ಆ್ಯಪ್ನಗರ

ಸಾಹಸಸಿಂಹನಿಗೆ 'ಪಡ್ಡೆ ಹುಲಿ' ಶ್ರೇಯಸ್ ಗೌರವಾರ್ಪಣೆ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ತಮ್ಮ ಮೊದಲ ಚಿತ್ರ 'ಪಡ್ಡೆ ಹುಲಿ'ಯ 'ಇಂಟ್ರೊಡಕ್ಷನ್ ಸಾಂಗ್' ಮೂಲಕ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಕೆ ಮಂಜು ಅವರು ವಿಷ್ಣುವರ್ಧನ್ ಅವರನ್ನು ತಮ್ಮ 'ಗುರು' ಎಂದು ಗೌರವಿಸುತ್ತಾರೆ. ಗುರು ದೇಶಪಾಂಡೆ 'ಪಡ್ಡೆಹುಲಿ' ಚಿತ್ರದ ನಿರ್ದೇಶಕರು.

TIMESOFINDIA.COM 3 Feb 2019, 12:41 pm
ನಿರ್ಮಾಪಕ ಕೆ ಮಂಜು ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ತುಂಬಾ ಗೌರವಿಸುತ್ತಾರೆ ಎಂಬುದು ಕನ್ನಡನಾಡಿಗೆ ಗೊತ್ತಿರುವ ವಿಷಯ. ಸಾಹಸಸಿಂಹ ವಿಷ್ಣುವರ್ಧನ್ ಅವರ ಫ್ಯಾನ್ ಆಗಿರುವ ಕೆ ಮಂಜು ಅವರು ವಿಷ್ಣುವರ್ಧನ್ ತಮ್ಮ 'ಗುರು' ಎಂದೇ ಹೇಳುತ್ತಾರೆ. ಬಹಳಷ್ಟು ಬಾರಿ ಮಂಜು ವಿಷ್ಣು ಮೇಲಿನ ತಮ್ಮ ಗೌರವವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಂಥ ಮಂಜು ಮಗ ಶ್ರೇಯಸ್ ಇಂದು 'ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಶ್ರೇಯಸ್‌ಗೆ ಇದು ಮೊದಲ ಚಿತ್ರವಾಗಿದೆ.
Vijaya Karnataka Web shreyas03


ಶ್ರೇಯಸ್ ಅಪ್ಪ ಕೆ ಮಂಜು ವಿಷ್ಣು ಅವರ ಅಭಿಮಾನಿಯಾಗಿರುವ ಕಾರಣಕ್ಕೆ ಸಹಜವಾಗಿಯೇ ಶ್ರೇಯಸ್ ಕೂಡ ವಿಷ್ಣುವರ್ಧನ್ ಬಗ್ಗೆ ಗೌರವಾದರ ಹೊಂದಿದ್ದಾರೆ. ಹೀಗಾಗಿ ಶ್ರೇಯಸ್ ತಮ್ಮ ಚೊಚ್ಚಲು ಚಿತ್ರದಲ್ಲಿ ದಿವಂಗತ ವಿಷ್ಣುವರ್ಧನ್ ಅವರಿಗೆ 'ಗೌರವ' ಸಲ್ಲಿಸಲಿದ್ದಾರೆ. ಗುರು ದೇಶಪಾಂಡೆ ನಿರ್ದೇಶನದಲ್ಲಿ ಪಡ್ಡೆ ಹುಲಿ ಚಿತ್ರದ ನಾಯಕರಾಗಿರುವ ಶ್ರೇಯಸ್ ತಮ್ಮ 'ಇಂಟ್ರೊಡಕ್ಷನ್ ಸಾಂಗ್‌'ಅನ್ನು ನಟ ವಿಷ್ಣು ಅವರಿಗೆ ಅರ್ಪಿಸಲಿದ್ದಾರೆ. ಕನ್ನಡ, ಕರ್ನಾಟಕಕ್ಕೆ ಕಲಾತ್ಮಕ ಹಾಗೂ ಭಾವನಾತ್ಮಕವಾಗಿ ಸಂಬಂಧಪಟ್ಟ ಹಾಗೂ ವಿಷ್ಣುವರ್ಧನ್ ಅವರನ್ನೂ ನೆನಪಿಸುವ 'ಚಿತ್ರದುರ್ಗ'ದಲ್ಲಿ ಈ ಹಾಡನ್ನು ಶೂಟ್ ಮಾಡಲು ನಿರ್ಧರಿಸಲಾಗಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕರು ಬಹಿರಂಗ ಪಡಿಸಿದ್ದಾರೆ.

ಪಡ್ಡೆಹುಲಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಹಾಡಿನ ಟ್ಯೂನ್ ಮಾಡಿದ್ದು ಸಾಹಿತಿ ವಿ ನಾಗೇಂದ್ರ ಪ್ರಸಾದ್ ಚಿತ್ರತಂಡದ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತು ಸನ್ನಿವೇಶ ಹಾಗೂ ಟ್ಯೂನ್‌ಗೆ ಸೂಕ್ತ ಹಾಡನ್ನು ಬರೆದಿದ್ದಾರೆ. ಅದು ಇಂದಿನ ಜನರೇಷನ್ ಪ್ರೇಕ್ಷಕರು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು, ಹಾಗೂ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್‌ ಮೂಲಕ ನಾಳೆ ಸೋಮವಾರ, 03 ಫೆಬ್ರವರಿ 2019ರಂದು 'ಆನ್‌ಲೈನ್ ಲಾಂಚ್' ಮಾಡಲಾಗುತ್ತದೆ ಎಂದು 'ಪಡ್ಡೆಹುಲಿ' ಚಿತ್ರತಂಡ ಬಹಿರಂಗ ಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌