ತಮ್ಮ ಎಂದಿನ ಸ್ಟೈಲ್ ಬಿಟ್ಟುಕೊಟ್ಟಿಲ್ಲ. [ಬೆಂಗಳೂರಲ್ಲಿ 'ಲಿಪ್‌ಲಾಕ್' ರಹಸ್ಯ ಬಿಚ್ಚಿಟ್ಟ ರಶ್ಮಿಕಾ, ವಿಜಯ್ ದೇವರಕೊಂಡ]

ವಿಜಯ್ ದೇವರಕೊಂಡಗೆ ನೀಡಿರುವ ಕನ್ನಡ ಡಬ್ಬಿಂಗ್ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ವಿಜಯ್ ದೇವರಕೊಂಡಗೆ ನೀಡಿರುವ ಕನ್ನಡ ಡಬ್ಬಿಂಗ್ ಹೊಂದಿಕೆಯಾಗುತ್ತಿಲ್ಲ. ಟ್ರೇಲರ್ ಚೆನ್ನಾಗಿದೆ, ಆದರೆ ವಿಜಯ್ ದೇವರಕೊಂಡಗೆ ಡಬ್ಬಿಂಗ್ ಹೇಳಿರುವ ಆ ಮಹಾತ್ಮನಿಗೆ ಸಾಷ್ಟಾಂಗ ನಮಸ್ಕಾರ ಹಾಕ್ಬೇಕು ಎಂಬ ಕಾಮೆಂಟ್‌ಗಳು ಬಂದಿವೆ.

ವಿಜಯ್ ದೇವರಕೊಂಡ ಅವರಿಗೆ ವಸಿಷ್ಠ ಸಿಂಹ ಡಬ್ಬಿಂಗ್ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ವಿಜಯ್ ದೇವರಕೊಂಡಗೆ ಡಬ್ಬಿಂಗ್ ಹೇಳಿರುವವರು ಚೈಲ್ಡ್ ಆರ್ಟಿಸ್ಟ್ ತರಹ ಇದೆ ಎಂಬ ಕಾಮೆಂಟ್‍ಗಳು ಬಂದಿವೆ. ಬಹುತೇಕ ಕಾಮೆಂಟ್‌ಗಳು ವಿಜಯ್ ದೇವರಕೊಂಡಗೆ ಡಬ್ಬಿಂಗ್‌ಗೆ ಸಂಬಂಧಿಸಿದಂತೆ ಬಂದಿರುವುದು ವಿಶೇಷ. ಅಂದಹಾಗೆ ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ಅವರದೇ ಡಬ್ಬಿಂಗ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌