ಆ್ಯಪ್ನಗರ

'ಇಸ್ಮಾರ್ಟ್ ಶಂಕರ್' ನಿರ್ಮಾಪಕಿ ಚಾರ್ಮಿ ಕೌರ್ ಪೊಲೀಸರಿಗೆ ದೂರು

ಈ ಸಿನಿಮಾಗೆ ಸಂಬಂಧಿಸಿದ ಸಂಪೂರ್ಣ ಸ್ಕ್ರಿಪ್ಟನ್ನು ಮುರಳಿ ಕೃಷ್ಣ ಎಂಬ ವ್ಯಕ್ತಿ ಬಜ್ ಬಾಸ್ಕೆಟ್ ಎಂಬ ಇನ್‍ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಕ್ರಿಪ್ಟನ್ನು ಇನ್‍ಸ್ಟಾಗ್ರಾಮ್‌ನಿಂದ ತೊಲಗಿಸಲು ಭಾರಿ ಮೊತ್ತಕ್ಕೆ ಬೇಡಿಕೆ ಇಡಲಾಗಿತ್ತು.

Vijaya Karnataka Web 8 Jun 2019, 3:05 pm
ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ಇಸ್ಮಾರ್ಟ್ ಶಂಕರ್. ಇದೀಗ ಈ ಚಿತ್ರ ಕೊನೆಯ ಹಂತ ತಲುಪಿದ್ದು ಇನ್ನೇನು ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಚಿತ್ರತಂಡಕ್ಕೆ ಭಾರಿ ಆಘಾತ ಬಂದಪ್ಪಳಿಸಿದೆ.
Vijaya Karnataka Web ismart


ಈ ಸಿನಿಮಾಗೆ ಸಂಬಂಧಿಸಿದ ಸಂಪೂರ್ಣ ಸ್ಕ್ರಿಪ್ಟನ್ನು ಮುರಳಿ ಕೃಷ್ಣ ಎಂಬ ವ್ಯಕ್ತಿ ಬಜ್ ಬಾಸ್ಕೆಟ್ ಎಂಬ ಇನ್‍ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಕ್ರಿಪ್ಟನ್ನು ಇನ್‍ಸ್ಟಾಗ್ರಾಮ್‌ನಿಂದ ತೊಲಗಿಸಲು ಭಾರಿ ಮೊತ್ತಕ್ಕೆ ಬೇಡಿಕೆ ಇಡಲಾಗಿತ್ತು. ಇದೀಗ ಚಿತ್ರ ನಿರ್ಮಾಣ ಸಂಸ್ಥೆಗಳಾದ ಪುರಿ ಜಗನ್ನಾಥ್ ಪ್ರೊಡಕ್ಷನ್ಸ್, ಪೂರಿ ಕನೆಕ್ಟ್ಸ್ ಪರವಾಗಿ ನಿರ್ಮಾಪಕಿ ಚಾರ್ಮಿ ಕೌರ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ರಾಮ್‌ಗೆ ನಾಯಕಿಯರಾಗಿ ನಿಧಿ ಅಗರ್ವಾಲ್, ನಭಾ ನಟೇಶ್ ನಟಿಸಿದ್ದಾರೆ. ಈ ಚಿತ್ರವನ್ನು ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದ ಧಿಮಾಕ್ ಖರಾಬ್ ಎಂಬ ಹಾಡು ಈಗಾಗಲೆ ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌