ಆ್ಯಪ್ನಗರ

ಕ್ರಿಮಿನಲ್ ಆಧಾರಿತ ಸಿನಿಮಾಕ್ಕೆ ನಟ ದುಲ್ಕರ್ ಸಲ್ಮಾನ್ ಇಷ್ಟೊಂದು ಹಣ ಹೂಡುತ್ತಿದ್ದಾರಾ?

ಮಲಯಾಳಂ ಸಿನಿಮಾಗಲ್ಲಿ ಹಣ ಹೂಡುವುದು ಕಡಿಮೆ. ದುಲ್ಕರ್ ಸಲ್ಮಾನ್ ಅವರ ಸಿನಿಮಾಗಳೆಂದರೆ ಹಲವರಿಗೆ ಅಚ್ಚುಮೆಚ್ಚು. ಈಗ ಅವರ ಸಿನಿ ಬದುಕಿನಲ್ಲಿ ಅತಿ ಹೆಚ್ಚಿನ ಹಣವನ್ನು 'ಕುರುಪ್' ಸಿನಿಮಾಕ್ಕೆ ಹಾಕಲಾಗುತ್ತಿದೆಯಂತೆ. ಆ ಹಣವೆಷ್ಟು? ಇಲ್ಲಿದೆ ಮಾಹಿತಿ

Vijaya Karnataka Web 29 May 2020, 4:50 pm
ದುಲ್ಕರ್ ಸಲ್ಮಾನ್ ಅವರು ವಿಶಿಷ್ಟ ಕಥೆ, ಪಾತ್ರಗಳಿಂದಲೇ ಅವರು ಈಗಾಗಲೇ ವಿಭಿನ್ನರಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅವರು ಅನೇಕ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. 'ಕುರುಪ್' ಸಿನಿಮಾ ನಟ ದುಲ್ಕರ್ ಸಲ್ಮಾನ್ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಕುಖ್ಯಾತ ವ್ಯಕ್ತಿ ಸುಕುಮಾರ್ ಕುರುಪ್ ಅವರ ಜೀವನಕಥೆಯನ್ನು ಈ ಚಿತ್ರ ಆಧರಿಸಿದೆ. ಈ ಚಿತ್ರಕ್ಕೆ ದುಲ್ಕರ್ ಅವರು ಅತಿ ಹೆಚ್ಚು ಹಣವನ್ನು ಹೂಡಲಿದ್ದಾರಂತೆ.
Vijaya Karnataka Web 1bn (1)


ಮಲಯಾಳಂ ಸಿನಿಮಾಗಳಲ್ಲಿ ಹಣ ಹೂಡೋದು ಕಡಿಮೆ. ಇದ್ದದರಲ್ಲೇ ಸುಂದರವಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನವನ್ನು ಇವು ಮಾಡುತ್ತವೆ. ತುಂಬ ಸರಳವಾಗಿ ಮೂಡಿಬರುವ ಮಲಯಾಳಂ ಸಿನಿಮಾಗಳು ತುಂಬ ನೈಜತೆಯಿಂದ ಕೂಡಿರೋದಕ್ಕೆ ಮಲಯಾಳಂ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿರುತ್ತವೆ. 35 ಕೋಟಿ ರೂಪಾಯಿ ಹಣವನ್ನು 'ಕುರುಪ್' ಸಿನಿಮಾಕ್ಕೆ ವ್ಯಯಿಸಲಾಗುತ್ತಿದೆ ಎಂಬ ಸುದ್ದಿಯಿದೆ. ದುಲ್ಕರ್ ಸಿನಿ ಬದುಕಿನಲ್ಲಿ ಈ ಮೊತ್ತ ತುಂಬ ದೊಡ್ಡದು. ದುಲ್ಕರ್ ಸಲ್ಮಾನ್ ಪ್ರೊಡಕ್ಷನ್ ಹೌಸ್‌ನಲ್ಲಿ ಈ ಚಿತ್ರ ರೆಡಿಯಾಗುತ್ತಿದೆ.

Also read-ಸಿನಿಮಾಕ್ಕೆ ಬರುವ ಮುನ್ನ, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೇಕೆ ದುಲ್ಕರ್ ಸಲ್ಮಾನ್?

ಆರು ತಿಂಗಳ ಕಾಲ ಕೇರಳ, ಅಹಮದಾಬಾದ್, ಮುಂಬೈ, ದುಬೈ, ಮಂಗಳೂರು, ಮೈಸೂರು ಜಾಗಗಳಲ್ಲಿ ಶೂಟಿಂಗ್ ಮಾಡಲಾಗಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವೂ ಮುಗಿದಿದೆ. ಕೊರೊನಾ ವೈರಸ್, ಲಾಕ್ ಡೌನ್ ಇರದಿದ್ದರೆ ಈ ಸಿನಿಮಾ ಈದ್‌ಗೆ ರಿಲೀಸ್ ಆಗಬೇಕಿತ್ತು.

ಈ ವರ್ಷ ದುಲ್ಕರ್ ಅವರ 'ವಾನ್' ಸಿನಿಮಾ ರಿಲೀಸ್ ಆಗಿತ್ತು. 'ಹೇಯ್ ಸಿನಮಿಕಾ' ಸಿನಿಮಾದಲ್ಲಿಯೂ ದುಲ್ಕರ್ ನಟಿಸುತ್ತಿದ್ದಾರೆ. ಈ ವರ್ಷವೇ 'ವರಾನೆ ಅವಶ್ಯಮುಂಡ್', 'ಮನಿಯಾರಯಿಲೆ ಅಶೋಕನ್' ಸಿನಿಮಾಕ್ಕೆ ಸಲ್ಮಾನ್ ಬಂಡವಾಳ ಹೂಡಿದ್ದರು.

Also read-ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಪ್ರಖ್ಯಾತ ನಟ ದುಲ್ಕರ್ ಸಲ್ಮಾನ್; ಇವರ ಪತ್ನಿ ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌