ಆ್ಯಪ್ನಗರ

ಸದ್ಯವೇ 'ಚೌಕಿದಾರ್' ಆಗಲಿದ್ದಾರಾ ಗೋಲ್ಡನ್ ಸ್ಟಾರ್ ಗಣೇಶ್?

ಚಂದ್ರಶೇಖರ್ ಅವರ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಅವರಲ್ಲಿ ನಟನೆಗೆ ಸಂಬಂಧಿಸಿದಂತೆ ಬಹಳಷ್ಟು ಪ್ಲಸ್ ಪಾಯಿಂಟ್‌ಗಳು ಇವೆಯಂತೆ. ಅವರನ್ನು ಯಾವುದೇ ರೀತಿಯಲ್ಲೂ ಪ್ರೇಕ್ಷಕರು ಒಪ್ಪಿಕೊಳ್ಳುವಂತೆ ತೋರಿಸಬಹುದು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅವರ ಅಭಿಪ್ರಾಯ ಎನ್ನಲಾಗಿದೆ.

Vijaya Karnataka Web 2 Jun 2019, 12:59 pm
ಪ್ರಧಾನಿ ಮೋದಿಯವರ 'ಚೌಕಿದಾರ್' ಅಭಿಯಾನದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತೇ ಇದೆ. ಚೌಕಿದಾರ್ ಎಂದರೆ ಕಾವಲುಗಾರ ಅಥವಾ ರಕ್ಷಕ ಎಂದರ್ಥ. ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಬರಲಿದೆಯಂತೆ. ಈ ಮೊದಲು 'ರಥಾವರ' ಹಾಗೂ 'ತಾರಕಾಸುರ' ಚಿತ್ರವನ್ನು ನಿರ್ದೇಶನ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರು ಈ 'ಚೌಕಿದಾರ್' ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ. ಸಿಕ್ಕ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ನಾಯಕರಾಗಿ ಗಣೇಶ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
Vijaya Karnataka Web ganesh0206


ಹೌದು, ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಮುಂಬರುವ 'ಚೌಕಿದಾರ್' ಚಿತ್ರದಲ್ಲಿ ಗಣೇಶ್ ನಾಯಕರು ಎನ್ನಲಾಗಿದೆ. ಈ ಮೊದಲು ಗಣೇಶ್ ಅಭಿನಯದಲ್ಲಿ ಮೂಡಿಬಂದಿದ್ದ 'ಚೆಲುವಿನ ಚಿತ್ತಾರ' ಹಾಗೂ 'ಶೈಲೂ' ಚಿತ್ರದಲ್ಲಿ ನಿರ್ದೇಶ ಚಂದ್ರಶೇಖರ್ ಬಂಡಿಯಪ್ಪ ಕೆಲಸ ಮಾಡಿದ್ದರಂತೆ. ಹೀಗಾಗಿ ಗಣೇಶ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ವಿಭಿನ್ನವಾದ ಕಥೆ ಹೆಣೆದಿದ್ದಾರಂತೆ. ಇಂದಿನ ಸಾಮಾಜಿಕ ಮಾಧ್ಯಮಗಳ ಮೂಲಕ ಯಾರು ಯಾವಾಗ ಬೇಕಾದರೂ ಹೀರೋ ಆಗಬಹುದು, ಹೀರೋಗಳಾಗಿದ್ದವರು ಜೀರೋಗಳಾಗಬಹುದು' ಎಂದ ಹಿನ್ನೆಲೆಯಲ್ಲಿ ಕಥೆ ಹೆಣೆಯಲಾಗಿದೆ ಎನ್ನಲಾಗಿದೆ.

ಚಂದ್ರಶೇಖರ್ ಅವರ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಅವರಲ್ಲಿ ನಟನೆಗೆ ಸಂಬಂಧಿಸಿದಂತೆ ಬಹಳಷ್ಟು ಪ್ಲಸ್ ಪಾಯಿಂಟ್‌ಗಳು ಇವೆಯಂತೆ. ಅವರನ್ನು ಯಾವುದೇ ರೀತಿಯಲ್ಲೂ ಪ್ರೇಕ್ಷಕರು ಒಪ್ಪಿಕೊಳ್ಳುವಂತೆ ತೋರಿಸಬಹುದು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅವರ ಅಭಿಪ್ರಾಯ ಎನ್ನಲಾಗಿದೆ. ಹೀಗಾಗಿ ಚೌಕಿದಾರ್ ಚಿತ್ರದಲ್ಲಿ ನಟ ಗಣೇಶ್ ಅವರನ್ನು ಎರಡು ರೀತಿಯ ಶೇಡ್‌ಗಳಲ್ಲಿ ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಅದರಲ್ಲೊಂದು ಪಾತ್ರ 55 ವರ್ಷದ ಅಂಕಲ್ ಪಾತ್ರ. ಈ ಪಾತ್ರದಲ್ಲಿ ಸಹ ನಟ ಗಣೇಶ್ ಅವರು ಮನಮುಟ್ಟುವಂತೆ ನಟಿಸಬಲ್ಲರು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ, ಸದ್ಯಕ್ಕೆ ಗೀತಾ ಹಾಗೂ ವೆರ್ ಈಸ್ ಮೈ ಕನ್ನಡಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ನಟ ಗಣೇಶ್. ಹೀಗಾಗಿ ಮುಂಬರುವ ಈ ಚೌಕಿದಾರ್ ಚಿತ್ರವು ಆಗಸ್ಟ್‌ನಲ್ಲಿ ಮುಹೂರ್ತ ಆಚರಿಸಿಕೊಂಡು ಶೂಟಿಂಗ್ ಶುರುಮಾಡಲಿದೆಯಂತೆ. ಸದ್ಯಕ್ಕೆ ಮಾತುಕತೆ ಹಂತದಲ್ಲಿರುವ ಚೌಕಿದಾರ್ ಚಿತ್ರವು ಅಧಿಕೃತ ಘೋಷಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಅಂದಹಾಗೆ, ಈ ಚಿತ್ರದಲ್ಲಿ ಗಣೇಶ್ ಅಭಿಮಾನಿಗಳು ಗಣೇಶ್ ಅವರನ್ನು ತುಂಬಾ ವಿಭಿನ್ನ ಗೆಟಪ್‌ನಲ್ಲಿ ನೋಡಬಹುದಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌