ಆ್ಯಪ್ನಗರ

ನಿಖಿಲ್ ಎಲ್ಲಿದ್ದಿಯಪ್ಪಾ ಸಿನಿಮಾಗೆ ಶುಭವಾಗಲಿ: ರಾಕಿಂಗ್ ಸ್ಟಾರ್ ಯಶ್

ಮಂಡ್ಯ ಚುನಾವಣೆ ಫಲಿತಾಂಶದ ಕುರಿತು ಕೇಳಲಾದ ಪ್ರಶ್ನೆಗೆ ಯಶ್ "ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಸುಮಕ್ಕ ಗೆಲುವಿಗೆ ಒಳ್ಳೆ ವಾತಾವರಣ ಇದೆ. ಅವರು ಗೆದ್ದರೆ ಜನರಿಗಾಗಿ ಉತ್ತಮ ಕೆಲಸ ಮಾಡಲಿದ್ದಾರೆ" ಎಂದು ಯಶ್ ಹೇಳಿದ್ದಾರೆ.

Vijaya Karnataka Web 19 May 2019, 7:47 pm
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು 'ನಿಖಿಲ್ ಎಲ್ಲಿದ್ದಿಯಪ್ಪಾ' ಸಿನಿಮಾಗೆ ಶುಭವಾಗಲಿ" ಎಂದಿದ್ದಾರೆ. ಮಂಡ್ಯದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ನಟ ಯಶ್ ಈ ರೀತಿ ಉತ್ತರಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಅಭಿಮಾನಿಯೊಬ್ಬರ ಗೃಹಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಹೋಗಿದ್ದರು. ಇತ್ತೀಚೆಗೆ ಟ್ರೆಂಡ್ ಆಗಿರುವ 'ನಿಖಿಲ್ ಎಲ್ಲಿದೀಯಪ್ಪಾ' ಹೆಸರಿನ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಮಂಡ್ಯಕ್ಕೆ ಬಂದಾಗ ಈ ಪ್ರಶ್ನೆ-ಉತ್ತರಗಳ ಜುಗಲ್ಬಂದಿ ನಡೆದಿದೆ.
Vijaya Karnataka Web yash-2-1905


ಅಲ್ಲಿ ನಟ ಯಶ್ "ಸುಮಲತಾ ಪರ ನಾವು ಪ್ರಚಾರ ನಡೆಸಿದ್ದೇವೆ. ಮಂಡ್ಯ ಚುನಾವಣೆ ಮುಗಿದ ನಂತರ ನಾವು ಈ ಕಡೆ ತಲೆ ಹಾಕಿಲ್ಲ ಎಂಬ ಆರೋಪ ಸುಳ್ಳು. ಇಷ್ಟಕ್ಕೂ ನಾವೇನೂ ಇಲ್ಲಿನ ರಾಜಕೀಯ ಅಭ್ಯರ್ಥಿಯಲ್ಲ. ಸುಮಲತಾ ಅಂಬರೀಷ್ ಇಲ್ಲಿನ ಅಭ್ಯರ್ಥಿ. ಅವರ ಪರ ಪ್ರಚಾರಕ್ಕೆ ಬಂದವರು ನಾವು. ಹೀಗಾಗಿ ಅಭ್ಯರ್ಥಿ ಸುಮಲತಾ ಈ ಕ್ಷೇತ್ರದಲ್ಲಿರುವುದು ಮುಖ್ಯ. ಏನೇ ಆಗಲೀ ನಾನೂ ಸಹ ಮತದಾನ ಮುಗಿದ ನಂತರ ಮೂರು-ನಾಲ್ಕು ಬಾರಿ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಕಡೆ ತಲೆ ಹಾಕಲ್ಲ ಎಂಬ ಮಾತೆಲ್ಲ ಅಸಂಬದ್ಧ" ಎಂದಿದ್ದಾರೆ.

ಮಂಡ್ಯ ಚುನಾವಣೆ ಫಲಿತಾಂಶದ ಕುರಿತು ಕೇಳಲಾದ ಪ್ರಶ್ನೆಗೆ ಯಶ್ "ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಸುಮಕ್ಕ ಗೆಲುವಿಗೆ ಒಳ್ಳೆ ವಾತಾವರಣ ಇದೆ. ಅವರು ಗೆದ್ದರೆ ಜನರಿಗಾಗಿ ಉತ್ತಮ ಕೆಲಸ ಮಾಡಲಿದ್ದಾರೆ" ಎಂದು ಯಶ್ ಹೇಳಿದ್ದಾರೆ.

ಲೋಕಾಸಭೆ ಚುನಾವಣೆ ಸಮಯದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಡೆಸಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೆಡಿಎಸ್ ಹಲವು ರಾಜಕೀಯ ನಾಯಕರು 'ಜೋಡೆತ್ತು', 'ಕಳ್ಳೆತ್ತು' ಎಂದು ಟೀಕಿಸಿದ್ದರು. ಇದೀಗ ಅದೇ ಟೈಟಲ್‌ನಲ್ಲಿ ಸಿನಿಮಾ ತಯಾರಿಸಲು ಸಾಕಷ್ದಟು ನಿರ್ಮಾಪಕರು ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಆದರೆ, ಕೊನೆಗೆ ಒಂದು ಟೈಟಲ್ ಒಬ್ಬರಿಗೆ ಮಾತ್ರ ಸಿಗುವುದು ಎಂಬುದು ಎಲ್ಲರಿಗೂ ಗೊತ್ತು!

ಜೋಡೆತ್ತು ಹೆಸರಿನ ಸಿನಿಮಾದಲ್ಲಿ ನಟರಾದ ಯಶ್ ಮತ್ತು ದರ್ಶನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ನಟ ಯಶ್ "ನಾನು ಜೋಡೆತ್ತು ಶೀರ್ಷಿಕೆಯ ಚಿತ್ರದಲ್ಲಿ ನಟಿಸಲ್ಲ. ಇನ್ನು ದರ್ಶನ್‌ರಂಥ ದೊಡ್ಡ ಸ್ಟಾರ್ ನಟರೊಡನೆ ಸಿನಿಮಾ ಮಾಡಬೇಕಾದರೆ ಉತ್ತಮ ಕಥೆ ಸಿಕ್ಕಬೇಕು. ಒಳ್ಳೆ ಕಥೆ ಸಿಕ್ಕರೆ ನಾವಿಬ್ಬರೂ ಒಟ್ಟಾಗಿ ನಟಿಸಲು ಸಿದ್ಧ. ಆದರೆ ಟೈಟಲ್ ಏನು, ಎತ್ತ ಎನ್ನುವುದೆಲ್ಲ ಆಮೇಲಿನ ಮಾತು.." ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌