ಆ್ಯಪ್ನಗರ

ಶೂನ್ಯ ಫಲಿತಾಂಶ; ರಾಜಕೀಯಕ್ಕೆ ಗುಡ್‍ಬೈ ಹೇಳ್ತಾರಾ ಕಮಲ್ ಹಾಸನ್?

ತಮಿಳುನಾಡಿನ 39 ಲೋಕಸಭೆ ಕ್ಷೇತ್ರಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆಡಳಿತ ಪಕ್ಷ ಅನ್ನಾ ಡಿಎಂಕೆ, ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಮಲ್ ಹಾಸನ್ ಪ್ರಚಾರ ಮಾಡಿದರು.

Vijaya Karnataka Web 25 May 2019, 4:00 pm
ನಟ ಕಮಲ್ ಹಾಸನ್ ಕಳೆದ ವರ್ಷ ಫೆಬ್ರವರಿ 21ರಂದು ಮಕ್ಕಳ್ ನೀಧಿ ಮಯ್ಯಂ ಎಂಬ ಪಕ್ಷವನ್ನು ಸ್ಥಾಪಿಸಿದ್ದು ಗೊತ್ತೇ ಇದೆ. ದಕ್ಷಿಣದ ಆರು ರಾಜ್ಯಗಳ ನೆನಪಿಗಾಗಿ ಆರು ಕೈಗಳನ್ನು ಹೊಂದಿರುವ ಧ್ವಜವನ್ನು ತಯಾರಿಸಿ ಈ ಸಲದ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದರು.
Vijaya Karnataka Web kamal-haasan


ತಮಿಳುನಾಡಿನ 39 ಲೋಕಸಭೆ ಕ್ಷೇತ್ರಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆಡಳಿತ ಪಕ್ಷ ಅನ್ನಾ ಡಿಎಂಕೆ, ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಮಲ್ ಹಾಸನ್ ಪ್ರಚಾರ ಮಾಡಿದರು.

ಆದರೆ ಈ ಬಾರಿಯ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷ ಮಕ್ಕಳ್ ನೀಧಿ ಮಯ್ಯಂ ಒಂದೇ ಒಂದು ಖಾತೆಯನ್ನೂ ತೆರೆದಿಲ್ಲ. ಇದು ಕಮಲ್ ಹಾಸನ್ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಮಲ್ ಹಾಸನ್ ಅಭಿನಯದ ಸಿನಿಮಾಗಳೂ ಬಾಕ್ಸ್ ಆಫೀಸಲ್ಲಿ ಮುಗ್ಗರಿಸಿವೆ. ಇದೀಗ ರಾಜಕೀಯದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ.

ತನ್ನ ಪಕ್ಷ ಒಂದೇ ಒಂದು ಸೀಟನ್ನೂ ಗೆಲ್ಲದಿರುವ ಬಗ್ಗೆ ಕಮಲ್ ಹಾಸನ್ ನಿರಾಸೆಗೆ ಒಳಗಾಗಿದ್ದು, ರಾಜಕೀಯಕ್ಕೆ ಗುಡ್ ಬೈ ಹೇಳಿ ಮತ್ತೆ ಸಿನಿಮಾ ಕಡೆಗೆ ದೃಷ್ಟಿ ಹರಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮುಂದಿನ ಚುನಾವಣೆ ತನಕ ಪಕ್ಷವನ್ನು ಮುನ್ನಡೆಸುವುದು ಅಷ್ಟು ಸುಲಭದ ವ್ಯವಹಾರವಲ್ಲ ಎಂಬುದು ಕಮಲ್ ಹಾಸನ್‌ಗೆ ಗೊತ್ತು. ಹಾಗಾಗಿ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರಂತೆ. ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಕಮಲ್ ಹಾಸನ್‌ಗೆ ಚುನಾವಣಾ ಫಲಿತಾಂಶ ಅರಗಿಸಿಕೊಳ್ಳಲು ಆಗುತ್ತಿಲ್ಲ. ಚುನಾವಣಾ ಆಯೋಗ ಕಮಲ್ ಹಾಸನ್‌ಗೆ ಟಾರ್ಚ್‌ಲೈಟ್ ಚಿನ್ಹೆಯನ್ನು ನೀಡಿತ್ತು. ಆದರೆ ಟಾರ್ಚ್‍ಲೈಟ್ ಕತ್ತಲಲ್ಲಿ ಕಳೆದುಹೋಗಿದೆ ಎಂಬ ಕಾಮೆಂಟ್‌ಗಳು ಕೇಳಿಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌