ಆ್ಯಪ್ನಗರ

ಗಲ್ಲಿ ಬಾಯ್‌ಗೆ ಸ್ಪೂರ್ತಿಯಾದ ರ‍್ಯಾಪರ್ ಡಿವೈನ್

ಸ್ಟೇಜ್‌ ಶೋವೊಂದರಲ್ಲಿ ಇವರನ್ನು ಭೇಟಿಯಾದ ಗಲ್ಲಿ ಬಾಯ್‌ ಸಿನಿಮಾ ನಿರ್ದೇಶಕಿ ಝೋಯಾ ಅಖ್ತರ್‌, ಡಿವೈನ್‌ ಬದುಕಿನ ಕಥೆಯಿಂದ ಸ್ಫೂರ್ತಿಗೊಂಡು ಗಲ್ಲಿ ಬಾಯ್‌ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದರು.

Vijaya Karnataka 18 Feb 2019, 8:06 am
ರಣವೀರ್‌ ಸಿಂಗ್‌ ನಟನೆಯ ಗಲ್ಲಿ ಬಾಯ್‌ ಸಿನಿಮಾ ನಿರ್ಮಾಣವಾಗಲು ಮುಖ್ಯ ಕಾರಣ ಮುಂಬಯಿನ ಜನಪ್ರಿಯ ದೇಸಿ ರ‍್ಯಾಪರ್ ವಿವಿಯನ್‌ ಫೆರ್ನಾಂಡಿಸ್‌. ಡಿವೈನ್‌ ಎಂಬ ಹೆಸರಿನಿಂದಲೇ ಫೇಮಸ್‌ ಆಗಿರುವ ಅವರು ಬಡ ಕುಟುಂಬದ ಹುಡುಗರೂ ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸ್ಟೇಜ್‌ ಶೋವೊಂದರಲ್ಲಿ ಇವರನ್ನು ಭೇಟಿಯಾದ ಗಲ್ಲಿ ಬಾಯ್‌ ಸಿನಿಮಾ ನಿರ್ದೇಶಕಿ ಝೋಯಾ ಅಖ್ತರ್‌, ಡಿವೈನ್‌ ಬದುಕಿನ ಕಥೆಯಿಂದ ಸ್ಫೂರ್ತಿಗೊಂಡು ಗಲ್ಲಿ ಬಾಯ್‌ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದರು.
Vijaya Karnataka Web Rapper Devine


ಮುಂಬಯಿಯ ಗಲ್ಲಿಗಳಲ್ಲೇ ಹಾಡಿ ಕುಣಿಯುತ್ತಿದ್ದ ಡಿವೈನ್‌ ಅಲ್ಲಿಂದಲೇ ದೊಡ್ಡ ರ‍್ಯಾಪರ್ ಆಗಿ ಬೆಳೆದ ಕಥೆ ಯುವಜನತೆಗೆ ಸ್ಫೂರ್ತಿಯಾಗಬಹುದು ಎಂಬ ಉದ್ದೇಶದಿಂದ ಗಲ್ಲಿ ಬಾಯ್‌ ಸಿನಿಮಾ ಮಾಡುವ ಯೋಚನೆ ಬಂತು ಎಂದೊಮ್ಮೆ ಝೋಯಾ ಅಖ್ತರ್‌ ಹೇಳಿದ್ದರು. ಈ ಸಿನಿಮಾ ಡಿವೈನ್‌ ಬಯೋಪಿಕ್‌ ಅಲ್ಲ, ಬದಲಾಗಿ ಅವರ ಜೀವನದ ಕಥೆಯಿಂದ ಸ್ಫೂರ್ತಿಗೊಂಡ ಸಿನಿಮಾ ಎಂದು ಹೇಳಲಾಗುತ್ತಿದೆ. ಡಿವೈನ್‌ ಹಾಡಿರುವ ವಾಯ್ಸ್‌ ಆಫ್‌ ಸ್ಟ್ರೀಟ್ಸ್‌, ಯೇ ಮೇರ ಬಾಂಬೆ, ಎಬಿಇ, ಮೇರೆ ಗಲ್ಲಿ ಮೇ, ಜಂಗಲ್‌ ರಾಜ, ಸಿಟಿ ಸ್ಲಮ್ಸ್‌ ಮುಂತಾದ ಆಲ್ಬಂಗಳು ಸಿಕ್ಕಾಪಟ್ಟೆ ಜನಪ್ರಿಯವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌