ಆ್ಯಪ್ನಗರ

Prabhas: 'ಸಲಾರ್‌' ಶೂಟಿಂಗ್‌ ಸೆಟ್‌ನಲ್ಲಿ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದ ಪ್ರಶಾಂತ್ ನೀಲ್!

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದ 'ಸಲಾರ್' ಮೇಲೆ ಸಿನಿಪ್ರಿಯರು ಕುತೂಹಲದ ಕಣ್ಣಿಟ್ಟಿದ್ದಾರೆ. ಇದು ಬಿಗ್ ಬಜೆಟ್ ಸಿನಿಮಾವಾಗಿದ್ದು, ತೆರೆಗೆ ಬರಲು ಸರಿಯಾಗಿ ಒಂದು ವರ್ಷ ಬಾಕಿ ಇದೆ. ಈ ಮಧ್ಯೆ ಈ ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 26 Sep 2022, 3:35 pm

ಹೈಲೈಟ್ಸ್‌:

  • ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ
  • ಪ್ರಭಾಸ್ ನಟನೆಯ ಬಿಗ್ ಬಜೆಟ್ ಸಿನಿಮಾ ಇದು
  • ಈಚೆಗಷ್ಟೇ ಲೀಕ್ ಆಗಿತ್ತು 'ಸಲಾರ್' ಸಿನಿಮಾದಲ್ಲಿನ ಪ್ರಭಾಸ್ ಲುಕ್‌!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web director prashanth neel
'ಸಲಾರ್‌' ಶೂಟಿಂಗ್‌ ಸೆಟ್‌ನಲ್ಲಿ ಎಡವಟ್ಟು; ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದ ಪ್ರಶಾಂತ್ ನೀಲ್!
ನಟ ಪ್ರಭಾಸ್ ಮತ್ತು 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮೇಲೆ ಎಲ್ಲರ ಕಣ್ಣು ಇದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಸಲಾರ್‌' ಸಿನಿಮಾವನ್ನು ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ 'ಸಲಾರ್‌'ಗೆ ಬಿರುಸಿನ ಚಿತ್ರೀಕರಣ ನಡಯುತ್ತಿದೆ. ಆದರೆ ಈ ಮಧ್ಯೆ ಚಿತ್ರತಂಡಕ್ಕೆ ಬೇಸರವಾಗುವಂತಹ ಒಂದು ಘಟನೆ ನಡೆದಿದೆ. ಅದೇನೆಂದರೆ, ಪ್ರಭಾಸ್ ಶೂಟಿಂಗ್ ಸೆಟ್‌ನಲ್ಲಿರುವ ಒಂದು ಫೋಟೋವನ್ನು ವೈರಲ್ ಮಾಡಲಾಗಿದೆ.

ಬೇಸರ ಮಾಡಿಕೊಂಡ ಪ್ರಶಾಂತ್ ನೀಲ್

ಯಾವುದೇ ನಿರ್ದೇಶಕರಿಗೆ ಆಗಲಿ, ತಮ್ಮ ಸಿನಿಮಾವನ್ನು ಉತ್ತಮವಾಗಿ ಚಿತ್ರಿಸಿ, ದೊಡ್ಡ ಪರದೆ ಮೇಲೆ ಪ್ರೇಕ್ಷಕರಿಗೆ ತೋರಿಸಬೇಕು ಎಂಬ ಕನಸಿರುತ್ತದೆ. ಅದಕ್ಕಾಗಿ ಹಗಲಿರುಳು ಕೆಲಸ ಮಾಡುವ ನಿರ್ದೇಶಕರು ಮತ್ತು ಅವರ ತಂಡಕ್ಕೆ ಇಂಥ ಘಟನೆಗಳು ನೋವು ನೀಡುವುದು ಸಹಜ. ಪ್ರಭಾಸ್ ಅವರ ಲುಕ್ ರಿವೀಲ್ ಎಂದು ಹೇಳುತ್ತ ಫೋಟೋಗಳನ್ನು ವೈರಲ್ ಮಾಡಲಾಗಿದೆ. ಸಿನಿಮಾದ ಫಸ್ಟ್‌ ಲುಕ್, ಟೀಸರ್, ಟ್ರೇಲರ್ ನೋಡಲು ಫ್ಯಾನ್ಸ್ ಕಾದಿರುತ್ತಾರೆ. ಆದರೆ ಅದೆಲ್ಲದರ ಬಿಡುಗಡೆಗೂ ಮುನ್ನವೇ ಸಿನಿಮಾದ ಫೋಟೋಗಳನ್ನು ಹೀಗೆ ಲೀಕ್ ಮಾಡಿರುವುದು ನಿರ್ದೇಶಕ ಪ್ರಶಾಂತ್‌ಗೆ ಬೇಸರ ಉಂಟುಮಾಡಿದೆಯಂತೆ.

Yash: 'ಸ್ಟಾರ್' ನಟನ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡ್ತಾರಾ ನಟ ಯಶ್? 'ರಾಕಿ ಭಾಯ್' ಬಗ್ಗೆ ಕೇಳಿಬಂತು ಬ್ರೇಕಿಂಗ್ ನ್ಯೂಸ್‌!
ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದ್ರಾ ಪ್ರಶಾಂತ್ ನೀಲ್‌?

'ಸಲಾರ್‌' ಸಿನಿಮಾದ ಶೂಟಿಂಗ್ ವಿಡಿಯೋಗಳು, ಫೋಟೋಗಳು ಲೀಕ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕರ್ನೂಲ್‌ನಲ್ಲಿ ಶೂಟಿಂಗ್‌ ವೇಳೆಯ ಫೋಟೋ ಮತ್ತು ವಿಡಿಯೋಗಳು ಕೂಡ ಲೀಕ್ ಆಗಿದ್ದವು. ಹೀಗೆ ಪದೇ ಪದೇ ಶೂಟಿಂಗ್ ವೇಳೆ ಆಗುತ್ತಿರುವ ಎಡವಟ್ಟುಗಳಿಂದ ಬೇಸತ್ತಿರುವ ಪ್ರಶಾಂತ್, ಇನ್ಮುಂದೆ ಯಾರೂ ಕೂಡ ಶೂಟಿಂಗ್ ಸೆಟ್‌ನಲ್ಲಿ ಮೊಬೈಲ್‌ ಯೂಸ್ ಮಾಡಬಾರದು ಎಂದು ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದ್ದಾರಂತೆ!
Adipurush: ಅಯೋಧ್ಯೆಯಲ್ಲಿ ರಿಲೀಸ್‌ ಆಗಲಿದೆ ಪ್ರಭಾಸ್ ನಟನೆಯ 'ಆದಿಪುರುಷ್' ಟೀಸರ್
ಶೂಟಿಂಗ್ ಸೆಟ್‌ಗೆ ಬರುವ ಚಿತ್ರತಂಡದ ಕಲಾವಿದರು, ತಂತ್ರಜ್ಞರು, ಅವರ ಅಸಿಸ್ಟೆಂಟ್‌ಗಳು, ಇತರೆ ಸಿಬ್ಬಂದಿಗಳು ತಮ್ಮ ಮೊಬೈಲ್‌ಗಳನ್ನು ಲಾಕರ್, ಕ್ಯಾರಾವಾನ್ ಅಥವಾ ರೂಮ್‌ಗಳಲ್ಲೇ ಇಟ್ಟುಬರಬೇಕು. ಅಲ್ಲದೆ, ಈ ರೀತಿ ಫೋಟೋ, ವಿಡಿಯೋ ಲೀಕ್ ಆಗುವುದನ್ನು ತಡೆಯಲು ಸೆಟ್‌ಗೆ ಬರುವ ಪ್ರತಿಯೊಬ್ಬರ ಬಳಿಯೂ ಮೊಬೈಲ್ ಇದೆಯೋ ಇಲ್ಲವೋ ಎಂಬುದನ್ನೂ ತಪಾಸಣೆ ಮಾಡಲಾಗುತ್ತದೆಯಂತೆ.

ಕಮಲ್ ಹಾಸನ್ ಮೇಲೆ ಕಣ್ಣಿಟ್ಟ ಪ್ರಶಾಂತ್ ನೀಲ್ & ರಾಜಮೌಳಿ; ಇದು ಫ್ಯಾನ್ಸ್ ಥ್ರಿಲ್ ಆಗುವ ವಿಷಯ!
ಅಂದಹಾಗೆ, ಈ ರೀತಿ ಮೊಬೈಲ್ ಬ್ಯಾನ್ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ರಾಜಮೌಳಿ ಅವರು ಕೂಡ ತಮ್ಮ 'ಆರ್‌ಆರ್‌ಆರ್' ಸಿನಿಮಾದ ಶೂಟಿಂಗ್ ವೇಳೆ ಮೊಬೈಲ್ ಬ್ಯಾನ್ ಮಾಡಿದ್ದರು.

ಇನ್ನು, 'ಸಲಾರ್‌' ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು, 2023ರ ಸೆ.28ರಂದು ಸಿನಿಮಾ ತೆರೆಕಾಣಲಿದೆ. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾಗೆ ನಾಯಕಿಯಾಗಿ ಶ್ರುತಿ ಹಾಸನ್ ಇದ್ದಾರೆ. ಕನ್ನಡದ ಪ್ರತಿಭೆಗಳಾದ ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ನಟ ಮಧು ಗುರುಸ್ವಾಮಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. 'ಸಲಾರ್' ಸಿನಿಮಾದ 'ರಾಜಮನಾರ್' ಪಾತ್ರವನ್ನು ಖ್ಯಾತ ತೆಲುಗು ನಟ ಜಗಪತಿ ಬಾಬು ಮಾಡುತ್ತಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌