ಇತ್ತೀಚೆಗೆ ಸಿನಿಮಾಗಳಲ್ಲಿ ನಾಯಿಗಳನ್ನು ಮುಖ್ಯ ಪಾತ್ರಧಾರಿಯಾಗಿ ಬಳಸುವ ಟ್ರೆಂಡ್ ಹೆಚ್ಚಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ ಚೇಸ್ ಸಿನಿಮಾ. ಈ ಚಿತ್ರದಲ್ಲಿ ಮ್ಯಾಕ್ಸ್ ಎಂಬ ಹೆಸರಿನ ಲ್ಯಾಬ್ರಡಾರ್ ನಾಯಿ ನಟಿಸುತ್ತಿದ್ದು, ಅದು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್ ಕೊಡಲಿದೆ ಎಂದು ನಿರ್ದೇಶಕ ಹರಿ ಆನಂದ್ ಹೇಳಿದ್ದಾರೆ.
ಈ ನಾಯಿಗೆ ಭಾರತದ ಏಕೈಕ ಶ್ವಾನಗಳ ಮನಶಾಸ್ತ್ರಜ್ಞ 'ಡಾಗ್ ಗುರು' ಅಮೃತ್ ಶ್ರೀಧರ್ ಹಿರಣ್ಯ ತರಬೇತಿ ನೀಡಿದ್ದಾರೆ. ಇದು ಚಿತ್ರದುದ್ದಕ್ಕೂ ಕಾಣಿಸಿಕೊಳ್ಳಲಿದ್ದು, ಬಹಳ ವಿಶಿಷ್ಟವಾದ ಪಾತ್ರ ಮಾಡಿದೆಯಂತೆ. ಅದು ಸಾಮಾನ್ಯ ಸಾಕು ನಾಯಿಯಂತೆ ಕಾಣಿಸಿಕೊಳ್ಳದೆ ತನ್ನ ವಿಶಿಷ್ಟ ಹಾವ ಭಾವಗಳಿಂದ ಪ್ರೇಕ್ಷ ಕರ ಮನಗೆಲ್ಲುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚೇಸ್ನಲ್ಲಿ ಪ್ರಮುಖ ಪಾತ್ರಧಾರಿಯಾದ ನಾಯಿ
ಇತ್ತೀಚೆಗೆ ಸಿನಿಮಾಗಳಲ್ಲಿ ನಾಯಿಗಳನ್ನು ಮುಖ್ಯ ಪಾತ್ರಧಾರಿಯಾಗಿ ಬಳಸುವ ಟ್ರೆಂಡ್ ಹೆಚ್ಚಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ ಚೇಸ್ ಸಿನಿಮಾ.
Vijaya Karnataka 5 Apr 2018, 11:21 am