ಆ್ಯಪ್ನಗರ

'ಕೆಜಿಎಫ್' ಸಿನಿಮಾ ನೋಡಲು 5 ಪ್ರಬಲ ಕಾರಣಗಳು

1970-80ರ ಗೋಲ್ಡ್ ಮಾಫಿಯಾ ಸುತ್ತ ಕಥೆ ಸುತ್ತುತ್ತದೆ. ಈ ಎಲ್ಲಾ ಆಸಕ್ತಿದಾಯಕ ಅಂಶಗಳು ಕೆಜಿಎಫ್ ಸಿನಿಮಾವನ್ನು ನೋಡುವಂತೆ ಮಾಡಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 1 ಸಿನಿಮಾ ಡಿಸೆಂಬರ್ 21ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇಷ್ಟಕ್ಕೂ ಕೆಜಿಎಫ್ ಸಿನಿಮಾ ಯಾಕೆ ನೋಡಬೇಕು. ಇಲ್ಲಿವೆ ನೋಡಿ ಐದು ಕಾರಣಗಳು.

Vijaya Karnataka Web 21 Dec 2018, 7:49 am
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 1 ಸಿನಿಮಾ ಡಿಸೆಂಬರ್ 21ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟಿಕೆಟ್‌ಗಳು ಬಿಸಿಬಿಸಿ ಬಜ್ಜಿ ತರಹ ಬಿಕರಿಯಾಗಿವೆ. ಇಷ್ಟಕ್ಕೂ ಕೆಜಿಎಫ್ ಸಿನಿಮಾ ಯಾಕೆ ನೋಡಬೇಕು. ಇಲ್ಲಿವೆ ನೋಡಿ ಐದು ಕಾರಣಗಳು.
Vijaya Karnataka Web 1


1. ಪ್ರಶಾಂತ್ ನೀಲ್ ಅವರ ನಿರ್ದೇಶನ
ಉಗ್ರಂ ಸಿನಿಮಾದಲ್ಲೇ ತಾವೇನು ಎಂದು ನಿರ್ದೇಶಕ ಪ್ರಶಾಂತ್ ನೀಲ್ ನಿರೂಪಿಸಿದ್ದಾರೆ. ಈ ಬಾರಿ ಕೋಲಾರ ಗೋಲ್ಡ್ ಮಾಫಿಯಾಗೆ ಸಂಬಂಧಿಸಿದ ನೈಜ ಕಥೆಗೆ ಕೈಹಾಕಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ 70-80ರ ದಶಕದ ಚಿತ್ರಣವನ್ನು ನೀಡುತ್ತಿದ್ದು ಹಲವಾರು ಭಾಷೆಯ ಕಲಾವಿದರು, ನಿರ್ದೇಶಕರು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

2. ಸ್ಯಾಂಡಲ್‌ವುಡ್‌ನಲ್ಲೇ ದುಬಾರಿ ಸಿನಿಮಾ
ಸ್ಯಾಂಡಲ್‍ವುಡ್‌ನಲ್ಲೇ ಅತ್ಯಂತ ದುಬಾರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಇದರ ಬಜೆಟ್ ಸುಮಾರು ₹ 80 ಕೋಟಿ ಎನ್ನುತ್ತವೆ ಮೂಲಗಳು. ಬಜೆಟ್‌ಗಿಂತಲೂ 10 ಪಟ್ಟು ಹಣವನ್ನು ಗಲ್ಲಾಪೆಟ್ಟಿಗೆಯಲ್ಲಿ ದೋಚುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಯಶ್, ಅಚ್ಯುತಕುಮಾರ್, ಅನಂತನಾಗ್, ವಸಿಷ್ಠ ಎನ್ ಸಿಂಹ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರ ತಾರಾಬಳಗ ಚಿತ್ರಕ್ಕೆ ಇನ್ನಷ್ಟು ಬಲ ತುಂಬಿದೆ.

3. ಕಥೆಯೇ ಸಿನಿಮಾದ ಜೀವಾಳ
ಮುಂಬೈನಲ್ಲಿ ಹುಟ್ಟುವ ನಾಯಕ ಬಳಿಕ ಕೆಜಿಎಫ್‌ಗೆ ಸ್ಥಳಾಂತರವಾಗುವ ಎಳೆಯನ್ನು ಟ್ರೇಲರ್‌ನಲ್ಲಿ ಕಾಣಬಹುದು. 1970-80ರ ಗೋಲ್ಡ್ ಮಾಫಿಯಾ ಸುತ್ತ ಕಥೆ ಸುತ್ತುತ್ತದೆ. ಈ ಎಲ್ಲಾ ಆಸಕ್ತಿದಾಯಕ ಅಂಶಗಳು ಕೆಜಿಎಫ್ ಸಿನಿಮಾವನ್ನು ನೋಡುವಂತೆ ಮಾಡಿವೆ.

4. ಯಶ್ ಅವರ ಮಾಸ್ ಮತ್ತು ಕ್ಲಾಸ್ ಲುಕ್
ಕೆಜಿಎಫ್ ಸಿನಿಮಾಗಾಗಿ ಯಶ್ ಎರಡು ವರ್ಷಗಳ ಕಾಲ ಯಾವುದೇ ಪ್ರಾಜೆಕ್ಟ್ ಅಂಗೀಕರಿಸಿರಲಿಲ್ಲ. ಚಿತ್ರದಲ್ಲಿನ ಅವರ ರಗಡ್ ಲುಕ್ ಪ್ರಮುಖ ಆಕರ್ಷಣೆ ಎನ್ನಬಹುದು. ಎರಡು ವರ್ಷಗಳ ಕಾಲ ಗಡ್ಡ ಕೂಡ ತೆಗೆಯದೆ ಅಭಿನಯಿಸಿದ್ದಾರೆ. ಇಷ್ಟೆಲ್ಲಾ ಡೆಡಿಕೇಷನ್ ಸಿನಿಮಾ ನೋಡುವಂತೆ ಮಾಡುತ್ತದೆ.

5. ಎರಡು ಭಾಗಗಳು ಮತ್ತು ಟ್ರೇಲರ್
ಐದು ಭಾಷೆಯ ಟ್ರೇಲರ್ ಬಿಡುಗಡೆಯಾದ ಬಳಿಕ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಉಂಟಾಯಿತು. ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಟ್ರೇಲರನ್ನು 25 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌