ಆ್ಯಪ್ನಗರ

ನನಗಿಂತಲೂ ಚಿಕ್ಕವನಾದರೂ ಸರಿ ಮದುವೆಯಾಗುತ್ತೇನೆ: ನಟಿ ರಾಕುಲ್

ಇದರ ಜತೆಗೆ ಬಾಲಿವುಡ್‌ನ ದೇ ದೇ ಪ್ಯಾರ್ ದೇ, ಶಿವಕಾರ್ತಿಕೇಯನ್ ಜತೆಗಿನ ಸಿನಿಮಾದಲ್ಲೂ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವೃತ್ತಿ ಬದುಕು, ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಇಷ್ಟವಾದ ವ್ಯಕ್ತಿ ಸಿಕ್ಕಿದರೆ ಕೂಡಲೆ ಪ್ರೀತಿಸಿ ಮದುವೆಯಾಗುತ್ತೇನೆ ಎಂದಿದ್ದಾರೆ.

Mumbai Mirror 9 May 2019, 3:40 pm
ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಮದುವೆ ಬಗ್ಗೆ, ತಾನು ವರಿಸುವ ಹುಡುಗನ ಬಗ್ಗೆ ಮುಂಬೈ ಮಿರರ್‌ಗೆ ನೀಡಿರುವ ಸಂದರ್ಶನದಲ್ಲಿ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕಾಲಿವುಡ್, ಟಾಲಿವುಡ್ ಚಿತ್ರಗಳಲ್ಲಿ ಮಿಂಚಿತ್ತಿರುವ ರಾಕುಲ್ ಪ್ರೀತ್ ಈಗ 'ಎನ್‍ಜಿಕೆ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸೂರ್ಯ ನಾಯಕ ನಟನಾಗಿರುವ ಈ ಸಿನಿಮಾ ಇದೇ ಮೇ. 31ಕ್ಕೆ ತೆರೆಗೆ ಬರುತ್ತಿದೆ.
Vijaya Karnataka Web rakul (1)


ಇದರ ಜತೆಗೆ ಬಾಲಿವುಡ್‌ನ ದೇ ದೇ ಪ್ಯಾರ್ ದೇ, ಶಿವಕಾರ್ತಿಕೇಯನ್ ಜತೆಗಿನ ಸಿನಿಮಾದಲ್ಲೂ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವೃತ್ತಿ ಬದುಕು, ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಇಷ್ಟವಾದ ವ್ಯಕ್ತಿ ಸಿಕ್ಕಿದರೆ ಕೂಡಲೆ ಪ್ರೀತಿಸಿ ಮದುವೆಯಾಗುತ್ತೇನೆ ಎಂದಿದ್ದಾರೆ.

ಬಾಳ ಸಂಗಾತಿ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಕುಲ್, "ಪ್ರೀತಿಗೆ ವಯಸ್ಸಿನೊಂದಿಗೆ ಸಂಬಂಧ ಇಲ್ಲ. ಮದುವೆಯಾಗುವ ಹುಡುಗ ವಯಸ್ಸಿನಲ್ಲಿ ಚಿಕ್ಕವ, ದೊಡ್ಡವ ಎಂಬುದನ್ನು ನೋಡಲ್ಲ. ಇಷ್ಟವಾದರೆ ಮದುವೆಯಾಗುತ್ತೇನೆ" ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ರಾಕುಲ್ ಪ್ರೀತ್ ಸಿಂಗ್ ತಾನು ಮದುವೆಯಾಗುವವ ಆರು ಅಡಿ ಎತ್ತರ ಇರಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಆರು ಅಡಿ ಉದ್ದದ ಟಾಲಿವುಡ್ ನಟನೊಬ್ಬನ ಜತೆ ಡೇಟಿಂಗ್‍ನಲ್ಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಈ ಬಗ್ಗೆ ರಾಕುಲ್ ಪ್ರೀತ್ ಸಿಂಗ್ ಪ್ರತಿಕ್ರಿಯಿಸಲು ಹೋಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌