ಆ್ಯಪ್ನಗರ

ದೀಪ ಹಚ್ಚುವವರ ಕೈಗೆ ಬೆಂಕಿಪಟ್ಣ ಕೊಡಿ

ಮತದಾನ ಏಕೆ ಮಾಡುತ್ತೇವೆ ಅನ್ನುವುದಕ್ಕಿಂತ ಯಾರಿಗೆ ಮಾಡುತ್ತೇವೆ ಎನ್ನುವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ ಡಾಲಿ ಧನಂಜಯ್‌.

Vijaya Karnataka 19 Apr 2018, 11:25 am
ಮತದಾನ ಏಕೆ ಮಾಡುತ್ತೇವೆ ಅನ್ನುವುದಕ್ಕಿಂತ ಯಾರಿಗೆ ಮಾಡುತ್ತೇವೆ ಎನ್ನುವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ ಡಾಲಿ ಧನಂಜಯ್‌. 'ಅಧಿಕಾರ ಎನ್ನುವುದು ಬೆಂಕಿಪಟ್ಟಣ ಇದ್ದ ಹಾಗೆ. ಅದನ್ನು ನಾವು ದೀಪ ಹಚ್ಚುವವರ ಕೈಗೆ ಮತದಾನದ ಮೂಲಕ ನೀಡಬೇಕು. ಅದನ್ನು ಬಿಟ್ಟು ಯೋಗ್ಯತೆ ಇಲ್ಲದವರಿಗೆ ವೋಟು ಹಾಕಿದರೆ ಅವರು ನಮಗೆ ಬೆಂಕಿ ಹಚ್ಚುತ್ತಾರೆ. ಹಾಗಂತ ಮತದಾನ ಮಾಡದೇ ಇದ್ದರೆ ಅದು ತಪ್ಪು . ಅದಿನ್ನೂ ಅಪಾಯಕಾರಿ. ಒಂದು ವೇಳೆ ನೀವು ಮತದಾನ ಮಾಡದೇ ಹೋದರೆ ನಿಮ್ಮ ಹಕ್ಕುಗಳನ್ನು ಆಯ್ಕೆಯಾದವರ ಬಳಿ ಕೇಳಲು ಆಗುವುದಿಲ್ಲ. ಹಾಗಾಗಿ ಪ್ರಜಾ ಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತವೂ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ ನಿಮ್ಮ ಹಕ್ಕನ್ನು ಪ್ರತಿಪಾದಿಸಿ' ಎನ್ನುವುದು ಧನಂಜಯ ಮಾತು.
Vijaya Karnataka Web dhananjay


'ನಾವು ಮತದಾನ ಮಾಡುವ ಮೂಲಕ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಹಾಗಾಗಿ ಜನರು ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಅಂತಹ ವ್ಯಕ್ತಿ ನಿಮ್ಮ ಕ್ಷೇತ್ರದಲ್ಲಿ ಇಲ್ಲ ಎಂದಾದರೆ, ನೀವು ನೋಟಾವನ್ನು ಆಯ್ಕೆ ಮಾಡಬಹುದು' ಎಂಬ ಸಲಹೆಯನ್ನೂ ಇವರು ನೀಡುತ್ತಾರೆ.

ಧನಂಜಯ್‌ರಿಗೆ ಮತದಾನದ ಹಕ್ಕು ಸಿಕ್ಕಾಗಿನಿಂದ ಪ್ರತಿ ಚುನಾವಣೆಯಲ್ಲೂ ತಪ್ಪದೇ ವೋಟು ಹಾಕಿದ್ದಾರಂತೆ. ಮತದಾನ ಪವಿತ್ರ ಕೆಲಸ ಅದನ್ನು ಮಾಡದೇ ವ್ಯವಸ್ಥೆಯನ್ನು ದೂರಬೇಡಿ ಎನ್ನುವುದು ಧನಂಜಯ್‌ ಮಾತು.

(ನಿರೂಪಣೆ: ಹರೀಶ್‌ ಬಸವರಾಜ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌