ಆ್ಯಪ್ನಗರ

ನಾಲ್ಕು ತಿಂಗಳಲ್ಲಿ ನಾಲ್ಕೇ ಬಾರಿ ಊಟ

ಸಿಕ್ಸ್ ಪ್ಯಾಕ್ ಮಾಡೋಕೆ ಏನೆಲ್ಲ ವನವಾಸ ಇರುತ್ತೆ ಅನ್ನೋದು ಅದನ್ನು ಮಾಡಿದವರಿಗೇ ಗೊತ್ತು

Vijaya Karnataka Web 21 Mar 2016, 4:36 am
ಸಿಕ್ಸ್ ಪ್ಯಾಕ್ ಮಾಡೋಕೆ ಏನೆಲ್ಲ ವನವಾಸ ಇರುತ್ತೆ ಅನ್ನೋದು ಅದನ್ನು ಮಾಡಿದವರಿಗೇ ಗೊತ್ತು. ಆದರೆ ಅದನ್ನು ಮಾಡಿದಾಗ ಸಿಗುವ ಖುಷಿಯೇ ಬೇರೆ ಅನ್ನುತ್ತಾರೆ ಅನೀಶ್. ಇವರು ಇಂಥದೊಂದು ಹರಸಾಹಸ ಮಾಡಿದ್ದು ಅಕಿರ ಚಿತ್ರಕ್ಕಾಗಿ.
Vijaya Karnataka Web how aneesh gets six pack
ನಾಲ್ಕು ತಿಂಗಳಲ್ಲಿ ನಾಲ್ಕೇ ಬಾರಿ ಊಟ


- ಪದ್ಮಾ ಶಿವಮೊಗ್ಗ

ಆ್ಯಕ್ಷನ್ ಚಿತ್ರಗಳಿಗೆ ನಟರು ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡೋದನ್ನು ಕೇಳಿದ್ದೇವೆ. ಆದರೆ, ಲವ್ ಸ್ಟೋರಿ ಇರುವ ‘ಅಕಿರ’ ಕನ್ನಡ ಚಿತ್ರದಲ್ಲಿ ಸ್ಪೆಷಲ್ ಆಗಿ ಕಾಣಿಸಲು ಅನೀಶ್ ತೇಜೇಶ್ವರ್ ನಾಲ್ಕು ತಿಂಗಳು ಶ್ರಮಪಟ್ಟು ಸಿಕ್ಸ್ ಪ್ಯಾಕ್ ತಮ್ಮದಾಗಿಸಿಕೊಂಡಿದ್ದಾರೆ.

ನವೀನ್ ರೆಡ್ಡಿ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ವಿಭಿನ್ನ ಪ್ರೇಮ ಕತೆ ಇದೆ. ರೋಮ್ಯಾನ್ಸ್, ಕಾಲೇಜು ಲೈಫ್, ಡಾನ್ಸ್, ಆ್ಯಕ್ಷನ್ ಇರುವ ಚಿತ್ರಕ್ಕಾಗಿ ಅನೀಶ್ ನಾಲ್ಕು ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ ಊಟ ಮಾಡಿದ್ದಾರೆ. ಉಳಿದಂತೆ ಬರೀ ಹಸಿ ತರಕಾರಿ ಮತ್ತು ಫಿಶ್ ತಿಂದು ಸ್ಟ್ರಿಕ್ಟ್ ಫುಡ್ ಡಯಟ್ ಮಾಡಿದ್ದಾರೆ.

‘ಅನ್ನ, ಮಸಾಲೆ ಅಡುಗೆಯನ್ನು ಬಿಟ್ಟುಬಿಟ್ಟಿದ್ದೆ. ಬರೀ ಸಪ್ಪೆ ಊಟ. ಪುಲ್ಕ, ತರಕಾರಿ, ಮೀನು... ಇಷ್ಟೇ ನನ್ನ ಫುಡ್. ತಿಂಗಳ ಕೊನೆಯ ದಿನ ಮಧ್ಯಾಹ್ನ ಒಂದು ಹೊತ್ತು ಮಾತ್ರ ತಿನ್ನಬೇಕನ್ನಿಸಿದ್ದನ್ನೆಲ್ಲಾ ತಿನ್ನುತ್ತಿದ್ದೆ. ಆದರೆ, ಸಂಜೆ ಇದನ್ನು ಸರಿದೂಗಿಸಲು 10 ಕಿ.ಮೀ. ಓಡಬೇಕಾಗುತ್ತಿತ್ತು. ಹೆಚ್ಚು ನಿದ್ರೆ ಮಾಡುತ್ತಿದ್ದೆ’ ಎನ್ನುತ್ತಾರೆ ಅನೀಶ್. ಶೂಟಿಂಗ್ ಹೊತ್ತಿಗೆ 13 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಈಗ ತಿನ್ನೋದು ಬಿಟ್ಟು ಇವರು ಬೇರೆ ಏನೂ ಯೋಚಿಸುತ್ತಿಲ್ಲವಂತೆ. ‘ಡಯಟ್ ಮಾಡುವಾಗ ಸ್ನೇಹಿತರು ಬಿರಿಯಾನಿ ತಿನ್ನುತ್ತಿದ್ದರೆ ನನಗೆ ಆಸೆ ಆಗುತ್ತಿರಲಿಲ್ಲ. ನಾನು ಸೌತೇಕಾಯಿ, ಕ್ಯಾರೆಟ್ ತಿನ್ನುತ್ತಿದ್ದೆ. ಈಗ ಬೆಳಗ್ಗೆ ತಿಂಡಿ ತಿನ್ನುತ್ತಿದ್ದಂತೆ, ಮಧ್ಯಾಹ್ನ ಏನು ಊಟ ಮಾಡೋಣ ಅಂತ ಯೋಚಿಸ್ತಿದ್ದೀನಿ. ಸಿಕ್ಕಾಪಟ್ಟೆ ಫುಡ್ ಎಂಜಾಯ್ ಮಾಡ್ತಿದ್ದೀನಿ’ ಎನ್ನುತ್ತಾರೆ.

ವೈಟ್ ಫೀಲ್ಡ್‌ನಿಂದ ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು 25 ಕಿ.ಮೀ. ದೂರದ ಜಿಮ್ ಸೆಂಟರ್‌ಗೆ ಪ್ರತಿದಿನ ಹೋಗಿದ್ದಾರೆ. ಬೆಳಗ್ಗೆ ಸಂಜೆ ದಿನಕ್ಕೆ 6 ಗಂಟೆ ವ್ಯಾಯಾಮ. ಮಿಲಿಟರಿಯಲ್ಲಿ ಮಾಡುವ ವ್ಯಾಯಾಮಗಳನ್ನು ಮಾಡಿದ್ದಾರೆ. ಚಿತ್ರದಲ್ಲಿ ಡಾನ್ಸ್, ಫೈಟ್ ಮಾಡುವಾಗ ಬಹಳ ಸಹಾಯಕ್ಕೆ ಬಂತಂತೆ. ‘ಫೈಟ್ ದೃಶ್ಯಗಳಲ್ಲಿ ನನ್ನ ದೇಹ ಹಗುರವಾಗಿ ತೇಲಿದಂತೆ ಅನ್ನಿಸುತ್ತಿತ್ತು. ವಿಶ್ವಾಸ ಹೆಚ್ಚಿಸಿತು. ಮೊದಲು ನನ್ನ ಸ್ನೇಹಿತರ ಜತೆ ಸುಮ್ಮನೆ ಸುತ್ತುತ್ತಿದ್ದೆ. ಅದರೆ ಇದು ಶಿಸ್ತನ್ನೂ ಕಲಿಸಿತು. ಸೋಮಾರಿತನ ಹೊರಟುಹೋಗುತ್ತೆ’ ಅನ್ನೋದು ಅವರ ಅಭಿಪ್ರಾಯ. ಅಂದಹಾಗೆ ಈ ಚಿತ್ರದಲ್ಲಿ ಅದಿತಿ ಮತ್ತು ಕೃಷಿ ತಾಪಂದ ನಾಯಕಿಯರಾಗಿ ನಟಿಸಿದ್ದಾರೆ.


ಮೊದಲಿನಿಂದಲೂ ಬಾಡಿ ಫಿಟ್‌ನೆಸ್‌ಗಾಗಿ ಜಿಮ್‌ಗೆ ಹೋಗುವ ಅಭ್ಯಾಸ ಇತ್ತು. ಆದರೆ, ಇಷ್ಟು ಹಾರ್ಡ್ ವರ್ಕ್ ಎಂದೂ ಮಾಡಿರಲಿಲ್ಲ. ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಬೇಕೆಂದು ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿದೆ. ನನ್ನಲ್ಲಿದ್ದ ಛಲದಿಂದ ಇಷ್ಟು ಕಷ್ಟಪಡುವುದು ಸಾಧ್ಯವಾಯಿತು.

-ಅನೀಶ್ ತೇಜೇಶ್ವರ್, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌