ಆ್ಯಪ್ನಗರ

ಕೆಜಿಎಫ್ ಮತ್ತು ಕುರುಕ್ಷೇತ್ರ ಚಿತ್ರಗಳ ದಾಖಲೆ ಮುರೀತಾನಾ 'ಪೈಲ್ವಾನ್'?

ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮೊದ್ಲಾ ದಿನವೇ ಭರ್ಜರಿ ಸೌಂಡ್ ಮಾಡಿದೆ. ಕೆಜಿಎಫ್ ಹಾಗೂ ಕುರುಕ್ಷೇತ್ರ ಸಿನಿಮಾಗಳಿಗೆ ಹೋಲಿಸಿದರೆ ಮೊದಲ ದಿನದ ಗಳಿಕೆ ಸ್ವಲ್ಪ ಕಡಿಮೆ ಎನ್ನಬಹುದು.

Vijaya Karnataka Web 13 Sep 2019, 7:00 pm

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕೆಜಿಎಫ್ ಹಾಗೂ ಕುರುಕ್ಷೇತ್ರ ಚಿತ್ರದಂತೆಯೇ ಹಲವಾರು ಭಾಷೆಗಳಲ್ಲಿ ತೆರೆಕಂಡಿದೆ. ಕಲೆಕ್ಷನ್ ದೃಷ್ಟಿಯಿಂದ ನೋಡಿದರೂ ಪೈಲ್ವಾನ್ ಮೊದಲ ದಿನವೇ ಸದ್ದು ಮಾಡಿದ್ದಾನೆ. ಆದರೆ ಮುಂದಿನ ದಿನಗಳಲ್ಲಿ ಈ ಎರಡೂ ಸಿನಿಮಾಗಳ ದಾಖಲೆ ಮುರೀತಾನಾ ಪೈಲ್ವಾನ್ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
Vijaya Karnataka Web pailwaan-collection


ಇದಕ್ಕೆ ಉತ್ತರ ಸಿಗಬೇಕಾದರೆ ಕೆಜಿಎಫ್ ಹಾಗೂ ಕುರುಕ್ಷೇತ್ರ ಚಿತ್ರಗಳ ಮೊದಲ ದಿನದ ಕಲೆಕ್ಷನ್ ನೋಡಬೇಕು. ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಪೈಲ್ವಾನ್ ಸಿನಿಮಾ ಸಹ ಒಂದು. ದೇಸಿ ಕ್ರೀಡೆ ಕುರಿತಾದ ಈ ಸಿನಿಮಾವನ್ನು ಸುಮಾರು ₹ 45 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಬಹುತೇಕ ಚಿತ್ರಮಂದಿರಗಳು ಹೌಸ್‍ಫುಲ್ ಆಗಿವೆ. ಮುಂದಿನ ದಿನಗಳಲ್ಲಿ ಕೆಜಿಎಫ್ ಮತ್ತು ಕುರುಕ್ಷೇತ್ರ ಚಿತ್ರಗಳ ದಾಖಲೆ ಮುರಿಯುತ್ತಾ ಎಂಬ ಚರ್ಚೆ ಶುರುವಾಗಿದೆ.

ದೇಸಿತನ ಮೆರೆದು, ಮೆರೆಸುವ ಅಪ್ಪಟ ಸಿನಿಮಾ: ಪೈಲ್ವಾನ್ ಚಿತ್ರ ವಿಮರ್ಶೆ

ಡಿಸೆಂಬರ್ 2018ರಲ್ಲಿ ರಿಲೀಸ್ ಆದ ಕೆಜಿಎಫ್: ಚಾಪ್ಟರ್ 1 ಸಿನಿಮಾ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಸದ್ದು ಮಾಡಿತು. ಬಿಡುಗಡೆಯಾದ ಮೊದಲ ದಿನವೇ ರಾಜ್ಯದಲ್ಲಿ ಸುಮಾರು ₹ 12.5 ಕೋಟಿ ಬಾಚಿತು.

ಇನ್ನು ಕುರುಕ್ಷೇತ್ರ ಚಿತ್ರದ ಮೊದಲ ದಿನದ ಕಲೆಕ್ಷನ್ ನೋಡುವುದಾದರೆ, ಈ ಚಿತ್ರಕ್ಕೆ ದರ್ಶನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಿನಿಮಾದ ಟ್ರೇಲರ್ ಬಗ್ಗೆ ಅದ್ಭುತ ಮಾತುಗಳು ಕೇಳಿಬರದಿದ್ದರೂ ದರ್ಶನ್‍ರ 50ನೇ ಸಿನಿಮಾ ಮೊದಲ ದಿನವೇ ಅಂದಾಜು ₹ 13 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು. 'ಪೈಲ್ವಾನ್' ಸಿನಿಮಾ ನೋಡಿ ಸಲ್ಮಾನ್ ಖಾನ್ ಹೇಳಿದ್ದೇನು? ಕಿಚ್ಚ ಕೊಟ್ಟ ಪ್ರತ್ಯುತ್ತರವೇನು?

ವಿಶೇಷ ಎಂದರೆ ಶಿವರಾಜ್ ಕುಮಾರ್ ಹಾಗೂ ಸುದೀಪ್ ತಾರಾಗಣದ ದಿ ವಿಲನ್ ಸಿನಿಮಾ ಸಹ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡಿತು. ಮೂಲಗಳ ಪ್ರಕಾರ ದಿ ವಿಲನ್ ಸಿನಿಮಾ ಮೊದಲ ದಿನ ಸಾಗರೋತ್ತರದ ಗಳಿಕೆ ಸೇರಿ ಅಂದಾಜು ₹ 20 ಕೋಟಿ ಕಲೆಕ್ಷನ್ ಮಾಡಿದೆ.

ಪೈಲ್ವಾನ್ ಸಿನಿಮಾದ ಕಂಟೆಂಟ್ ಉಳಿದ ಕಮರ್ಷಿಯಲ್ ಸಿನಿಮಾಗಳಿಂದ ಭಿನ್ನವಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಕೆಜಿಎಫ್ ಮತ್ತು ಕುರುಕ್ಷೇತ್ರ ಚಿತ್ರಗಳ ಕಲೆಕ್ಷನ್‌ಗೆ ಹಾಗೂ ಸುದೀಪ್‍ರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಸ್ವಲ್ಪ ನಿರಾಸೆಯಾಗುತ್ತದೆ. ಮೂಲಗಳ ಪ್ರಕಾರ ಪೈಲ್ವಾನ್ ಮೊದಲ ದಿನದ ಗಳಿಕೆ ಅಂದಾಜು ₹ 10 ಕೋಟಿಯಷ್ಟಿದೆ. ಮುಂದಿನ ದಿನಗಳಲ್ಲಿ ಪೈಲ್ವಾನ್ ಹವಾ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌