ಆ್ಯಪ್ನಗರ

ಮನೋವಿಕಾಸಕ್ಕೆ ಪೂರಕವಾದ ಡ್ರಾಮಾ ಜೂನಿಯರ್ಸ್‌ ಸೀಸನ್‌ 3

ಡ್ರಾಮಾ ಜೂನಿಯರ್ಸ್‌ ಸೀಸನ್‌ 3 ಶೋನಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ ಜೀ ಕನ್ನಡ ವಾಹಿನಿ. ಹಾಗಾಗಿ ಹಲವು ಪ್ರಥಮಗಳಿಗೂ ಈ ಶೋ ಸಾಕ್ಷಿ ಆಗುತ್ತಿದೆ.

Vijaya Karnataka 12 Jan 2019, 9:27 am
ಮನರಂಜನೆಯ ಜತೆಗೆ ಮನೋವಿಕಾಸಕ್ಕೂ ಪೂರಕವಾಗುವ ರೀತಿಯಲ್ಲಿ ಮೂಡಿ ಬರುತ್ತಿರುವ ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್‌ ಸೀಸನ್‌ 3' ಕಾರ್ಯಕ್ರಮ. ಈಗಾಗಲೇ ಹಲವು ಪ್ರಯೋಗಗಳಿಗೆ ಸಾಕ್ಷಿ ಆಗಿರುವ ಈ ಶೋನಲ್ಲಿ, ಪ್ರಥಮ ಭಾಷಾ ಕನ್ನಡ ಮಾಧ್ಯಮದ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಪಠ್ಯ ಪುಸ್ತಕದ ಪಾಠಗಳನ್ನು ರಂಗಕ್ಕೆ ಅಳವಡಿಸಲಾಗಿತ್ತು. ಈಗ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳಿದ್ದಾರೆ.
Vijaya Karnataka Web DRama Juniors


ನಾಡಿನ ಸಾಧಕರ ಬದುಕನ್ನು ವೇದಿಕೆಯ ಮೇಲೆ ಅನಾವರಣಗೊಳಿಸುವುದರ ಜತೆಗೆ ಸಾಧಕರನ್ನೇ ವೇದಿಕೆಗೆ ಕರೆತಂದ 'ರಿಯಲ್‌ ಸ್ಟಾರ್‌' ಎಂಬ ಬಿರುದು ನೀಡಿದ ಹೆಗ್ಗಳಿಕೆ ಈ ಶೋನದ್ದು. ಅಶ್ವಿನಿ ಅಂಗಡಿ, ಆಟೋರಾಜ, ಇಬ್ರಾಂ ಸುತಾರ, ಯುವ ವಿಜ್ಞಾನಿ ನೆಟ್ಕಲ್‌ ಪ್ರತಾಪ್‌ ಹೀಗೆ ಅನೇಕ ಸಾಧಕರ ಜೀವನ ಹಲವು ಕಂತುಗಳಲ್ಲಿ ಮೂಡಿ ಬಂದಿದ್ದು, ಈ ನಾಟಕಗಳು ಪ್ರೇಕ್ಷಕರನ್ನು ಭಾವುಕರನ್ನಾಗಿಸಿವೆ. ಸಾಧಕರು ಕೂಡ ಮಕ್ಕಳ ನಟನೆಯನ್ನು ಮನಸಾರೆ ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಈ ಎಲ್ಲ ಎಪಿಸೋಡ್‌ಗಳು ವೈರಲ್‌ ಆಗಿವೆ ಎಂದಿದ್ದಾರೆ ಅವರು.

ಸಲ್ಲಾವುದ್ದೀನ್‌ ಪಾಷಾ ನಾಟಕ

ಈ ವಾರದ ಕಾರ್ಯಕ್ರಮದಲ್ಲಿ ಅಪರೂಪದ ಸಾಧಕ ಸಲ್ಲಾವುದ್ದೀನ್‌ ಪಾಷಾರ ಜೀವನ ಕುರಿತಾದ ನಾಟಕ ಪ್ರಸಾರವಾಗಲಿದೆ. ಸಲ್ಲಾವುದ್ದೀನ್‌ ಅವರ ಮುತ್ತಾತ ಮೈಸೂರು ಮಹಾರಾಜರ ಆಸ್ಥಾನದಲ್ಲಿ ನಾಟಿ ವೈದ್ಯರು ಆಗಿದ್ದರು ಎನ್ನುವುದು ವಿಶೇಷ. ಅಲ್ಲದೇ, ಭಗವದ್ಗೀತೆಯ ಶ್ಲೋಕ, ಬಸವಣ್ಣನವರ ವಚನಗಳನ್ನು ಇವರಿಂದ ಕೇಳುವುದೇ ಒಂದು ಭಾಗ್ಯ. ಅಲ್ಲದೇ ನಾನಾ ಕ್ಷೇತ್ರಗಳಲ್ಲೂ ಇವರು ಸಾಧನೆ ಮಾಡಿದ್ದಾರೆ. ಈ ಎಲ್ಲ ವಿಶೇಷಗಳು ವಾರದ ಶೋನಲ್ಲಿ ಇರಲಿವೆ.

ಜ.12 ಶನಿವಾರ ಮತ್ತು 13 ಭಾನುವಾರದಂದು ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಶೋನಲ್ಲಿ ಈ ವಾರ ಅತ್ಯುತ್ತಮ ಕಾರ್ಯಕ್ರಮಗಳೇ ಇವೆ. ಮಕರ ಸಂಕ್ರಾಂತಿಯ ಸಡಗರವನ್ನು ಹೆಚ್ಚಿಸಲು ನಕ್ಕು ನಗಿಸುವಂತ ನಾಲ್ಕು ಕಾಮಿಡಿ ಕಾರ್ಯಕ್ರಮಗಳ ಜತೆ ಸೈಯ್ಯದ್‌ ಸಲ್ಲಾವುದ್ದೀನ್‌ ಪಾಷಾರ ಜೀವನ ಕಥೆ ಹಾಗೂ ಹರಿಹರ ಸುತ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತಿ ಪೂರ್ಣವಾದ ಕಥೆಯನ್ನ ಡ್ರಾಮಾ ಜೂನಿಯರ್‌ ಮಕ್ಕಳು ಒಂದು ಸಣ್ಣ ನಾಟಕದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ ಎಂದು ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌