ಆ್ಯಪ್ನಗರ

ಸುಮಲತಾ ಅಂಬರೀಷ್‍ರ 'ಡಾಟರ್‌ ಆಫ್‌ ಪಾರ್ವತಮ್ಮ' ಯಾಕೆ ನೋಡಬೇಕು?

ಹರಿಪ್ರಿಯಾ ನಟನೆಯ ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರ ಇಂದು (ಮೇ 24) ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದ ಬಗ್ಗೆ ನಿರ್ದೇಶಕ ಶಂಕರ್‌ ಲವಲವಿಕೆ ಜತೆ ಮಾತನಾಡಿದ್ದಾರೆ. ಡಾಟರ್‌ ಆಫ್‌ ಪಾರ್ವತಮ್ಮ ನೈಜ ಘಟನೆ ಆಧರಿಸಿದ ಸಿನಿಮಾವಾಗಿದೆ. ಎಲ್ಲ ಕಾರಣಗಳಿಂದ ಪ್ರೇಕ್ಷಕರು ಸಿನಿಮಾ ನೋಡಬೇಕು ಎಂದು ನಿರ್ದೇಶಕನಾಗಿ ನಾನು ಹೇಳುತ್ತೇನೆ ಎಂದು ಶಂಕರ್‌ ಮಾತಾಗಿದೆ.

Vijaya Karnataka 24 May 2019, 8:00 am
* ಹರೀಶ್‌ ಬಸವರಾಜ್‌
Vijaya Karnataka Web daughter


ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರದಲ್ಲಿ ಸಾಕಷ್ಟು ವಿಶೇಷಗಳಿದ್ದು, ಸಿನಿಮಾ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ವಿಶ್ವಾಸವನ್ನು ನಿರ್ದೇಶಕ ಶಂಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಈ ಚಿತ್ರದಲ್ಲಿ ಸುಮಲತಾ ಅಂಬರೀಷ್‌ ಅವರ ಅಭಿನಯದ ಜತೆಗೆ ಹರಿಪ್ರಿಯಾ ಮೊದಲ ಬಾರಿಗೆ ತನಿಖಾಧಿಕಾರಿ ಪಾತ್ರ ಮಾಡಿರುವುದು ವಿಶೇಷ. ಇದು ಹರಿಪ್ರಿಯಾ ಅವರ 25ನೇ ಚಿತ್ರ. ಮಿದುನ್‌ ಮುಕುಂದನ್‌ ಅವರ ಅದ್ಭುತವಾದ ಸಂಗೀತವಿದೆ. ಜತೆಗೆ ಒಂದು ಕಮರ್ಷಿಯಲ್‌ ಸಬ್ಜೆಕ್ಟ್ನ್ನು ನಾಯಕಿ ಪ್ರಧಾನವಾಗಿಟ್ಟುಕೊಂಡು ಮಾಡಿದ್ದೇವೆ' ಎಂದು ಅವರು ಹೇಳಿದ್ದಾರೆ.

ಇನ್ನು ಸಿನಿಮಾದಲ್ಲಿ ಹರಿಪ್ರಿಯಾ ಫೈಟ್‌ ಮಾಡಿದ್ದಾರೆ. ಅವರ ಮತ್ತು ಸುಮಲತಾ ನಡುವಿನ ಕಾಂಬಿನೇಶನ್‌ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರ ಒಬ್ಬ ನಾಯಕನ ಸಿನಿಮಾ ಬಿಡುಗಡೆಯಾಗುವ ರೇಂಜ್‌ಗೆ ಬಿಡುಗಡೆಯಾಗುತ್ತಿದೆ. ಟ್ರೇಲರ್‌ ಕೂಡ ಹಿಟ್‌ ಆಗಿತ್ತು. ಅಲ್ಲದೆ ಡಾಟರ್‌ ಆಫ್‌ ಪಾರ್ವತಮ್ಮ ನೈಜ ಘಟನೆ ಆಧರಿಸಿದ ಸಿನಿಮಾವಾಗಿದೆ. ಎಲ್ಲ ಕಾರಣಗಳಿಂದ ಪ್ರೇಕ್ಷಕರು ಸಿನಿಮಾ ನೋಡಬೇಕು ಎಂದು ನಿರ್ದೇಶಕನಾಗಿ ನಾನು ಹೇಳುತ್ತೇನೆ ಎಂದು ಶಂಕರ್‌ ಮಾತಾಗಿದೆ.

ದಿಶಾ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ಅಡಿ ಶಶಿಧರ್‌ ಕೆ. ಎಂ, ವಿಜಯಲಕ್ಷ್ಮೇ ಕೃಷ್ಣೇಗೌಡ, ಶ್ವೇತಾ ಮಧುಸೂದನ್‌, ಸಂದೀಪ್‌ ಶಿವಮೊಗ್ಗ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ನನ್ನ ತಂತ್ರಜ್ಞರ ತಂಡ, ನಿರ್ಮಾಪಕರು, ಕಲಾವಿದರು ಎಲ್ಲರೂ ನನಗೆ ನೀಡಿದ ಪ್ರೋತ್ಸಾಹದಿಂದ ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರವನ್ನು ನಾನು ಜನ ಇಷ್ಟಪಡುವಂತೆ ಮಾಡಿದ್ದೇನೆ. ಜನ ಇಂದು ನೋಡಿ ನಮ್ಮನ್ನು ಹರಸಬೇಕಷ್ಟೇ.

-ಶಂಕರ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌