ಆ್ಯಪ್ನಗರ

ಆಕಾಶಕ್ಕೆ ನೆಗೆದ ಆಟೋ; ದುನಿಯಾ ವಿಜಯ್ ಸ್ಟಂಟ್ ನೋಡಿ!

ದುನಿಯಾ ವಿಜಯ್ ಅಭಿನಯದ 'ಕನಕ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಆಕ್ಷನ್ ಸೀನ್‌ಗಳನ್ನು ಸದ್ಯಕ್ಕೆ ಸೆರೆಹಿಡಿಯಲಾಗುತ್ತಿದೆ. 'ಮಾಸ್ತಿಗುಡಿ' ಸಿನಿಮಾದಲ್ಲಿ ಹೆಲಿಕಾಫ್ಟರ್ ಸ್ಟಂಟ್ ಎಷ್ಟೆಲ್ಲಾ ಸದ್ದು ಮಾಡಿತ್ತೋ ಇದೀಗ ಆಟೋ ಸ್ಟಂಟ್ ಸಹ ಅದೇ ರೇಂಜ್‌ನಲ್ಲಿದೆ.

ವಿಕ ಸುದ್ದಿಲೋಕ 9 Jun 2017, 5:19 pm
ದುನಿಯಾ ವಿಜಯ್ ಅಭಿನಯದ 'ಕನಕ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಆಕ್ಷನ್ ಸೀನ್‌ಗಳನ್ನು ಸದ್ಯಕ್ಕೆ ಸೆರೆಹಿಡಿಯಲಾಗುತ್ತಿದೆ. 'ಮಾಸ್ತಿಗುಡಿ' ಸಿನಿಮಾದಲ್ಲಿ ಹೆಲಿಕಾಫ್ಟರ್ ಸ್ಟಂಟ್ ಎಷ್ಟೆಲ್ಲಾ ಸದ್ದು ಮಾಡಿತ್ತೋ ಇದೀಗ ಆಟೋ ಸ್ಟಂಟ್ ಸಹ ಅದೇ ರೇಂಜ್‌ನಲ್ಲಿದೆ.
Vijaya Karnataka Web duniya vijay thrilling stunt in kanaka movie
ಆಕಾಶಕ್ಕೆ ನೆಗೆದ ಆಟೋ; ದುನಿಯಾ ವಿಜಯ್ ಸ್ಟಂಟ್ ನೋಡಿ!


ಈ ರೀತಿಯ ಸಾಹಸ ಸನ್ನಿವೇಶಗಳನ್ನು ಡ್ಯೂಪ್ ಇಲ್ಲದಂತೆ ಮಾಡುವುದು ದುನಿಯಾ ವಿಜಯ್ ಹೆಗ್ಗಳಿಕೆ. ಇದಕ್ಕಾಗಿ ಅವರು ಯಾವುದೇ ರಿಸ್ಕನ್ನೂ ಲೆಕ್ಕಕ್ಕೆ ತಗೊಳ್ಳಲ್ಲ. ಸಾಕಷ್ಟು ಅಪಾಯ ಎಂದು ಗೊತ್ತಿದ್ದರೂ ಅವರು ಕ್ಯಾರೆ ಎನ್ನದೆ ಅಭಿಮಾನಿಗಳನ್ನು ರಂಜಿಸುವುದೊಂದೇ ತನ್ನ ಗುರಿ ಎಂಬಂತೆ ಸ್ಟಂಟ್ ಮಾಡುತ್ತಲೇ ಬಂದಿದ್ದಾರೆ.


ಈ ಸಿನಿಮಾದಲ್ಲಿ ವಿಜಯ್ ಆಟೋ ಚಾಲಕನಾಗಿ ಕಾಣಿಸಿಕೊಂಡಿದ್ದು, ಲವ್, ಆಕ್ಷನ್, ಸೆಂಟಿಮೆಂಟ್, ಕಾಮಿಡಿ ಎಲ್ಲಾ ಆಯಾಮಗಳನ್ನೂ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಆರ್ ಚಂದ್ರು. ಇನ್ನೊಂದು ವಿಶೇಷ ಎಂದರೆ ನವೀನ್ ಸಜ್ಜು ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿರುವುದು.

'ಲಕ್ಷ್ಮಣ' ಚಿತ್ರದ ಬಳಿಕ ಆರ್ ಚಂದ್ರು ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದ್ದು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆಯನ್ನಂತೂ ಹುಟ್ಟುಹಾಕಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾಗಳನ್ನು ತೆರೆಗೆ ತರುವಲ್ಲಿ ಚಂದ್ರು ಅವರದು ಮೇಲುಗೈ. ಸಿನಿಮಾದಲ್ಲಿ ಈ ಬಾರಿ ಏನೆಲ್ಲಾ ಇರುತ್ತದೆ ಎಂಬುದನ್ನು ಕಾದುನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌