ಆ್ಯಪ್ನಗರ

HD Kumaraswamy: ಮೈಸೂರಲ್ಲಿ ಫಿಲಂ ಸಿಟಿ, ರಾಮನಗರದಲ್ಲಿ ಫಿಲಂ ಯೂನಿವರ್ಸಿಟಿ

ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿಯೂ ಗೊಂದಲ ಇಲ್ಲ. ಯಾರ ಬಗ್ಗೆಯೂ ದ್ವೇಷ ಇಲ್ಲ. ವಿಷ್ಣು ಸ್ಮಾರಕವಾಗಿ ಸರಕಾರ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 30 Nov 2018, 1:19 pm
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಫಿಲಂ ಸಿಟಿ, ರಾಮನಗರದಲ್ಲಿ ಫಿಲಂ ಯೂನಿರ್ಸಿಟಿ ನಿರ್ಮಿಸುವುದಾಗಿ ತಿಳಿಸಿದರು.
Vijaya Karnataka Web ಅಂಬಿಗೆ ನಮನ


ಅಂಬರೀಶ್ ಅವರು ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸುವ ಕನಸು ಹೊಂದಿದ್ದರು. ಅವರ ಆಸೆ ಈಡೇರಿಸಲು ಸರಕಾರ ಅಂಬರೀಶ್ ಆಶಯದಂತೆ ಮೈಸೂರಿನಲ್ಲೇ ಫಿಲಿಂ ಸಿಟಿ ನಿರ್ಮಿಸುತ್ತೇವೆ. ರಾಮನಗರದಲ್ಲಿ ಫಿಲಿಂ ಯೂನಿವರ್ಸಿಟಿ ಸ್ಥಾಪಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ವಿಷಯವನ್ನು ಮಾಜಿ‌ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು.

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲು ತಮ್ಮ ಕ್ಷೇತ್ರದಲ್ಲಿ ಸಿದ್ದರಾಮಯ್ಯ 106 ಎಕರೆ ಕೊಟ್ಟಿದ್ದಾರೆ. ಅದನ್ನು ಅಲ್ಲೇ ಮಾಡೋಣ. ಫಿಲಂ ಯೂನಿವರ್ಸಿಟಿಯನ್ನು ರಾಮನಗರದಲ್ಲಿ ಮಾಡೋಣ ಎಂದರು. ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿಯೂ ಗೊಂದಲ ಇಲ್ಲ. ಯಾರ ಬಗ್ಗೆಯೂ ದ್ವೇಷ ಇಲ್ಲ. ವಿಷ್ಣು ಸ್ಮಾರಕವಾಗಿ ಸರಕಾರ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಅಂಬಿಗೆ ಸಿದ್ದರಾಮಯ್ಯ ನಮನ
ಅಂಬರೀಶ್ ಮಾತು ಒರಟು. ಹೃದಯದಲ್ಲಿ ಮಾತ್ರ ಮೃದುವಾಗಿತ್ತು. ಅವರೊಬ್ಬ ಸ್ನೇಹಜೀವಿ. ನನಗೆ 1973ರಲ್ಲೇ ಗೆಳೆಯನ ಮೂಲಕ ಪರಿಚಯವಾದರು. ಸಿನೆಮಾ ಹಾಗೂ ರಾಜಕಾರಣ ಅವರಿಗೆ ಬಯಸಿ ಬಂದದ್ದಲ್ಲ. ಆದರೂ ಎರಡೂ ಕ್ಷೇತ್ರದಲ್ಲಿ ಛಾಪು ಮೂಡಿಸಿದರು. ಹೆಜ್ಜೆ ಗುರುತು ಬಿಟ್ಟುಹೋಗಿದ್ದಾರೆ.
ಅವರು ಎತ್ತರಕ್ಕೆ ಬೆಳೆದರು. ಜನಪ್ರಿಯತೆ ಪಡೆದರು. ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಚಾಮರಾಜಪೇಟೆಯಲ್ಲಿ ಕಲಾವಿದರ ಕಟ್ಟಡಕ್ಕೆ ಐದು ಕೋಟಿ ರೂ. ಕೋರಿದ್ದರು. ಅದರಂತೆ ಅನುದಾನ ನೀಡಿ ಕಟ್ಟಡವನ್ನು ಉದ್ಘಾಟಿಸಿದೆ.
ಅಂಬಿ ಮೈಸೂರಿನಲ್ಲಿ ಫಿಲಿಂ ಸಿಟಿ ನಿರ್ಮಿಸುವ ಕನಸು ಹೊಂದಿದ್ದರು. ಅವರ ಆಸೆ ಈಡೇರಿಸಲು ಸರಕಾರ ಅಲ್ಲೇ ಫಿಲಿಂ ಸಿಟಿ ಮಾಡಿ. ಅದಕ್ಕೆ ಅಂಬರೀಷ್ ಹೆಸರು ಇಡಬೇಕು ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌