ಆ್ಯಪ್ನಗರ

'ಬಾಹುಬಲಿ 3'ರಲ್ಲಿ ಅಭಿನಯಿಸುತ್ತೀನಿ ಎಂದ ಹಾಲಿವುಡ್ ನಟ

ರಾಜಮೌಳಿ ಅವರ ಮುಂದಿನ ಬಾಹುಬಲಿ 3 ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಸಾಮ್ಯುಯಲ್. ಇವರು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಒಂದು ವೇಳೆ ನೀವು ಯಾವ ರೀತಿಯ ಭಾರತೀಯ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಬಯಸುತ್ತೀರ ಎಂಬ ಪ್ರಶ್ನೆಗೆ ಬಾಹುಬಲಿ 3 ಎಂದಿದ್ದಾರೆ ಸಾಮ್ಯುಯಲ್.

Vijaya Karnataka Web 11 Mar 2019, 5:36 pm
'ಬಾಹುಬಲಿ: ದಿ ಬಿಗಿನಿಂಗ್' ಹಾಗೂ 'ಬಾಹುಬಲಿ : ದಿ ಕನ್‌ಕ್ಲೂಷನ್' ಸಿನಿಮಾಗಳು ಬಾಕ್ಸ್ ಆಫೀಸಲ್ಲಿ ಅದ್ಭುತ ಯಶಸ್ಸು ಗಳಿಸಿದ್ದು ಗೊತ್ತೇ ಇದೆ. ಇದೀಗ ಬಾಹುಬಲಿ 3 ಸಿನಿಮಾವನ್ನು ಎಸ್ ಎಸ್ ರಾಜಮೌಳಿ ನಿರ್ದೇಶಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಹಾಲಿವುಡ್ ನಟ ಸಾಮ್ಯುಯಲ್ ಎಲ್ ಜಾಕ್ಸನ್ ಬಾಹುಬಲಿ 3 ಸಿನಿಮಾದಲ್ಲಿ ಅಭಿನಯಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
Vijaya Karnataka Web samuel


'ಕ್ಯಾಪ್ಟನ್ ಮಾರ್ವೆಲ್' ಸಿನಿಮಾದ ಪ್ರಚಾರಕ್ಕಾಗಿ ಸಾಮ್ಯುಯಲ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ಈಗಾಗಲೆ ಹಾಲಿವುಡ್‌ನ ಅವೆಂಜರ್ಸ್, ಪಲ್ಪ್ ಪಿಕ್ಷನ್, ಜಾಂಗೊ ಅನ್‍ಚೈನ್ಡ್ ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ 70 ವರ್ಷದ ಸಾಮ್ಯುಯಲ್.

ರಾಜಮೌಳಿ ಅವರ ಮುಂದಿನ ಬಾಹುಬಲಿ 3 ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಸಾಮ್ಯುಯಲ್. ಇವರು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಒಂದು ವೇಳೆ ನೀವು ಯಾವ ರೀತಿಯ ಭಾರತೀಯ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಬಯಸುತ್ತೀರ ಎಂಬ ಪ್ರಶ್ನೆಗೆ ಬಾಹುಬಲಿ 3 ಎಂದಿದ್ದಾರೆ ಸಾಮ್ಯುಯಲ್.

ಮಾರ್ಚ್ 8ರಂದು ಬಿಡುಗಡೆಯಾದ ಕ್ಯಾಪ್ಟನ್ ಮಾರ್ವೆಲ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೊಂದು ಕಡೆ ಎಸ್ ಎಸ್ ರಾಜಮೌಳಿ ಅವರು ಆರ್‌ಆರ್‌ಆರ್ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಪೌರಾಣಿಕ ಮಹಾಕಾವ್ಯ ರಾಮಾಯಣದ ಆಧಾರವಾಗಿ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದು, ಜ್ಯೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ತಾರಾಗಣದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌