ಆ್ಯಪ್ನಗರ

ಕನ್ನಡ ಸುಮಧುರ ಭಾಷೆ ಎಂದ ಸ್ವೀಡಿಷ್‌ ತಾರೆ ಎಲ್ಲಿ

ಹಿಂದಿಯ ಕ್ವೀನ್‌ ಕನ್ನಡಕ್ಕೆ ರಿಮೇಕ್‌ ಆಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್‌ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದರು. ಈಗ ಆ ಪಾತ್ರಕ್ಕೆ ಬೇರೊಬ್ಬರು ಆಯ್ಕೆಯಾಗಿದ್ದಾರೆ.

Vijaya Karnataka 14 Nov 2017, 5:00 am

ರಮೇಶ್‌ ಅರವಿಂದ್‌ ನಿರ್ದೇಶನದ ಬಟರ್‌ಫ್ಲೈ ಚಿತ್ರಕ್ಕೆ ಸ್ವೀಡಿಷ್‌ ನಟಿ ಎಲ್ಲಿ ಅವರಾಮ್‌ ನಟಿಸುತ್ತಿದ್ದಾರೆ. ಈ ಹಿಂದೆ ಆ್ಯಮಿ ಜಾಕ್ಸನ್‌ ನಟಿಸಬೇಕಿದ್ದ ಈ ಪಾತ್ರಕ್ಕೆ ಎಲ್ಲಿ ಆಯ್ಕೆಯಾಗಿದ್ದು, ಇಂದಿನಿಂದ ಪ್ಯಾರಿಸ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಈ ಸಮಯದಲ್ಲಿ ಮಾತನಾಡಿರುವ ಎಲ್ಲಿ 'ನಾನು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಭಾಗಿಯಾಗಲು ಎಕ್ಸೈಟ್‌ ಆಗಿದ್ದೇನೆ. ನನಗೆ ದಕ್ಷಿಣ ಭಾರತದ ಭಾಷೆಗಳೆಂದರೆ ಬಹಳ ಇಷ್ಟ. ಕೇಳಲು ಆ ಭಾಷೆಗಳು ಇಂಪಾಗಿರುತ್ತವೆ. ಅದರಲ್ಲೂ ಕನ್ನಡ ಬಹಳ ಸುಮಧುರ ಭಾಷೆæ. ನಾನು ಯೂರೋಪಿಯನ್‌ ಆದರೂ, ನನ್ನ ತಂಡ ನನಗೆ ಕನ್ನಡವನ್ನು ಬಹಳ ಚೆನ್ನಾಗಿ ಹೇಳಿಕೊಡುತ್ತಿದೆ. ಪ್ರತಿ ಪದವನ್ನು ಮಾತನಾಡುವಾಗ ನನಗೆ ಬೆಂಗಳೂರು ಹುಡುಗಿ ಎಂಬ ಫೀಲ್‌ ಆಗುತ್ತಿದೆ. ಇದನ್ನು ನಮ್ಮ ನಿರ್ದೇಶಕರು ಮತ್ತು ಚಿತ್ರತಂಡವೂ ಹೇಳುತ್ತಿದೆ' ಎಂದು ಎಲ್ಲಿ ಸಂತಸ ವ್ಯಕ್ತಪಡಿಸುತ್ತಾರೆ.

ಹಿಂದಿಯ ಕ್ವೀನ್‌ನಲ್ಲಿ ಲೀಸಾ ಹೆಡನ್‌ ನಿರ್ವಹಿಸಿದ ಪಾತ್ರಕ್ಕೆ ಎಲ್ಲಿ ಆಯ್ಕೆಯಾಗಿದ್ದಾರೆ. ಈ ಪಾತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ. 'ಕೇರ್‌ ಫ್ರೀ, ಬೋಲ್ಡ್‌ ಮತ್ತು ಸಿಕ್ಕಾಪಟ್ಟೆ ಫನ್‌ ಇರುವ ಪಾತ್ರ ಇದಾಗಿದೆ. ಇದುವರೆಗೂ ನಾನು ನಟಿಸಿರುವ ಸಿನಿಮಾಗಳಲ್ಲಿ ನಾನು ಇಂಥ ಪಾತ್ರವನ್ನು ನಿರ್ವಹಿಸಿಲ್ಲ. ನನಗೆ ಈ ಪಾತ್ರಕ್ಕೆ ಆಫರ್‌ ಮಾಡಿದಾಗ ನಾನು ಮತ್ತು ಪಾರುಲ್‌ ಯಾದವ್‌ ಇಬ್ಬರೂ ಒಂದು ಸೀನ್‌ನ್ನು ಮುಂಬಯಿಯಲ್ಲಿ ರಿಹರ್ಸಲ್‌ ಮಾಡಿದೆವು. ಆಗ ಚಿತ್ರತಂಡಕ್ಕೆ ನನ್ನ ಪರ್ಫಾಮೆನ್ಸ್‌ ಇಷ್ಟವಾಗಿ ನನ್ನನ್ನು ಈ ಸಿನಿಮಾಗೆ ಆಯ್ಕೆ ಮಾಡಿದ್ದಾರೆ. ಭವಿಷ್ಯದಲ್ಲಿ ನಾನು ಇನ್ನೂ ಹೆಚ್ಚೆಚ್ಚು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸುತ್ತೇನೆ. ಇದು ಇನ್ನೂ ಆರಂಭ

Vijaya Karnataka Web elli avram likes kannada language
ಕನ್ನಡ ಸುಮಧುರ ಭಾಷೆ ಎಂದ ಸ್ವೀಡಿಷ್‌ ತಾರೆ ಎಲ್ಲಿ

ಅಷ್ಟೇ ಎನ್ನುತ್ತಾರೆ ಈ ಸ್ವೀಡಿಷ್‌ ನಟಿ.


ಎಲ್ಲಿ ಸೌತ್‌ ಇಂಡಿಯನ್‌ ಸಿನಿಮಾಗಳನ್ನು ಫಾಲೋ ಮಾಡುತ್ತಿದ್ದಾರಂತೆ. ಸದ್ಯಕ್ಕೆ ಬಾಹುಬಲಿ ಅವರ ಫೆವರಿಟ್‌ ಚಿತ್ರವಾಗಿದ್ದು, ರಜನೀಕಾಂತ್‌ ಅವರ ಕಾಲಾ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ ಎನ್ನುತ್ತಾರವರು.

'ಕನ್ನಡದಲ್ಲಿ ಪುನೀತ್‌ರಾಜ್‌ಕುಮಾರ್‌ ದೊಡ್ಡ ನಟ ಎಂಬುದು ನನಗೆ ಗೊತ್ತು. ಅವರ ಡಾನ್ಸ್‌ ನೋಡಿದ್ದೇನೆ, ಅವರೊಬ್ಬ ಅದ್ಭುತ ಡಾನ್ಸರ್‌. ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಬಹಳ ಖುಷಿ ಇದೆ.'

-ಎಲ್ಲಿ ಅವರಾಮ್‌, ನಟಿ

ಯಾರು ಈ ಎಲ್ಲಿ

ಎಲ್ಲಿ ಅವರಾಮ್‌ ಸ್ವೀಡಿಷ್‌ ನಟಿಯಾಗಿದ್ದು, ಹಿಂದಿ ಬಿಗ್‌ಬಾಸ್‌ ಸೀಸನ್‌-7ರಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ಹಿಂದಿಯ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ಡಾನ್ಸ್‌ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌