ಆ್ಯಪ್ನಗರ

ಮಂಗಳೂರಿನಲ್ಲಿ ತೆರೆ ಕಾಣಲು ಸಜ್ಜಾದ ಕೊಂಕಣಿ ಸಿನಿಮಾ 'ಕಾಂತಾರ್'

ಸೋಫಿಯಾ- ಎ ಡ್ರೀಮ್ ಗರ್ಲ್ ಎಂಬ ಸಿನಿಮಾಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ಮಾಕರಾದ ಜನೆತ್ ನರೋನ್ಹಾ ಅವರು ಈ 'ಕಂಟಾರ್' ಸಿನಿಮಾವನ್ನು ನಿರ್ಮಿಸಿದ್ದಾರೆ. ನೀಲೇಶ್ ಮಾಲ್ಕಾರ್ ನಿರ್ದೇಶನದ 'ಕಾಂತಾರ್' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಕಮಾಲ್ ಮಾಡಿದೆ.

Vijaya Karnataka Web 27 Jun 2019, 8:12 pm
ಗೋವಾದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಕಾಂತಾರ್' ಸಿನಿಮಾ ಆಗಸ್ಟ್‌ ತಿಂಗಳಲ್ಲಿ (ಆಗಸ್ಟ್ 9, 2019) ರಂದು ಕೋಸ್ಟಲ್ ಏರಿಯಾ ಮಂಗಳೂರು ಮತ್ತು ಉಡುಪಿ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ಎಸ್ತರ್ ನರೋನ್ಹಾ ಮತ್ತು ಬಾಲಿವುಡ್ ನಟ ಜಾಕಿ ಶ್ರಾಫ್ ಮುಖ್ಯ ಭೂಮಿಕೆಯ ಈ ವರ್ಷದ ಸೂಪರ್ ಹಿಟ್ ಕೊಂಕಣಿ ಸಿನಿಮಾ ಆಗಿ ದಾಖಲಾಗಿರುವ ಕಾಂತಾರ್, ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡದ ಉಡುಪಿ ಮತ್ತು ಮಂಗಳೂರು ಸ್ಕ್ರೀನ್‌ಗಳಲ್ಲಿ ಮಿಂಚಲಿರುವ ಸುದ್ದಿ ಕೊಂಕಣಿ ಸಿನಿಪ್ರೇಕ್ಷಕರನ್ನು ಖುಷಿಯಾಗಿಸಿದೆ.
Vijaya Karnataka Web jakie2706


ಸೋಫಿಯಾ- ಎ ಡ್ರೀಮ್ ಗರ್ಲ್ ಎಂಬ ಸಿನಿಮಾಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ಮಾಕರಾದ ಜನೆತ್ ನರೋನ್ಹಾ ಅವರು ಈ 'ಕಾಂತಾರ್' ಸಿನಿಮಾವನ್ನು ನಿರ್ಮಿಸಿದ್ದಾರೆ. ನೀಲೇಶ್ ಮಾಲ್ಕಾರ್ ನಿರ್ದೇಶನದ 'ಕಾಂತಾರ್' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಟ್ರೇಲರ್ ಕೊಂಕಣಿ ಪ್ರೇಕ್ಷಕರನ್ನು ಮಂತ್ರಮುಗ್ಧ ಗೊಳಿಸಿ ಮತ್ತೆ ಮತ್ತೆ ನೋಡುವಂತೆ ಮಾಡಿದೆ. ಟ್ರೇಲರ್ ನೋಡಿರುವ ಸಿನಿಪ್ರೇಕ್ಷಕರು ಈ ಚಿತ್ರವನ್ನು ನೋಡಲು ಕಾತರದಿಂದ ಕಾಯುವಂತಾಗಿದೆ.

ಹಳೆಯ ಕಾಲದ ಜೋರ್ಡಾನ್ ವ್ಯಕ್ತಿಯೊಬ್ಬರ ಮೂಲಕ, ಸುಂದರ ಬದುಕನ್ನು ಬದುಕುವ ಸತ್ಯ ಮತ್ತು ರಹಸ್ಯಗಳನ್ನು ಕಂಡುಕೊಂಡ ಏಂಜಲಿಕಾ ಹೆಸರಿನ ತರುಣಿಯೊಬ್ಬಳ ಜೀವನದ ಮ್ಯೂಸಿಕಲ್ ಜರ್ನಿಯ ಕಥೆಯೇ 'ಕಾಂತಾರ್' ಸಿನಿಮಾದ ಕಥಾವಸ್ತು ಎನ್ನಲಾಗಿದೆ. ಬದುಕನ್ನು ಚೆಂದವಾಗಿ ಬದುಕಿ ಸಾರ್ಥಕಗೊಳಿಸಿಕೊಳ್ಳಲು ಬೇಕಾದ ನಂಬಿಕೆ, ಶ್ರದ್ಧೆ ಮತ್ತು ಸವಾಲನ್ನು ಎದುರಿಸಿ ಜೀವನವನ್ನು ಗೆಲ್ಲಬಲ್ಲ ಟಾನಿಕ್ ಎಂಬಂಥ ಸಿನಿಮಾ ಇದಾಗಿದೆ.

ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಮುಂದೊಂದು ದಿನ ಎಲ್ಲವೂ ಕಳೆದುಹೋಗುತ್ತವೆ. ಕೇವಲ ನಮ್ಮ ಮನಸ್ಸಿಗೆ ಒತ್ತಡ ತರುವಂಥ ಸಂಗತಿಯನ್ನು ಮಾತ್ರ ನಾವು ನಮ್ಮ ಸುತ್ತಲೂ ನಿರ್ಮಿಸಿಕೊಂಡಿದ್ದು, ಆ ಮೂಲಕ ನಾವು ಅನಾವಶ್ಯಕವಾಗಿ ಜೀವನದಲ್ಲಿ ನೋವು ತಂದುಕೊಳ್ಳುತ್ತೇವೆ ಎಂಬ ಸಂಗತಿ ಸಿನಿಮಾದಲ್ಲಿ ಮುಖ್ಯವಾಗಿದೆ.

ನಮ್ಮ ಜೀವನಕ್ಕಿಂತ ಯಾವ ನೋವು ಅಥವಾ ಕಷ್ಟಗಳು ಸಹ ಹೆಚ್ಚಿನದೇನೂ ಅಲ್ಲ ಎಂಬ ತತ್ವ ಸಿನಿಮಾದಲ್ಲಿ ಅಡಕವಾಗಿದೆ ಎನ್ನಲಾಗಿದೆ. ನಮ್ಮ ಉದ್ಯೋಗ, ಆಸ್ತಿ, ನಮ್ಮ ಸಮಸ್ಯೆಗಳನ್ನು ನಾವು ನಮ್ಮ ಜೀವನಕ್ಕಿಂತ ದೊಡ್ಡದು ಮಾಡಿಕೊಂಡಿದ್ದೇವೆ, ಅದು ಶುದ್ಧ ತಪ್ಪು ಎಂಬ ಸಂದೇಶ 'ಕಾಂತಾರ್' ಸಿನಿಮಾದಲ್ಲಿ ರವಾನೆಯಾಗಿದೆ.

ಟೊರಾಂಟೋ, ವಾಂಕೋವರ್, ಯಕೆ, ದುಬೈ ಮತ್ತು ಮುಂತಾದ ಕಡೆಗಳಲ್ಲಿ 'ಕಾಂತಾರ್' ಸಿನಿಮಾ ರಿಲೀಸ್ ಆಗಲಿದ್ದು, ಬಿಡುಗಡೆ ದಿನಾಂಕ ಫಿಕ್ಸ್ ಆಗಬೇಕಿದೆ. ಈಗಾಗಲೇ ಗೋವಾದಲ್ಲಿ ಪ್ರದರ್ಶನ ಕಂಡು ಭಾರೀ ಪ್ರಶಂಸೆ ಗಳಿಸಿರುವ ಕಾಂತಾರ್, ಇನ್ನೇನು ಕೆಲವೇ ದಿನಗಳಲ್ಲಿ ಉಡುಪಿ-ಮಂಗಳೂರು ಥಿಯೇಟರ್‌ಗಳಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ.

ಎಸ್ತರ್ ನರೋನಾ ಮತ್ತು ಬಾಲಿವುಡ್ ಸ್ಟಾರ್ ನಟ ಜಾಕಿ ಶ್ರಾಫ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಕೊಂಕಣಿ ಕೋಗಿಲೆ ಖ್ಯಾತಿಯ ಗಾಯಕಿ 'ಲೊರ್ನಾ' ಮೊದಲ ಬಾರಿಗೆ ನಟನೆ ಹಾಗೂ ಹಿನ್ನೆಲೆ ಗಾಯನದ ಮೂಲಕ ಈ ಚಿತ್ರದಲ್ಲಿ ಭಾಗಿಯಾಗಿದ್ದಾರೆ. ನಟ ನಿಯಾಲ್ ಸಿಯಾನ್ ಸಹ ಈ 'ಕಾಂತಾರ್' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌