ಆ್ಯಪ್ನಗರ

ವೆಬ್‌ಸೀರಿಸ್‌ ಮಾಡ್ತಾರೆ ಗುರುದತ್‌ ಗಾಣಿಗ

ಅಂಬರೀಷ್‌ ಅವರ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೊ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದ ಗುರದತ್‌ ಗಾಣಿಗ ಈಗ ವೆಬ್‌ಸೀರಿಸ್‌ ಮಾಡುತ್ತಿದ್ದಾರೆ.

Vijaya Karnataka 25 Jan 2019, 9:09 am
ಅಂತರಾಷ್ಟ್ರೀಯ ಮಟ್ಟದಲ್ಲಿದ ವೆಬ್‌ಸೀರಿಸ್‌ಗಳನ್ನು ಪ್ರದರ್ಶನ ಮಾಡುತ್ತಿರುವ ನೆಟ್‌ಫ್ಲಿಕ್ಸ್‌ನಲ್ಲಿ ಇನ್ನು ಮುಂದೆ ಕನ್ನಡ ಭಾಷೆಯ ವೆಬ್‌ ಸೀರಿಸ್‌ಗಳು ಬರುವ ಸಮಯ ಹತ್ತಿರ ಬರುತ್ತಿದೆ. ಅಲ್ಲಿಗೆ ಕನ್ನಡದ ಮೊದಲ ವೆಬ್‌ ಸೀರಿಸ್‌ನ್ನು ಅಂಬಿ ನಿಂಗೆ ವಯಸ್ಸಾಯ್ತೊ ನಿರ್ದೇಶಕ ಗುರುದತ್‌ ಗಾಣಿಗ ಮಾಡಿಕೊಡಲಿದ್ದಾರೆ.
Vijaya Karnataka Web gurudat ganiga (3)


ಈ ಬಗ್ಗೆ ಮೊದಲ ಹಂತದ ಮಾತುಕತೆ ಮುಗಿದಿದ್ದು, ಗುರುದತ್‌ ಮುಂದಿನ ವಾರದಿಂದ ಪೈಲೆಟ್‌ ಎಪಿಸೋಡ್‌ಗಳ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು 'ನನಗೆ ನೆಟ್‌ಫ್ಲಿಕ್ಸ್‌ಗಾಗಿ ವೆಬ್‌ಸೀರಿಸ್‌ ಮಾಡಿಕೊಡಿ ಎಂದು ಹೇಳಿರುವುದು ಕನ್ನಡದ ಒಂದು ಪ್ರೊಡಕ್ಷನ್‌ ಹೌಸ್‌. ನನ್ನ ಕಾನ್ಸೆಪ್ಟ್‌ನ್ನು ಆ ಪ್ರೊಡಕ್ಷನ್‌ ಹೌಸ್‌ಗೆ ಹೇಳಿದ್ದೇನೆ ಒಪ್ಪಿಕೊಂಡಿದ್ದಾರೆ. ಪೈಲೆಟ್‌ ಎಪಿಸೋಡ್‌ ಶೂಟಿಂಗ್‌ ನಂತರ ಉಳಿದ ವಿವರಗಳನ್ನು ಹೇಳುತ್ತೇನೆ. ನನ್ನ ಕಾನ್ಸೆಪ್ಟ್‌ನ್ನು ಸುದೀಪ್‌ ಅವರಿಗೂ ಹೇಳಿದ್ದೇನೆ. ಭವಿಷ್ಯದಲ್ಲಿ ಅವರೂ ಸಹ ನಿರ್ಮಾಣದಲ್ಲಿ ಜತೆಗೂಡಬಹುದು,'ಎನ್ನುತ್ತಾರೆ.

ಇನ್ನು ಇದರ ಜತೆಗೆ ಗುರುದತ್‌ ಮುಂದಿನ ಸಿನಿಮಾ ಸಹ ಕೆಲ ದಿನಗಳಲ್ಲಿಯೇ ಅನೌನ್ಸ್‌ ಆಗಲಿದೆಯಂತೆ. ಒಟ್ಟಿನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದ ವೆಬ್‌ ಸೀರಿಸ್‌ನ್ನು ನೋಡುವ ದಿನ ಬಹಳ ಹತ್ತಿರದಲ್ಲೇ ಇದೆ.

ವೆಬ್‌ ಸೀರಿಸ್‌ ಆಫರ್‌ ಬಂದಿರುವುದು ನಿಜ, ಮುಂದಿನ ವಾರ ಪೈಲೆಟ್‌ ಎಪಿಸೋಡ್‌ ಆರಂಭಿಸುತ್ತಿದ್ದೇನೆ. ಉಳಿದ ವಿವರಗಳನ್ನು ನಂತರದ ದಿನಗಳಲ್ಲಿ ನೀಡುತ್ತೇನೆ-ಗುರುದತ್‌ ಗಾಣಿಗ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌