ಆ್ಯಪ್ನಗರ

ಇಮಲಿಯಿಂದ ಹೊರಬಿದ್ದ ಕಂಗನಾ

ಅನುರಾಗ್‌ ಬಸು ನಿರ್ದೇಶನದ ಇಮಲಿ ಎಂಬ ಚಿತ್ರದಿಂದ ಕಂಗನಾ ರಣಾವತ್‌ ಹೊರಬಿದ್ದಿದ್ದಾರೆ. ಕಂಗನಾ ಡೇಟ್ಸ್‌ ಇಲ್ಲದಿರುವುದು ಇದಕ್ಕೆ ಕಾರಣ. ಈ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕಳೆದ ವರ್ಷವೇ ಪ್ರಕಟಿಸಲಾಗಿತ್ತು.

Vijaya Karnataka 4 Apr 2019, 5:00 am
ಅನುರಾಗ್‌ ಬಸು ನಿರ್ದೇಶನದ ಇಮಲಿ ಎಂಬ ಚಿತ್ರದಿಂದ ಕಂಗನಾ ರಣಾವತ್‌ ಹೊರಬಿದ್ದಿದ್ದಾರೆ. ಕಂಗನಾ ಡೇಟ್ಸ್‌ ಇಲ್ಲದಿರುವುದು ಇದಕ್ಕೆ ಕಾರಣ. ಈ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕಳೆದ ವರ್ಷವೇ ಪ್ರಕಟಿಸಲಾಗಿತ್ತು.
Vijaya Karnataka Web Kangana


ಕಂಗನಾ ರಣಾವತ್‌ ನಟನೆಯ ಮಣಿಕರ್ಣಿಕಾ ಚಿತ್ರದಿಂದಾಗಿ ಕಳೆದ ವರ್ಷ ಇಮಲಿ ಚಿತ್ರೀಕರಣವನ್ನು ಮುಂದಕ್ಕೆ ಹಾಕಲಾಗಿತ್ತು. ಮಣಿಕರ್ಣಿಕಾ ಚಿತ್ರದ ಕೆಲವು ಭಾಗಗಳನ್ನು ಕಂಗನಾ ರೀಶೂಟ್‌ ಮಾಡಲು ನಿರ್ಧರಿಸಿದ್ದರಿಂದ ಮತ್ತು ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದರಿಂದ ಇಮಲಿ ಚಿತ್ರದ ಡೇಟ್ಸ್‌ ಕ್ಯಾನ್ಸಲ್‌ ಮಾಡಿದ್ದರು. ಮಣಿಕರ್ಣಿಕಾ ಚಿತ್ರ ರಿಲೀಸ್‌ ಆದ ನಂತರ ಪಂಗಾ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಹಾಗಾಗಿ ಇಮಲಿಗೆ ಡೇಟ್ಸ್‌ ಇಲ್ಲ ಎನ್ನಲಾಗಿದೆ. 'ಈ ಬಗ್ಗೆ ಈಗಾಗಲೇ ನಾನು ಅನುರಾಗ್‌ ಮಾತನಾಡಿದ್ದೇವೆ. ನನ್ನನ್ನು ಬಾಲಿವುಡ್‌ಗೆ ಪರಿಚಯಿಸಿದ ಅನುರಾಗ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದು ತುಂಬಾ ಬೇಸರದ ಸಂಗತಿ. ನನ್ನ ಸ್ವಂತ ಸಿನಿಮಾವೊಂದನ್ನೂ ಕೆಲವು ವಾರಗಳಲ್ಲಿ ಪ್ರಕಟಿಸಬೇಕೆಂದಿದ್ದೇನೆ. ಇದಕ್ಕೆ ಬಹಳ ಸಮಯ ನೀಡಬೇಕಿದೆ. ಇದನ್ನೆಲ್ಲಾ ಅನುರಾಗ್‌ಗೆ ವಿವರಿಸಿದ್ದೇನೆ' ಎಂದಿದ್ದಾರೆ ಕಂಗನಾ.

2006ರಲ್ಲಿ ಅನುರಾಗ್‌ ನಿರ್ದೇಶನದ ಗ್ಯಾಂಗ್‌ಸ್ಟರ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಕಂಗನಾ ಎಂಟ್ರಿ ಕೊಟ್ಟಿದ್ದರು. ಈಗ ಕಂಗನಾ ತನ್ನ ನಟನೆಯ ಚಿತ್ರವನ್ನು ಸ್ವತಃ ತಾವೇ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌