ಆ್ಯಪ್ನಗರ

ಟಾಲಿವುಡ್‍ಗೆ ಜಿಗಿದ ಟಗರಿನ ’ಡಾಲಿ’ ಧನಂಜಯ್

ಡಾಲಿ ಪಾತ್ರದ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿರುವ ಧನಂಜಯ್‌ಗೆ ತೆಲುಗಿನಿಂದಲೂ ಬೇಡಿಕೆ ಬಂದಿದೆ. ಅಂದುಕೊಂಡಂತೆ ಆದರೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಅವರ ಸಿನಿಮಾದಲ್ಲಿ ಡಾಲಿ ನಟಿಸಲಿದ್ದಾರೆ.

Vijaya Karnataka 21 May 2018, 11:34 am
*ಹರೀಶ್‌ ಬಸವರಾಜ್‌
Vijaya Karnataka Web dhananjaya


ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಕಣ್ಣು ಡಾಲಿ ಖ್ಯಾತಿಯ ನಟ ಧನಂಜಯ ಮೇಲೆ ಬಿದ್ದಿದೆ. ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸುವಂತೆ ಧನಂಜಯ್‌ಗೆ ಆಫರ್‌ ಮಾಡಿರುವ ವರ್ಮ, ಮಾತುಕತೆಗಾಗಿ ಹೈದರಾಬಾದ್‌ಗೂ ಅವರನ್ನು ಕರೆಯಿಸಿಕೊಂಡಿದ್ದಾರೆ. ಮುತ್ತಿನ ನಗರಿಯಲ್ಲಿ ಮಾತುಕತೆ ನಡೆದಿದೆ.

ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವರ್ಮ ಸಿನಿಮಾದಲ್ಲಿ ಧನಂಜಯ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನೆಗೆಟಿವ್‌ ಶೇಡ್‌ ಇರುವಂಥ ಪಾತ್ರವದು ಎನ್ನಲಾಗುತ್ತಿದೆ. ವರ್ಮ ಹೇಳಿರುವ ಕಥೆಗೆ ಫಿದಾ ಆಗಿರುವ ಧನಂಜಯ್‌ ಪಾತ್ರಕ್ಕಾಗಿ ಒಂದಷ್ಟು ತಯಾರಿ ಕೂಡ ಮಾಡಬೇಕಿದೆಯಂತೆ. ಆದರೆ, ಈ ಕುರಿತು ಮಾತನಾಡಲು ಧನಂಜಯ್‌ ನಿರಾಕರಿಸುತ್ತಾರೆ. 'ವರ್ಮ ಅವರನ್ನು ನಾನು ಭೇಟಿ ಮಾಡಿದ್ದು ನಿಜ. ಅವರು ಕಥೆ ಹೇಳಿದ್ದಾರೆ. ನನಗೂ ಕೂಡ ಅದು ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ವರ್ಮ ಅವರೇ ಹೆಚ್ಚಿನ ಮಾಹಿತಿಯನ್ನು ಕೊಡುತ್ತಾರೆ' ಅಂತಾರೆ.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಮ್‌ಗೋಪಾಲ್‌ ವರ್ಮಾ 'ಟಗರು' ಸಿನಿಮಾ ವೀಕ್ಷಿಸಿದ್ದರು. ಈ ಸಿನಿಮಾದಲ್ಲಿ ಧನಂಜಯ ನಿರ್ವಹಿಸಿದ್ದ ಡಾಲಿ ಪಾತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಮುಂದಿನ ದಿನಗಳಲ್ಲಿ ಧನಂಜಯಗಾಗಿ ಸಿನಿಮಾ ಮಾಡುವುದಾಗಿಯೂ ಹೇಳಿದ್ದರು. ಈಗ ತಮ್ಮ ಮಾತನ್ನು ಅವರು ಉಳಿಸಿಕೊಂಡಿದ್ದಾರೆ.

ನಾಗಾರ್ಜುನ ನಟನೆಯ 'ಆಫೀಸರ್‌' ಸಿನಿಮಾದಲ್ಲಿ ಈಗ ಬಿಝಿ ಆಗಿದ್ದಾರೆ ವರ್ಮ. ಇದು ತೆರೆಗೆ ಬರುತ್ತಿದ್ದಂತೆಯೇ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಧನಂಜಯ್‌ ನಟಿಸಲಿದ್ದು, ಯಾರೆಲ್ಲ ತಾರಾಗಣ ಇರಲಿದೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್‌.

ಇತ್ತ ಧನಂಜಯ್‌ ಕೂಡ ದುನಿಯಾ ಸೂರಿ ಜತೆ ಮತ್ತೊಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಇದರ ಜತೆ ಮತ್ತಷ್ಟು ಕಥೆಗಳನ್ನೂ ಕೇಳಿದ್ದಾರೆ. ವರ್ಮ ಜತೆಗಿನ ಸಿನಿಮಾ ಯಾವಾಗ ಬರತ್ತೋ ಕಾದು ನೋಡಬೇಕಿದೆ.

'ಟಗರು ಸಿನಿಮಾದ ಡಾಲಿ ಪಾತ್ರ ನೋಡಿ ವರ್ಮ ಅವರಿಗೆ ಖುಷಿಯಾಗಿದೆ. ಹಾಗಾಗಿ ಹೈದ್ರಾಬಾದ್‌ಗೆ ಕರೆಸಿಕೊಂಡು ಮಾತನಾಡಿದ್ದಾರೆ. ಆದರೆ ಯಾವುದು ಇನ್ನೂ ಫೈನಲ್‌ ಆಗಿಲ್ಲ.
ಧನಂಜಯ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌