ಆ್ಯಪ್ನಗರ

ಯುಗಾದಿಗೆ ಜಾಗ್ವಾರ್ ಹೊಸ ಲುಕ್‌

ರಾಜಮೌಳಿ ಶಿಷ್ಯ ಮಹದೇವ್‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಜಾಗ್ವಾರ್‌’ ಮೋಷನ್‌ ಪೋಸ್ಟರ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹೀರೋ ನಿಖಿಲ್‌ಕುಮಾರ್‌ ಅವರಿಗೆ ಚಿತ್ರದಲ್ಲಿ ಎಂತಹ ಲುಕ್‌ ಇರುತ್ತದೆ ಎನ್ನುವುದು ಇದರಲ್ಲಿ ಗೊತ್ತಾಗಲಿದೆ.

Vijaya Karnataka Web 7 Apr 2016, 4:40 am
ರಾಜಮೌಳಿ ಶಿಷ್ಯ ಮಹದೇವ್‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಜಾಗ್ವಾರ್‌’ ಮೋಷನ್‌ ಪೋಸ್ಟರ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹೀರೋ ನಿಖಿಲ್‌ಕುಮಾರ್‌ ಅವರಿಗೆ ಚಿತ್ರದಲ್ಲಿ ಎಂತಹ ಲುಕ್‌ ಇರುತ್ತದೆ ಎನ್ನುವುದು ಇದರಲ್ಲಿ ಗೊತ್ತಾಗಲಿದೆ. ನಿಖಿಲ್‌ ಚೊಚ್ಚಲ ಚಿತ್ರ ‘ಜಾಗ್ವಾರ್‌’ಗೆ ಮೈಸೂರಿನಲ್ಲಿ ಭರದಿಂದ ಚಿತ್ರೀಕರಣ ನಡೆದಿದ್ದು, ಫೈಟ್‌ ಸನ್ನಿವೇಶವೊಂದಕ್ಕಾಗಿ ಭಾರಿ ಬಜೆಟ್‌ನಲ್ಲಿ ಸೆಟ್‌ ಹಾಕಲಾಗಿದೆಯಂತೆ.
Vijaya Karnataka Web jaguar new look ugadi
ಯುಗಾದಿಗೆ ಜಾಗ್ವಾರ್ ಹೊಸ ಲುಕ್‌


ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿರುವ ನಿಖಿಲ್‌ರ ಲುಕ್‌ ಕೂಡ ಡಿಫರೆಂಟ್‌ ಆಗಿರಲಿದೆ ಎನ್ನುತ್ತದೆ ಚಿತ್ರತಂಡ. ಈ ಪೋಸ್ಟರ್‌ ಯುಗಾದಿ ಸ್ಪೆಷಲ್‌ ಎಂದಿದ್ದಾರೆ ನಿಖಿಲ್‌. ಚಿತ್ರದಲ್ಲಿ ನಿಖಿಲ್‌ಗೆ ಮೆಡಿಕಲ್‌ ಸ್ಟೂಡೆಂಟ್‌ ಪಾತ್ರವಿದೆ. ಆದರೆ, ಇನ್ನೊಂದು ಶೇಡ್‌ ಏನು ಎನ್ನುವುದನ್ನು ಗುಟ್ಟಾಗಿಡಲಾಗಿದೆ. ‘ಇದು ಯಾರೂ ಊಹಿಸಿರದ ಮತ್ತು ಗುರುತಿಸಲಾಗದ ಗೆಟಪ್‌. ಈ ದೃಶ್ಯಗಳ ಚಿತ್ರೀಕರಣ ಪ್ರಾರಂಭವಾಗಲಿದೆ. ಬೇರೆಯವರು ಲೀಕ್‌ ಮಾಡುವ ಮೊದಲು ನಾವೇ ಹೊಸ ಗೆಟಪ್‌ ಪೋಸ್ಟರ್‌ ರಿಲೀಸ್‌ ಮಾಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ ನಿಖಿಲ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌