ಆ್ಯಪ್ನಗರ

ಡಾ.ರಾಜ್‌ ಜಯಂತಿ: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಏನೇನು?

ವರನಟ ಡಾ. ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಮಲ್ಲೇಶ್ವರದ 18ನೇ ಕ್ರಾಸ್‌ನ ಗೋಕಾಕ್‌ ಚಳವಳಿ ಸ್ಮರಣಾರ್ಥ ವೃತ್ತದಲ್ಲಿನ ರಾಜ್‌ ಪ್ರತಿಮೆಗೆ ಶಾಸಕ ಡಾ. ಸಿ.ಎನ್‌. ಅಶ್ವತ್ಥ್‌ನಾರಾಯಣ್‌ ಅವರು ಬೆಳಗ್ಗೆ 9.45ಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.

Vijaya Karnataka 24 Apr 2019, 12:22 pm
ಡಾ. ರಾಜ್‌ಕುಮಾರ್‌ ಅವರ 91ನೇ ಜಯಂತಿ ಅಂಗವಾಗಿ ಏ.24ರಂದು ನಗರದಾದ್ಯಂತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದ ಕಂಠೀರವ ಸ್ಟುಡಿಯೋ ಬಳಿಯ ರಾಜ್‌ ಸ್ಮಾರಕ ಸ್ಥಳಕ್ಕೆ ಮುಂಜಾನೆಯಿಂದಲೇ ಅಭಿಮಾನಿಗಳು ಪೂಜೆ ಸಲ್ಲಿಸಲಿದ್ದು, ನಾನಾ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿವೆ. ಪ್ರತಿ ವರ್ಷದಂತೆ ಕುಟುಂಬದ ಸದಸ್ಯರು ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.
Vijaya Karnataka Web raj


ಈ ಬಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ 'ಡಾ. ರಾಜ್‌ಕುಮಾರ್‌ ಅವರ 91ನೇ ಜನ್ಮದಿನಾಚರಣೆ' ಸಮಾರಂಭ ಆಯೋಜಿಸಲಾಗಿದೆ. ಕವಿ ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ, ಕಲಾವಿದರಾದ ಡಾ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಕುಟುಂಬ ವರ್ಗದವರು ಪಾಲ್ಗೊಳ್ಳಲಿದ್ದಾರೆ.

ಮಾಲಾರ್ಪಣೆ
ವರನಟ ಡಾ. ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಮಲ್ಲೇಶ್ವರದ 18ನೇ ಕ್ರಾಸ್‌ನ ಗೋಕಾಕ್‌ ಚಳವಳಿ ಸ್ಮರಣಾರ್ಥ ವೃತ್ತದಲ್ಲಿನ ರಾಜ್‌ ಪ್ರತಿಮೆಗೆ ಶಾಸಕ ಡಾ. ಸಿ.ಎನ್‌. ಅಶ್ವತ್ಥ್‌ನಾರಾಯಣ್‌ ಅವರು ಬೆಳಗ್ಗೆ 9.45ಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.

ಗಾಯನ ಸ್ಪರ್ಧೆ
ಮಧು ಮ್ಯೂಸಿಕಲ್‌ ಇವೆಂಟ್ಸ್‌ನ 4ನೇ ವಾರ್ಷಿಕೋತ್ಸವ ಹಾಗೂ ಡಾ. ರಾಜ್‌ ಜನ್ಮದಿನದ ಅಂಗವಾಗಿ 'ಡಾ. ರಾಜ್‌ ಧ್ವನಿ'ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮಲ್ಲೇಶ್ವರದ ಶುಕ್ರ ಸಭಾಂಗಣದಲ್ಲಿ ಬೆಳಗ್ಗೆ 10.30ರಿಂದ ರಾತ್ರಿ 9ರವರೆಗೆ ಇಡೀ ದಿನ ಸ್ಪರ್ಧೆ ನಡೆಯಲಿದೆ. ಎಸ್‌.ಡಿ.ಎ. ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಡಾ. ಅಂಬರೀಷ್‌ ಗೋಂಧಾಳ್‌, ಕಲಾವಿದರಾದ ಉಮೇಶ್‌, ಟೆನ್ನಿಸ್‌ ಕೃಷ್ಣ, ಜಯಲಕ್ಷ್ಮಿ, ಕಮನೀಧರನ್‌, ಸಾಹಿತಿ ಡಾ. ದೊಡ್ಡರಂಗೇಗೌಡ, ನಟಿ ಮೇಘನ, ನಟ ಜಯಪ್ರಕಾಶ್‌ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಡಾ. ರಾಜ್‌ ಕ್ರಿಕೆಟ್‌ ಲೀಗ್‌
ಕನ್ನಡನಿತ್ಯೋತ್ಸವ.ಕಾಂ ಸಂಘ ಹಾಗೂ ಜೀವನಹಳ್ಳಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ''ಡಾ.ರಾಜ್‌ ಕ್ರಿಕೆಟ್‌ ಲೀಗ್‌-2019'' ಹಮ್ಮಿಕೊಳ್ಳಲಾಗಿದ್ದು, ಏ. 24ರಂದು ಆಂತಿಮ ಸುತ್ತಿನ ಪಂದ್ಯ ನಡೆಯಲಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು.

ಕುರುಬರಹಳ್ಳಿಯ ವೃತ್ತದಲ್ಲಿನ ಡಾ. ರಾಜ್‌ ಪ್ರತಿಮೆಗೆ ಸ್ಥಳೀಯರಿಂದ ಮಾಲಾರ್ಪಣೆ ಹಾಗೂ ಸಿಹಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕೆಲ ಸಂಘ ಸಂಸ್ಥೆಗಳು ಡಾ. ರಾಜ್‌ ಜಯಂತಿ ಅಂಗವಾಗಿ ನಗರದ ನಾನಾ ಭಾಗಗಳಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಅನ್ನದಾನ, ರೋಗಿಗಳಿಗೆ ಹಣ್ಣು - ಹಂಪಲು ವಿತರಣೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌