ಆ್ಯಪ್ನಗರ

Ambareesh: ಅಂಬಿಗಾಗಿ ತೆಲುಗು 'ರೆಬೆಲ್' ಸಿನಿಮಾ ರೈಟ್ಸ್ ಖರೀದಿಸಿದ್ದ ಎಚ್ಡಿಕೆ

ತೆಲುಗಿನ ರೆಬೆಲ್ ಸಿನಿಮಾದಲ್ಲಿ ಪ್ರಭಾಸ್, ತಮನ್ನಾ ಭಾಟಿಯಾ, ಕೃಷ್ಣಂ ರಾಜು ದೀಕ್ಷಾ ಸೇಠ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ರಾಘವ ಲಾರೆನ್ಸ್ ನಿರ್ದೇಶಿಸಿದ್ದಾರೆ.

Vijaya Karnataka Web 30 Nov 2018, 12:43 pm
ಅಂಬರೀಶ್ ಮತ್ತು ನನ್ನ ಮಗನನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಇದಕ್ಕಾಗಿ ತೆಲುಗಿನ 'ರೆಬೆಲ್' ಸಿನಿಮಾ ರೈಟ್ಸ್ ತೆಗೆದುಕೊಂಡಿದ್ದೆ. ರಾಜಕೀಯ ಒತ್ತಡದಿಂದ ಅದು ಸಾಧ್ಯವಾಗಲಿಲ್ಲ. ಈಗಲೂ ನನ್ನಲ್ಲೇ ರೈಟ್ಸ್ ಇವೆ ಎಂದರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web ambarish


ಅವರು ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಟ ಅಂಬರೀಷ್ ಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಮತ್ತು ಅಂಬರೀಶ್ ನಡುವಿನ ಒಡನಾಟದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ಅಂಬರೀಶ್ ಮತ್ತು ನನ್ನ ಮಗನ ಜತೆಗಿನ ಸಿನಿಮಾ ಕನಸು ಕಡೆಗೂ ನೆರವೇರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ತೆಲುಗಿನ ರೆಬೆಲ್ ಸಿನಿಮಾದಲ್ಲಿ ಪ್ರಭಾಸ್, ತಮನ್ನಾ ಭಾಟಿಯಾ, ಕೃಷ್ಣಂ ರಾಜು ದೀಕ್ಷಾ ಸೇಠ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ರಾಘವ ಲಾರೆನ್ಸ್ ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ಕೃಷ್ಣಂ ರಾಜು ಪೋಷಿಸಿದ್ದ ಪಾತ್ರವನ್ನು ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮತ್ತು ಪ್ರಭಾಸ್ ಪಾತ್ರವನ್ನು ನಿಖಿಲ್ ಪೋಷಿಸಲು ಬಯಸಿದ್ದರು ಕುಮಾರಸ್ವಾಮಿ. ಹಾಗಾಗಿ ಆ ಸಿನಿಮಾದ ರೈಟ್ಸ್ ಖರೀದಿಸಿದ್ದರು. ಆದರೆ ರಾಜಕೀಯ ಒತ್ತಡದಿಂದ ಅದು ಸಾಧ್ಯವಾಗಲಿಲ್ಲ ಎಂಬ ಸಂಗತಿಯನ್ನು ಶ್ರದ್ಧಾಂಜಲಿ ಸಭೆಯಲ್ಲಿ ತಿಳಿಸಿದರು.

ಅಂಬರೀಶ್‌ಗೆ ನಮನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಅಂಬಿ ಪತ್ನಿ ಸುಮಲತಾ, ಕಲಾವಿದರಾದ ಜಗ್ಗೇಶ್, ದೊಡ್ಡಣ್ಣ, ಉಮಾಶ್ರೀ, ಶಿವರಾಜ್ ಕುಮಾರ್, ಬಿ.ಸರೋಜಾದೇವಿ, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗಿಯಾಗಿದ್ದಾರೆ.
ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌