ಆ್ಯಪ್ನಗರ

ಹುಲಿರಾಯದ ಹುಡುಗಿ ಈಗ ಸಹಾಯಕ ನಿರ್ದೇಶಕಿ

'ರಾಂಚಿ ಒಂದು ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದ ಫಸ್ಟ್‌ ಹಾಫ್‌ನ್ನು ರಾಂಚಿಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಸಿನಿ ಬದುಕಿಗೆ ತೀರ ಹತ್ತಿರವಾಗಿದೆ. ಚಿತ್ರರಂಗದಲ್ಲಿ ನಿರ್ದೇಶಕರ ಮನಸ್ಥಿತಿ, ಜೀವನಶೈಲಿ, ಏರುಪೇರುಗಳನ್ನು ಸಹಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಶಶಿಕಾಂತ್‌ ಘಟ್ಟಿ .

Vijaya Karnataka 5 Jun 2019, 3:44 pm
ಹುಲಿರಾಯ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ನಟಿ ದಿವ್ಯಾ ಉರುಡುಗ, ಇತ್ತಿಚೆಗೆ ಫೇಸ್ ಟು ಫೇಸ್‌ ಎಂಬ ಸಿನಿಮಾದ ನಟನೆಯ ಮೂಲಕ ಗಮನ ಸೆಳೆದಿದ್ದರು.ಈಗ ರಾಂಚಿ ಎಂಬ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ.
Vijaya Karnataka Web divya

ಶಶಿಕಾಂತ್‌ ಘಟ್ಟಿ ನಿರ್ದೇಶನ ಮಾಡುತ್ತಿರುವ 'ರಾಂಚಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಅವರು ನಟಿಸುತ್ತಿದ್ದಾರೆ. 'ಈ ಸಿನಿಮಾದಲ್ಲಿ ನನ್ನದು ಸಹಾಯಕ ನಿರ್ದೇಶಕಿಯ ಪಾತ್ರ, ನನ್ನ ಹಿಂದಿನ ಸಿನಿಮಾಗಳ ಶೂಟಿಂಗ್‌ ಟೈಮ್‌ನಲ್ಲಿ ಸಹಾಯಕ ನಿರ್ದೇಶಕರುಗಳನ್ನು ಗಮನಿಸಿದ್ದೇನೆ. ಆದರೆ ರಾಂಚಿಯ ಪಾತ್ರಕ್ಕಾಗಿ ಅದು ನನಗೆ ಸಹಾಯಕ್ಕೆ ಬಂತು. ಸಹಾಯಕ ನಿರ್ದೇಶಕರ ಕೆಲಸ ಸಿನಿಮಾದಲ್ಲಿ ಬಹಳ ಮಖ್ಯವಾಗಿರುತ್ತದೆ ಮತ್ತು ಅವರಿಗೆ ಜವಬ್ದಾರಿ ಜಾಸ್ತಿ . ಅದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ' ಎನ್ನುತ್ತಾರೆ ನಟಿ ದಿವ್ಯಾ.

'ರಾಂಚಿ ಒಂದು ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದ ಫಸ್ಟ್‌ ಹಾಫ್‌ನ್ನು ರಾಂಚಿಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಸಿನಿ ಬದುಕಿಗೆ ತೀರ ಹತ್ತಿರವಾಗಿದೆ. ಚಿತ್ರರಂಗದಲ್ಲಿ ನಿರ್ದೇಶಕರ ಮನಸ್ಥಿತಿ, ಜೀವನಶೈಲಿ, ಏರುಪೇರುಗಳನ್ನು ಸಹಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಶಶಿಕಾಂತ್‌ ಘಟ್ಟಿ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌