ಆ್ಯಪ್ನಗರ

ಟ್ವಿಟರ್‌ನಲ್ಲಿ ನವರಸನಾಯಕ ಜಗ್ಗೇಶ್ 'ಗರಂ' ಆಗಿದ್ಯಾಕೆ?

ನವರಸನಾಯಕ ಜಗ್ಗೇಶ್ ರಸ್ತೆಯಲ್ಲಿ ಆಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡದ ಜನರ ಬಗ್ಗೆ ಕೋಪಗೊಂಡಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾ ಟ್ವಿಟರ್‌ ಪೇಜ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Vijaya Karnataka Web 2 Feb 2019, 1:01 pm
ನವರಸನಾಯಕ ಜಗ್ಗೇಶ್ ಮತ್ತೊಮ್ಮೆ 'ಗರಂ' ಆಗಿದ್ದಾರೆ. ರಸ್ತೆ ಮಧ್ಯೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಜೀವಿಗಳನ್ನು ಹೊತ್ತ ಆಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡದ ನಾಗರೀಕರ ವಿರುದ್ಧ ಜಗ್ಗೇಶ್ ಸೋಷಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದ್ದಾರೆ. ಕನ್ನಡದ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ಕನ್ನಡದ ನಟರಲ್ಲಿ ಒಬ್ಬರು. ಈ ಬಾರಿ ಅವರು ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
Vijaya Karnataka Web jaggesh02


ವಿದ್ಯಾವಂತರು, ಬುದ್ಧಿವಂತರು ಹಾಗೂ ಪ್ರಜ್ಞಾವಂತರೆಂಬ ಹಣೆಪಟ್ಟಿ ಹೊತ್ತ ಎಷ್ಟೋ ಜನರು ರಸ್ತೆಗಳಲ್ಲಿ ಮಾನವೀಯತೆಯನ್ನು ಮರೆತು ವರ್ತಿಸುತ್ತಾರೆ ಎಂಬುದು ಜಗ್ಗೇಶ್ ಅವರ ವೇದನೆಗೆ ಕಾರಣ. ಈ ಬಗ್ಗೆ ನೊಂದ ಜಗ್ಗೇಶ್
"ಹೃದಯದ ಆಸ್ಪತ್ರೆಯ ಆಂಬ್ಯುಲೆನ್ಸ್ ಗು ದಾರಿ ಬಿಡದ ಪ್ರಙ್ನಾವಂತರು!ವಿಧ್ಯಾವಂತರು!
ಅಂಬುಲೆನ್ಸ್ ಗೆ ಪ್ರತ್ಯೇಕ ರಸ್ತೆ ಮಾಡದ ಜಡವಿಡಿದ ರಾಜರುಗಳು!
ಜೈ ಭಾರತಾಂಬೆ ಸಂಜಾತರೆ.."
ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿರುವ ಆಂಬುಲೆನ್ಸ್‌ಗಳಲ್ಲಿ ರೋಗಿಗಳು ಇರುತ್ತಾರೆ. ಅದರಲ್ಲೂ ಅವರ ಕಂಡಿಶನ್ಸ್ ತುಂಬಾ ಕ್ರಿಟಿಕಲ್ ಆಗಿರುತ್ತವೆ. ಅದು ಯಾರಿಗೂ ಗೊತ್ತಿಲ್ಲದ ಹೊಸ ವಿಷಯವೇನೂ ಅಲ್ಲ. ಆದರೆ, ಅದನ್ನು ಆ ಕ್ಷಣಕ್ಕೆ ಬಹಳಷ್ಟು ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಇತ್ತೀಚಿಗಂತೂ ತಮಗೂ ಜಗತ್ತಿಗೂ ಸಂಬಂಧವೇ ಇಲ್ಲ ಎನ್ನುವಂತೆ ತುಂಬಾ ಜನರು ವರ್ತಿಸುತ್ತಿದ್ದಾರೆ. ಇದು ಜಗ್ಗೇಶ್ ಅವರನ್ನು ಕೆರಳಿಸಿದೆ ಎನ್ನಬಹುದು.

ಹೀಗಾಗಿ ಜಗ್ಗೇಶ್ ನೋವಿನಿಂದ ಹಾಗೆ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಕಾಳಜಿಗೆ ಸೋಷಿಯಲ್ ಮೀಡಿಯಾ ಟ್ವೀಟರ್‌ನಲ್ಲಿ ಸಾಕಷ್ಟು ಜನರು ಬೆಂಬಲ ಸೂಚಿಸಿ 'ಜೈ'ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌