ಆ್ಯಪ್ನಗರ

ಐ ಲವ್ ಯೂ ಅಂತಿದ್ದಾರೆ ನಿರ್ದೇಶಕ ಚಂದ್ರು

ತಾಜ್‌ಮಹಲ್‌, ಚಾರ್‌ ಮಿನಾರ್‌ ರೀತಿಯ ಪ್ಯೂವರ್‌ ಲವ್‌ ಸ್ಟೋರಿಯನ್ನು ನಿರ್ದೇಶನ ಮಾಡಿರುವ ಆರ್‌.ಚಂದ್ರು, ಈಗ ಮತ್ತೊಂದು ವಿಭಿನ್ನ ಪ್ರೇಮಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ಐ ಲವ್‌ ಯು ಎಂದು ಹೆಸರಿಟಿದ್ದಾರೆ.

Vijaya Karnataka 30 Mar 2018, 12:07 pm
ಅಪರೂಪದ ಲವ್‌ಸ್ಟೋರಿಯನ್ನು ಕನ್ನಡಕ್ಕೆ ಕೊಟ್ಟವರು ನಿರ್ದೇಶಕ ಆರ್‌.ಚಂದ್ರು. ತಾಜ್‌ಮಹಲ್‌, ಪ್ರೇಮ್‌ ಕಹಾನಿ, ಚಾರ್‌ ಮೀನಾರ್‌ ಹೀಗೆ ಇವರ ಅನೇಕ ಚಿತ್ರಗಳು ಶತದಿನ ಕಂಡಿವೆ. ನಂತರ ಆ್ಯಕ್ಷನ್‌ ಚಿತ್ರಗಳ ಮುಖ ಮಾಡಿದ್ದ ಚಂದ್ರು,ಅಲ್ಲಿಯೂ ಗೆಲುವು ಕಂಡರು. ಈಗ ಮತ್ತೆ ಲವ್‌ಸ್ಟೋರಿ ಬೆನ್ನು ಹತ್ತಿದ್ದಾರೆ. ಈ ಬಾರಿ 'ಐ ಲವ್‌ ಯು' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು, ಎರಡು ಹೃದಯಗಳ ಸಿಗ್ನೇಚರ್‌ ಎಂದು ಅಡಿಬರಹ ಇಟ್ಟು ಕುತೂಹಲ ಮೂಡಿಸಿದ್ದಾರೆ.
Vijaya Karnataka Web r-chandru


ಇಂದು ಟೈಟಲ್‌ ಲಾಂಚ್‌ ಆಗಿದ್ದು, ಸಿನಿಮಾದ ನಾಯಕ ಮತ್ತು ನಾಯಕಿಯ ವಿಚಾರದಲ್ಲಿ ಸಸ್ಪೆನ್ಸ್‌ ಕಾಯ್ದುಕೊಂಡಿದ್ದಾರೆ ನಿರ್ದೇಶಕರು. 'ನನ್ನ ಅನೇಕ ಚಿತ್ರಗಳು ಟೈಟಲ್‌ನಿಂದಾಗಿಯೇ ಗಮನ ಸೆಳೆದಿವೆ. ಹಾಗಾಗಿ ಮೊದಲು ಟೈಟಲ್‌ ಅನಾವರಣ ಮಾಡುತ್ತಿದ್ದೇನೆ. ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಹೆಸರಾಂತ ಕಲಾವಿದರೇ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಆದಷ್ಟು ಬೇಗ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಅಂತಾರೆ ಚಂದ್ರು.

ಈ ಚಿತ್ರದ ಮತ್ತೊಂದು ವಿಶೇಷ ಅಂದರೆ, ತೆಲುಗಿನ ಖ್ಯಾತ ನಿರ್ಮಾಪಕರು ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಈ ಚಿತ್ರದ ಮೂಲಕ ರಾಜ ಪ್ರಭಾಕರ್‌ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ.

'ಸದ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರಲ್ಲಿ ಬಿಝಿ ಆಗಿದ್ದೇನೆ. ಎಲ್ಲವೂ ಪಕ್ಕಾ ಆದ ನಂತರ ಶೂಟಿಂಗ್‌ನಲ್ಲಿ ತೊಡಗಿಕೊಳ್ಳುವೆ. ಹೆಸರಾಂತ ಕಲಾವಿದರು ಮತ್ತು ತಾಂತ್ರಿಕ ವರ್ಗ ಕೂಡ ಈ ಸಿನಿಮಾದಲ್ಲಿ ಇರಲಿದೆ. ಇವರ ಜತೆಗೆ ಅಪರೂಪದ ಲವ್‌ಸ್ಟೋರಿಯನ್ನು ಚಿತ್ರ ಮಾಡುತ್ತಿದ್ದೇನೆ' ಅನ್ನುವುದು ನಿರ್ದೇಶಕರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌