ಆ್ಯಪ್ನಗರ

ಧನ್ಯಾ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

ರಾಜ್‌ ಕುಟುಂಬದಿಂದ ಬಂದ ಧನ್ಯಾ ರಾಮ್‌ಕುಮಾರ್‌ ಮತ್ತು ನಟ ಸೂರಜ್‌ ಗೌಡ ನಟನೆಯ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ. ಧನ್ಯಾ ನಟನೆಯ ಚೊಚ್ಚಲ ಚಿತ್ರಕ್ಕೆ 'ನಿನ್ನ ಸನಿಹಕೆ' ಎಂಬ ಹೆಸರನ್ನು ಇಡಲಾಗಿದೆ.

Vijaya Karnataka Web 19 Jul 2019, 5:00 am
ಕೆಲ ದಿನಗಳ ಹಿಂದೆ ಧನ್ಯಾ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಈಗ ಟೈಟಲ್‌ ಪ್ರಕಟಿಸಲಾಗಿದೆ. ಚಿತ್ರವನ್ನು ಸುಮನ್‌ ಜಾದುಗರ್‌ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಲವ್‌ ಸ್ಟೋರಿ ಇದೆ. ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ.
Vijaya Karnataka Web dhanya.


ಸುಮನ್‌ ಈ ಹಿಂದೆ ಕನ್ನಡವೂ ಸೇರಿದಂತೆ ತಮಿಳು ತೆಲುಗು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಕನ್ನಡದ ಸಿಲಿಕಾನ್‌ ಸಿಟಿ ಮತ್ತು ಕಮಲ್‌ ಹಾಸನ್‌ ನಟನೆಯ ಉತ್ತಮ್‌ ವಿಲನ್‌ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಚಿತ್ರದ ಕತೆ ಇಷ್ಟವಾದ್ದರಿಂದ ನಟಿಸಲು ಒಪ್ಪಿಕೊಂಡೆ ಎಂದಿದ್ದಾರೆ ಧನ್ಯಾ. ಮಾಡೆಲ್‌ ಕ್ಷೇತ್ರದಿಂದ ಬಂದ ಸೂರಜ್‌ ಗೌಡ ಮದುವೆಯ ಮಮತೆಯ ಕರೆಯೋಲೆ ಮತ್ತು ಕಹಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌