ಆ್ಯಪ್ನಗರ

KGF 50 Days Collections: ₹ 250 ಕೋಟಿಗೆ ಗುರಿಯಿಟ್ಟ ಕೆಜಿಎಫ್

ಕೆಜಿಎಫ್ ಸಿನಿಮಾ ಅರ್ಧ ಶತಕ ಬಾರಿಸಿದೆ. ಈ ಐವತ್ತು ದಿನಗಳಲ್ಲಿ ಸಿನಿಮಾ ಅಂದಾಜು ₹ 243.10 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹ 250 ಕೋಟಿ ಗಡಿ ದಾಟಲು ಹಾತೊರೆಯುತ್ತಿದೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ.

Vijaya Karnataka Web 11 Feb 2019, 2:27 pm
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 1 ಸಿನಿಮಾ ಅರ್ಧ ಶತಕ ಬಾರಿಸಿದ್ದು ಬಾಕ್ಸ್ ಆಫೀಸ್ ಗಳಿಕೆಯನ್ನೂ ಹೊಸ ದಾಖಲೆ ಬರೆದಿದೆ. ಇದುವರೆಗೆ ವರ್ಲ್ಡ್ ವೈಡ್ ಕಲೆಕ್ಷನ್ ಅಂದಾಜು ₹ 243.10 ಕೋಟಿ ಎಂದಿವೆ ಮೂಲಗಳು. ಶೀಘ್ರದಲ್ಲೇ ಈ ಸಿನಿಮಾ ₹ 250 ಕೋಟಿ ಗಡಿ ದಾಟಲು ಹಾತೊರೆಯುತ್ತಿದೆ.
Vijaya Karnataka Web kgf1


ಫೆಬ್ರವರಿ 8ಕ್ಕೆ ಕೆಜಿಎಫ್ ಮೊದಲ ಅಧ್ಯಾಯ ಐವತ್ತು ದಿನಗಳನ್ನು ಫೂರೈಸಿದೆ. ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಸದ್ದು ಮಾಡಿರುವ ಸಿನಿಮಾ. ಪಾಕಿಸ್ತಾನ, ಯುಎಸ್ ಬಾಕ್ಸ್ ಆಫೀಸಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ ಕೆಜಿಎಫ್.

ಇದುವರೆಗೆ ₹ 243.10 ಕೋಟಿ ಕಲೆಕ್ಷನ್ ಮಾಡಿದ್ದು, ಇನ್ನೂ ಬಾಕ್ಸ್ ಆಫೀಸಲ್ಲಿ ಓಟ ಮುಂದುವರೆಯುತ್ತಾ ಎಂಬ ಲೆಕ್ಕಾಚಾರ ನಡೆದಿದೆ. ಆದರೆ ಈಗಾಗಲೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು ರೆಗ್ಯುಲರ್ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತದೆಯೇ? ಎಂಬುದೇ ಈಗಿರುವ ಸವಾಲು.

ಕೆಜಿಎಫ್‌ ಕನ್ನಡದಲ್ಲಿ ಎಲ್ಲ ರೆಕಾರ್ಡ್‌ಗಳನ್ನು ಬ್ರೇಕ್‌ ಮಾಡಿದೆ. ರಾಜಕುಮಾರ ಸಿನಿಮಾದಲ್ಲಿ ನಾವು ಏನು ಗಳಿಸಿದ್ದೆವು ಅದನ್ನು ಒಂದೇ ವಾರದಲ್ಲಿ ಇದು ಗಳಿಸಿದೆ ಎಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಕೆಜಿಎಫ್: ಚಾಪ್ಟರ್ 1 ಸಿನಿಮಾ ಡಿಸೆಂಬರ್ 21, 2018ರಂದು ತೆರೆಕಂಡಿದ್ದು ಗೊತ್ತೇ ಇದೆ. ಸುಮಾರು 2400 ಚಿತ್ರಮಂದಿರಗಳಲ್ಲಿ ತೆರೆಕಾಣುವ ಮೂಲಕ ಸ್ಯಾಂಡಲ್‍ವುಡ್‌ನಲ್ಲಿ ದಾಖಲೆ ಸೃಷ್ಟಿಸಿತು. ಶಾರುಖ್ ಖಾನ್ ಅವರ ಝೀರೋ ಚಿತ್ರದ ಜತೆಗೆ ಸ್ಪರ್ಧಿಸಿದ ಕೆಜಿಫ್ ಹಿಂದಿಯಲ್ಲೂ ಭರ್ಜರಿ ಕಲಕ್ಷನ್ ಮಾಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌