ಆ್ಯಪ್ನಗರ

'ಕರ್ನಾಟಕ ಸುಪುತ್ರ' ನಟಿಗೆ ಜಾರಿ ನಿರ್ದೇಶನಾಲಯ ಸಮನ್ಸ್

ಕನ್ನಡದ ಕರ್ನಾಟಕ ಸುಪುತ್ರ ಚಿತ್ರದಲ್ಲಿ ಅಭಿನಯಿಸಿರುವ ಬಂಗಾಳಿ ನಟಿ ರಿತುಪರ್ಣ ಸೇನ್‍ಗುಪ್ತ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

TIMESOFINDIA.COM 10 Jul 2019, 3:37 pm
ಸ್ಯಾಂಡಲ್‌ವುಡ್‍ನ 'ಕರ್ನಾಟಕ ಸುಪುತ್ರ' ಚಿತ್ರದಲ್ಲಿ ಅಭಿನಯಿಸಿರುವ ತಾರೆ ರಿತುಪರ್ಣ ಸೇನ್‌ಗುಪ್ತಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್ ಜಾರಿ ಮಾಡಲಾಗಿದೆ.
Vijaya Karnataka Web Rituparna


ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್‌ನಲ್ಲಿ ರಿತುಪರ್ಣ ಸೇನ್‍ಗುಪ್ತಾಗೆ ಆದೇಶಿಸಲಾಗಿದೆ. ರಿತುಪರ್ಣ ಹಲವಾರು ಬಂಗಾಳಿ, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರೋಸ್ ವ್ಯಾಪಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಹಲವಾರು ಮಂದಿಗೆ ಈಗಾಗಲೆ ಸಮನ್ಸ್ ಜಾರಿ ಮಾಡಲಾಗಿದೆ.

ಬಂಗಾಳಿ ನಟ ಪ್ರೊಸೆನ್‌ಜಿತ್ ಚಟರ್ಜಿ ಸಹ ನೋಟೀಸ್ ಪಡೆದಿದ್ದಾರೆ. ಪ್ರೊಸೆನ್‌ರನ್ನು ಬುಧವಾರ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. [ಖ್ಯಾತ ಬೆಂಗಾಲಿ ಚಿತ್ರ ನಿರ್ಮಾಪಕ ಮೊಹ್ತಾ ಬಂಧನ]

ಮೂಲಗಳ ಪ್ರಕಾರ, ರೋಸ್ ವ್ಯಾಲಿ ಬ್ಯಾನರ್‌ನಡಿ ರಿತುಪರ್ಣ ಅಭಿನಯದ ಹಲವಾರು ಸಿನಿಮಾಗಳನ್ನು ಘೋಷಿಸಲಾಗಿತ್ತು. ರಿತುಪರ್ಣ ವಿರುದ್ಧ ಕಾಳಧನ ಸಕ್ರಮ ಆರೋಪ ಮಾಡಲಾಗಿತ್ತು. ಸಿನಿಮಾಗಳ ಮಾರ್ಕೆಟಿಂಗ್ ಮತ್ತು ನಿರ್ಮಾಣ ಸಂಬಂಧ ರೋಸ್ ವ್ಯಾಲಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಕುಂದಾ ಜತೆಗೆ ಹಲವಾರು ಸಲ ಫಾರಿನ್ ಟ್ರಿಪ್ ಸಹ ಹೋಗಿದ್ದರು ಎನ್ನಲಾಗಿದೆ.

ಅಂದಹಾಗೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಕರ್ನಾಟಕ ಸುಪುತ್ರ' (1996) ಚಿತ್ರದಲ್ಲಿ ರಿತುಪರ್ಣ ಸೇನ್‍ಗುಪ್ತಾ ಅಭಿನಯಿಸಿದ್ದಾರೆ. ಬಂಗಾಳಿ ತಾರೆ ರಿತುಪರ್ಣ ಅಭಿನಯದ ಏಕೈಕ ಕನ್ನಡ ಚಿತ್ರ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌