ಆ್ಯಪ್ನಗರ

ಒಂಬತ್ತು ವರ್ಷಗಳ ಲವ್‌ ನಂತರ ಡಿಸೆಂಬರ್‌ನಲ್ಲಿ ಐಂದ್ರಿತಾ- ದಿಗಂತ್‌ ಸರಳ ಕಲ್ಯಾಣ

ಸ್ಯಾಂಡಲ್‌ವುಡ್‌ನ ಮೋಸ್ಟ್‌ ಡಿಸೈರಬಲ್‌ ಜೋಡಿಯಾಗಿರುವ ಐಂದ್ರಿತಾ ರೇ ಹಾಗೂ ದಿಗಂತ ಸಪ್ತಪದಿ ತುಳಿಯಲು ಸಜ್ಜಾಗಿದ್ದು, ತಮ್ಮ ವಿವಾಹವನ್ನು ಸರಳವಾಗಿ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

Vijaya Karnataka 22 Nov 2018, 5:00 am
ಹರೀಶ್‌ ಬಸವರಾಜ್‌
Vijaya Karnataka Web aindritha 1.jpg98


ಸಿನಿಮಾ ರಂಗದಲ್ಲಿ ಈಗ ಎಲ್ಲಡೆಯೂ ಮದುವೆಯದ್ದೇ ಸುದ್ದಿ. ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್‌ನ ಕ್ಯೂಟ್‌ ಜೋಡಿಗಳಾದ ರಣ್‌ವೀರ್‌ ಮತ್ತು ದೀಪಿಕಾ ಮದುವೆಯಾದರು. ನಟ ಧ್ರುವ ಸರ್ಜಾ ಕೂಡಾ ಮದುವೆಯ ಹೊಸ್ತಿಲಲ್ಲಿದ್ದಾರೆ. ಈಗ ದಿಗಂತ್‌ ಮತ್ತು ನಟಿ ಐಂದ್ರಿತಾ ರೇ ಅವರ ಮದುವೆ ಡಿಸೆಂಬರ್‌ 11 ಮತ್ತು 12ರಂದು ಬೆಂಗಳೂರಿನಲ್ಲಿ ಬಹಳ ಸರಳವಾಗಿ ನಡೆಯಲಿದೆಯಂತೆ.

ಕೆಲ ವರ್ಷಗಳಿಂದ ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು. ಮಾಧ್ಯಮಗಳು ಪ್ರಶ್ನೆ ಮಾಡಿದಾಗಲೆಲ್ಲ, ಮದುವೆ ಬಗ್ಗೆ ಇಬ್ಬರೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಅಂತಿಮವಾಗಿ ಮದುವೆ ದಿನಾಂಕ್‌ ಫೈನಲ್‌ ಮಾಡಿಕೊಂಡಿದ್ದಾರೆ. ಹೀಗೆ ದಿನಾಂಕವನ್ನು ಫೈನಲ್‌ ಮಾಡಿಕೊಳ್ಳುವ ಜತೆಗೆ ತಮ್ಮ ಮದುವೆಯನ್ನು ಆದಷ್ಟು ಸರಳವಾಗಿ ಆಚರಿಸಿಕೊಂಡು, ಮದುವೆಗೆ ಆಗುವ ಖರ್ಚನ್ನು ಚಾರಿಟಿಗೆ ನೀಡಲು ನಿರ್ಧಾರ ಮಾಡಿದ್ದಾರಂತೆ.

ಈ ಬಗ್ಗೆ ಗೋವಾದಿಂದ ಮಾತನಾಡಿದ ನಟಿ ಐಂದ್ರಿತಾ ರೇ. 'ಇತ್ತೀಚಿನೆ ದಿನಗಳಲ್ಲಿ ಮದುವೆಗಳು ಭಾರಿ ದುಬಾರಿಯಾಗುತ್ತಿವೆ. ಹಾಗಾಗಿ ನಾನು ದಿಗಂತ್‌, ನಮ್ಮ ಕುಟುಂಬ ಮತ್ತು ಅವರ ಕುಟುಂಬ ಎಲ್ಲರೂ ಸೇರಿ ಮದುವೆಯನ್ನು ಸರಳವಾಗಿ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೇವೆ. ಈ ಮದುವೆಯಲ್ಲಿ ಯಾವುದೇ ಕಾರಣಕ್ಕೂ, ಹೂವು, ಹಣ್ಣು ಯಾವುದನ್ನು ನಾವು ವ್ಯರ್ಥ ಮಾಡುವುದಿಲ್ಲ. ಮದುವೆ ಸಿಂಪಲ್‌ ಆಗಿರಲಿದ್ದು, ಇಂಡಸ್ಟ್ರಿಯವರಿಗೆ ಡಿ. 15ಕ್ಕೆ ಸಣ್ಣ ಔತಣಕೂಟವನ್ನು ಇಟ್ಟುಕೊಂಡಿದ್ದೇವೆ. ಇನ್ನು ಮದುವೆ ಬೆಂಗಾಲಿ ಮತ್ತು ಕರ್ನಾಟಕ ಎರಡೂ ಸಂಪ್ರದಾಯಗಳಂತೆ ನಡೆಯುತ್ತದೆ.,'ಎನ್ನುತ್ತಾರೆ.

'ದಿಗಂತ್‌ರನ್ನು ಬಂಗಾಳಿ ಮದುಮಗನ ಡ್ರೆಸ್‌ನಲ್ಲಿ ನೋಡಲು ನಾನು ಕಾತುರಳಾಗಿದ್ದೇನೆ. 11ರಂದು ಹಲದಿ ಶಾಸ್ತ್ರ ನಡೆಯಲಿದೆ. ಮದುವೆ ಮಾತುಕತೆಗಳು ಆರಂಭವಾಗಿ 3 ತಿಂಗಳಾಗಿದೆ ಅಷ್ಟೇ. ದಿಗಂತ್‌ ಅವರ ಮನೆಯ ಟೆರೇಸ್‌ನಲ್ಲಿ ನಮ್ಮ ಕುಟುಂಬದವರು ಮಾತನಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಮದುವೆಗೂ ಒಂದು ವಾರದ ಮುಂಚೆ ನಾನು ಮತ್ತು ದಿಗ್ಗಿ, ಅನಾಥಾಶ್ರಮ ಮತ್ತು ಪ್ರಾಣಿಗಳ ಆಶ್ರಯ ತಾಣಕ್ಕೆ ಹೋಗಿ ನಮ್ಮ ಖುಷಿಯನ್ನು ಹಂಚಿಕೊಳ್ಳಲಿದ್ದೇವೆ'ಎಂದು ಐಂದ್ರಿತಾ ತಿಳಿಸಿದ್ದಾರೆ.

9 ವರ್ಷದ ಪ್ರೀತಿ

ದಿಗಂತ್‌ ಮತ್ತು ಐಂದ್ರಿತಾ ಅವರದ್ದು ಸುಮಾರು 9 ವರ್ಷಗಳಷ್ಟು ಲಾಂಗ್‌ ಲವ್‌ ಸ್ಟೋರಿ. ಮನಸಾರೆ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾದ ನಂತರ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಅಂದಿನಿಂದ ಇಂದಿನವರೆಗೂ ಅವರ ಪ್ರೀತಿಗೆ ಯಾವುದೇ ಧಕ್ಕೆ ಬಂದಿಲ್ಲ. ಈ ನಡುವೆ ದಿಗಂತ್‌ ಮತ್ತು ಐಂದ್ರಿತಾ ಇಬ್ಬರೂ ಬಾಲಿವುಡ್‌ನಲ್ಲಿಯೂ ಮಿಂಚಿದರು. ಸದ್ಯ ಐಂದ್ರಿತಾ ನಟನೆಯ ಹಿಂದಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಬೆಂಗಾಳಿ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ.

====

ಮನಸಾರೆ ಸಿನಿಮಾ ಸೆಟ್‌ನಲ್ಲಿ ನಮ್ಮ ನಡುವೆ ಅನುಬಂಧ ಬೆಳೆಯಿತು. ಆದರೂ ಆ ಸಿನಿಮಾ ಬಿಡುಗಡೆಯಾಗಿ 2010ರಲ್ಲಿ ನಾವಿಬ್ಬರೂ ರಿಲೇಶನ್‌ಶಿಪ್‌ಗೆ ಬಂದೆವು. ನನ್ನ ಆತ್ಮೀಯ ಸ್ನೇಹಿತನನ್ನು ಮದುವೆಯಾಗುತ್ತಿರುವುದಕ್ಕೆ ನಾನು ಬಹಳ ಎಕ್ಸೈಟ್‌ ಆಗಿದ್ದೇನೆ.

-ಐಂದ್ರಿತಾ ರೇ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌