ಆ್ಯಪ್ನಗರ

ತಮಿಳು ನಟ ವಿಶಾಲ್‌ ತಂದೆ ನಿರ್ಮಾಣದ ಚಿತ್ರದಲ್ಲಿ ಪುನೀತ್‌

ಗ್ರ್ಯಾಂಡ್‌ ಫಾದರ್‌ 80 ಪ್ಲಸ್‌ ಇದು ನನ್ನ ಬಹುದಿನಗಳ ಕನಸಾಗಿದ್ದೂ, ಇಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯಿಸಬೇಕು - ಜೆ.ಕೆ ರೆಡ್ಡಿ

Vijaya Karnataka 21 Nov 2018, 5:00 am
ಪುನೀತ್‌ ರಾಜ್‌ಕುಮಾರ್‌ ಅವರು ನನಗೆ ಆತ್ಮೀಯರು. ಡಾ. ರಾಜ್‌ಕುಮಾರ್‌ ಅವರ ಕಾಲದಿಂದಲೂ ಅವರ ಕುಟುಂಬಕ್ಕೆ ನಾನು ಹತ್ತಿರವಿದ್ದೇನೆ. ಇನ್ನೂ ಅವರೊಂದಿಗೆ ಈ ವಿಷಯದ ಬಗ್ಗೆ ಪ್ರಸ್ತಾಪಿಸಿಲ್ಲ. ಸದ್ಯಕ್ಕೆ ದಮಯಂತಿ ಸಿನಿಮಾದಲ್ಲಿಯೂ ಪ್ರಮುಖ ಪಾತ್ರ ಮಾಡುತ್ತಿದ್ದೇನೆ. ಅದಾದ ನಂತರ ಈ ಸಿನಿಮಾದ ಕುರಿತು ಪುನೀತ್‌ರೊಂದಿಗೆ ಮಾತನಾಡುತ್ತೇನೆ' ಎಂದು ಜೆ.ಕೆ ರೆಡ್ಡಿತಿಳಿಸಿದ್ದಾರೆ.
Vijaya Karnataka Web VISHAL FATHER


ಇದು ಹೊಸ ರೀತಿಯ ಕಥೆಯಾಗಿದ್ದೂ, ಇಡೀ ಚಿತ್ರರಂಗವೇ ತಿರುಗಿ ನೋಡುವಂತಹ ಸಿನಿಮಾ ಇದಾಗಲಿದೆ. ಕಥೆಯೂ ಚೆನ್ನಾಗಿದೆ. ಪಾತ್ರವೂ ಪುನೀತ್‌ಗೆ ಹೇಳಿ ಮಾಡಿಸಿದಂತಿದೆ. ಮುಂದಿನ ವರ್ಷ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಶೂಟಿಂಗ್‌ ಶುರು ಮಾಡುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ನಾನು ಮತ್ತು ರೆಡ್ಡಿ ಸೇರಿ ವರ್ಷದಿಂದ ಗ್ರಾ ್ಯಂಡ್‌ ಫಾದರ್‌ 80 ಪ್ಲಸ್‌ ಕಥೆ ಬರೆದಿದ್ದೇವೆ. ಇದರಲ್ಲಿ ನಾನು ಕೂಡ ಒಂದು ಪಾತ್ರ ಮಾಡುತ್ತಿದ್ದೇನೆ. ಇದು 80 ವರ್ಷ ದಾಟಿದರೂ ವ್ಯಕ್ತಿ ಹೇಗೆಲ್ಲಾ ಜೀವನದಲ್ಲಿ ಉತ್ಸಾಹದಿಂದ ಸಿಕ್ಸ್‌ಪ್ಯಾಕ್‌ ಮಾಡುತ್ತಾನೆ. ಜೀವನದಲ್ಲಿ ಅವನು ಇನ್ನೂ ಸಾಧಿಸುವ ಛಲ ಹೇಗಿರುತ್ತದೆ ಎಂಬ ಕಥೆಯನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ' ಎನ್ನುತ್ತಾರೆ ನವರಸನ್‌.

ಗ್ರ್ಯಾಂಡ್‌ ಫಾದರ್‌ 80 ಪ್ಲಸ್‌ ಇದು ನನ್ನ ಬಹುದಿನಗಳ ಕನಸಾಗಿದ್ದೂ, ಇಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯಿಸಬೇಕು ಎಂಬ ಆಸೆ ಇದೆ. ಆದಷ್ಟು ಬೇಗ ಅವರೊಂದಿಗೆ ಮಾತನಾಡುತ್ತೇನೆ.

-ಜೆ.ಕೆ ರೆಡ್ಡಿ, ನಟ ಕಮ್‌ ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌